ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sharanabasappa Appa: ಶಿಕ್ಷಣ ಕ್ರಾಂತಿಯ ಹರಿಕಾರನ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ; ಅಂತ್ಯಕ್ರಿಯೆ ಯಾವಾಗ?

ಕಲಬುರಗಿಯ ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪ (Sharanabasappa Appa) ಲಿಂಗೈಕ್ಯರಾಗಿದ್ದಾರೆ. ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರು ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೇಯ 8ನೇ ಪಿಠಾಧಿಪತಿ ಆಗಿದ್ದರು. ಅಂತಿಮ ವಿಧಿವಿಧಾನದ ಬಳಿಕ 9ನೇ ಪೀಠಾಧಿಪತಿಗೆ ಅಧಿಕಾರ ಹಸ್ತಾಂತರವಾಗಲಿದೆ.

ಶಿಕ್ಷಣ ಕ್ರಾಂತಿಯ ಹರಿಕಾರನ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ

Vishakha Bhat Vishakha Bhat Aug 15, 2025 10:53 AM

ಕಲಬುರಗಿಯ ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪ (Sharanabasappa Appa) ಲಿಂಗೈಕ್ಯರಾಗಿದ್ದಾರೆ. ಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರು ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ದಾಸೋಹ ಮಹಾಮನೇಯ 8ನೇ ಪಿಠಾಧಿಪತಿ ಆಗಿದ್ದರು. ನಿನ್ನೆ ರಾತ್ರಿ 9.23 ಕ್ಕೆ ಡಾ ಶರಣಬಸಪ್ಪ ಅಪ್ಪಾ ಲಿಂಗೈಕ್ಯರಾಗಿದ್ದಾರೆ. ಅವರ ಶಿವಾನುಭವ ಮಂಟಪದಲ್ಲಿ ಅವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದಲ್ಲಿ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದ್ದು ಶ್ರೀ ಡಾ.ಶರಣಬಸಪ್ಪ ಅಪ್ಪ ಅಂತಿಮ ದರ್ಶನಕ್ಕೆ ನೂರಾರು ಜನ ಭಕ್ತರು ಆಗಮಿಸುತ್ತಿದ್ದಾರೆ.

ಅಂತಿಮ ವಿಧಿವಿಧಾನದ ಬಳಿಕ 9ನೇ ಪೀಠಾಧಿಪತಿಗೆ ಅಧಿಕಾರ ಹಸ್ತಾಂತರವಾಗಲಿದೆ. ಚಿರಂಜಿವಿ ದೊಡ್ಡಪ್ಪ ಅಪ್ಪ (೯) ಶರಣ ಸಂಸ್ಥಾನದ 9 ನೇ ಪೀಠಾಧಿಪತಿಯಾಗಲಿದ್ದಾರೆ. ಸಂಜೆ 5 ಗಂಟೆಗೆ ಅಪ್ಪ ಅವರ ಅಂತ್ಯಸಂಸ್ಕಾರ ನಡೆಯಲಿದೆ. ಶರಣಬಸವೇಶ್ವರ ಮಹಾಸಂಸ್ಥಾನದ 8ನೇ ಪೀಠಾಧಿಪತಿಯಾಗಿದ್ದ ಡಾ.ಶರಣಬಸಪ್ಪ ಅಪ್ಪ ಅಂತಿಮ ವಿಧಿವಿಧಾನದ ಬಳಿಕ 9ನೇ ಪೀಠಾಧಿಪತಿಗೆ ಅಧಿಕಾರ ಹಸ್ತಾಂತರ ನಡೆಯಲಿದೆ. ಸಂಜೆ ಸುಮಾರು 5 ಗಂಟೆಗೆ ಇವರ ಅಂತ್ಯಸಂಸ್ಕಾರ ನಡೆಯಲಿದೆ.

