Kalagi Town Panchayat Election: 'ಕೈ' ಪಾಲಾದ ಕಾಳಗಿ ಪಟ್ಟಣ ಪಂಚಾಯಿತಿ; ಡಾ.ಅವಿನಾಶ್ ಜಾಧವ್‌ಗೆ ಮುಖಭಂಗ
Kalagi Town Panchayat Election: ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ನಗೆ ಬೀರಿ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು. ಈ ಗೆಲುವು ಸ್ಥಳೀಯ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಮತ್ತೊಮ್ಮೆ ಬಲ ತುಂಬಿದೆ.


ವಿಶ್ವವಾಣಿ ಸುದ್ದಿಮನೆ, ಕಾಳಗಿ (ಕಲಬುರಗಿ): ಹೊಸ ತಾಲೂಕು ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ನಡೆದ ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ (Kalagi Town Panchayat Election) ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಕಳೆದ ಆಗಸ್ಟ್ 17ರಂದು ನಡೆದ ಮತದಾನದಲ್ಲಿ ಒಟ್ಟು 11 ಸ್ಥಾನಗಳಿಗೆ ಸ್ಪರ್ಧೆ ನಡೆದಿದ್ದು, ಕಾಂಗ್ರೆಸ್ 6 ಸ್ಥಾನಗಳನ್ನು ಮತ್ತು ಬಿಜೆಪಿ 5 ಸ್ಥಾನಗಳನ್ನು ಗೆದ್ದುಕೊಂಡಿದೆ.
ವಾರ್ಡ್ ನಂ. 5ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 2 ಮತಗಳ ಅಂತರದಿಂದ ಸೋಲುಂಡಿರುವುದು ಗಮನಾರ್ಹ. ವಾರ್ಡ್ ನಂ. 1, 2, 3, 6, 7 ಮತ್ತು 8ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರೆ, ವಾರ್ಡ್ ನಂ. 4, 5, 9, 10 ಮತ್ತು 11ರಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ಈ ಚುನಾವಣೆಯಲ್ಲಿ ಹಾಲಿ ಶಾಸಕ ಅವಿನಾಶ್ ಜಾಧವಗೆ ಭಾರೀ ಮುಖಭಂಗ ಉಂಟಾಗಿದೆ. ಶಾಸಕರ ಪ್ರಭಾವಕ್ಕಿಂತ ಕಾಂಗ್ರೆಸ್ ಶಕ್ತಿ ಹೆಚ್ಚಾಗಿ ತೋರಿ ಫಲಿತಾಂಶ ಕಾಂಗ್ರೆಸ್ ಪರವಾಗಿ ಹೊರಬಂದಿದೆ.
ಕಾಂಗ್ರೆಸ್ ಪರ ಜಯ ಸಾಧಿಸಲು ಎಂಎಲ್‌ಸಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ್ ಗುತ್ತೇದಾರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸುಭಾಷ ರಾಥೋಡ್ ಅವರ ಸಂಘಟನಾ ಶಕ್ತಿ ಮತ್ತು ತಂತ್ರಗಾರಿಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ.
ಫಲಿತಾಂಶ ಹೊರಬಂದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ನಗೆ ಬೀರಿ ಪಟ್ಟಣದಲ್ಲಿ ಜಯೋತ್ಸವ ಆಚರಿಸಿದರು. ಈ ಗೆಲುವು ಸ್ಥಳೀಯ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಮತ್ತೊಮ್ಮೆ ಬಲ ತುಂಬಿದೆ.
ಜಯಗಳಿಸಿದ ಅಭ್ಯರ್ಥಿಗಳ ವಿವರ
ಕಾಂಗ್ರೆಸ್:
- ವಾರ್ಡ್ ನಂ. 1 – ಗುರುರಾಜ
- ವಾರ್ಡ್ ನಂ. 2 – ಬಸವರಾಜ
- ವಾರ್ಡ್ ನಂ. 3 – ಲಲಿತಾಬಾಯಿ ಸಿದ್ರಾಮಪ್ಪ ಕಮಲಾಪೂರ
- ವಾರ್ಡ್ ನಂ. 6 – ಸಹಲಿಯಾ ಬೇಗಂ ಬಿಜಾಪೂರ
- ವಾರ್ಡ್ ನಂ. 7 – ಶರಣಪ್ಪ ಬೇಲೂರ
- ವಾರ್ಡ್ ನಂ. 8 – ಉಷಾರಾಣಿ ದತ್ತಾತ್ರೇಯ ಗುತ್ತೇದಾರ
ಬಿಜೆಪಿ:
- ವಾರ್ಡ್ ನಂ. 4 – ಪಾರ್ವತಿ ಗಂಡ ಜಗನ್ನಾಥ
- ವಾರ್ಡ್ ನಂ. 5 – ರವಿದಾಸ ಎಸ್. ಪತಂಗೆ
- ವಾರ್ಡ್ ನಂ. 9 – (ವಿವರ ಲಭ್ಯವಿಲ್ಲ)
- ವಾರ್ಡ್ ನಂ. 10 – ವಿಜಯಕುಮಾರ ಶಂಕರ ಜಾಧವ
- ವಾರ್ಡ್ ನಂ. 11 – ಪೂಜಾ ರಾಜು ರಾಠೋಡ
ಈ ಸುದ್ದಿಯನ್ನೂ ಓದಿ | BY Vijayendra: ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ NDA ಅಭ್ಯರ್ಥಿಗಳ ಗೆಲುವು: ವಿಜಯೇಂದ್ರ ಅಭಿನಂದನೆ
ಅಂಕಿ ಅಂಶಗಳು:
ಒಟ್ಟು ಸ್ಥಾನಗಳು: 11
ಕಾಂಗ್ರೆಸ್: 6
ಬಿಜೆಪಿ: 5