ಪೂಜ್ಯ ದೊಡ್ಡಪ್ಪ ಅಪ್ಪ ಹಾಗೂ ಮಾತೋಶ್ರೀ ಗೋದುತಾಯಿ ಅವ್ಪಾಗೆ 14-11-1935 ರಂದು ಜನಿಸಿದ್ದ ಇವರು, ತಮ್ಮ ತಂದೆಯನ್ನು ಮಾದರಿಯಾಗಿಸಿಕೊಂಡಿದ್ದರು. 14ನೇ ವಯಸ್ಸಿನಲ್ಲಿ ಡಾ.ಅಪ್ಪಾ ಅವರು ಮುಗುಳನಾಗಾವಿ ಪಟ್ಟದೇವರು ಶ್ರೀ ಸಿದ್ದಲಿಂಗ ಶಿವಾಚಾರ್ಯರಿಂದ ಧಾರ್ಮಿಕ ತರಬೇತಿ ಪಡೆದರು. ಡಾ.ಶರಣಬಸವಪ್ಪ ಅಪ್ಪಾ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣ, ಪಿಯು ಮತ್ತು ಬಿಎ ಪದವಿ ಶಿಕ್ಷಣವನ್ನು ಕಲಬುರಗಿಯಲ್ಲಿ ಪೂರ್ಣಗೊಳಿಸಿದರು. ಬಳಿಕ ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂಎ ತತ್ವಜ್ಞಾನ ಅಧ್ಯಯನ ಪೂರ್ಣ‌ಗೊಳಿಸಿದರು. ಧಾರವಾಡದಲ್ಲಿ 1953ರಲ್ಲಿ ಎಂಎ ತತ್ವಜ್ಞಾನ ಅಧ್ಯಯನ ಮುಗಿಸಿ ಕಲಬುರಗಿಗೆ ವಾಪಸ್ ಬಂದು, ವೀರಶೈವ ತತ್ವಜ್ಞಾನ ಜೊತೆಗೆ ಸಂಸ್ಕೃತ ಅಧ್ಯಯನ ಮಾಡಿದರು.

ಶಿಕ್ಷಣ ಕ್ರಾಂತಿಯ ಹರಿಕಾರ ಎಂದೇ ಕರೆಸಿಕೊಂಡಿರುವ ಇವರು, 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಪ್ರಾರಂಭಿಸಿದರು. IAS ಮತ್ತು IPS ತರಬೇತಿ ಕೇಂದ್ರ ಸ್ಥಾಪನೆ ಮಾಡಿದರು. ಜೊತೆಗೆ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದರು. 1935 ರಲ್ಲಿ ಮಹಾದೇವಿ ಕನ್ಯಾಪ್ರೌಢಶಾಲೆ ಸ್ಥಾಪನೆ ಮಾಡಿದರು. ಮಹಿಳೆಯರಿಗಾಗಿ ಪ್ರತ್ಯೇಕ ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಿದ್ದರು. 2017ರಲ್ಲಿ ಶರಣಬಸವ ವಿಶ್ವವಿದ್ಯಾಲಯ ಪ್ರಾರಂಭ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: ೧೨ ನೇ ಶತಮಾನದ ಶರಣ -ಶರಣಿಯರು ಸಮ-ಸಮಾಜದ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ

ಇಂದು ಸಂಜೆ ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ದಿ.ಪೂಜ್ಯ ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಸಮಾಧಿಯ ಪಕ್ಕದಲ್ಲಿ ಸಂಜೆ 5 ಗಂಟೆಗೆ ಇವರ ಅಂತ್ಯಕ್ರಿಯೆ ನಡೆಯಲಿದೆ. ವಿವಿಧ ಮಠಾಧೀಶರು‌ ಒಂಭತ್ತು ವರ್ಷದ ದೊಡ್ಡಪ್ಪ ಅಪ್ಪರಿಗೆ ಪೀಠಾಧಿಪತಿ ಮಾಡಲಿದ್ದಾರೆ. ಸಂಜೆ 5.30 ಕ್ಕೆ ವೀರಶೈವ ಲಿಂಗಾಯತ ಧರ್ಮದ ವಿಧಿ ವಿಧಾನದಂತೆ ಡಾ. ಶರಣಬಸಪ್ಪ ಅಪ್ಪ ಅಂತಿಮ ಕ್ರಿಯೆ ನಡೆಯಲಿದೆ.