Kalaburagi Murder Case: ಕಲಬುರಗಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಭೀಕರ ಹತ್ಯೆ; ಶವವನ್ನು ಸುಟ್ಟು ಹಾಕಿದ ದುಷ್ಕರ್ಮಿಗಳು!
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಇತ್ತೀಚೆಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಕೊಲೆಯಾದ ಮಹಿಳೆ ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾದ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ ಎಂದು ತಿಳಿದುಬಂದಿದೆ.
ಕೊಲೆಯಾದ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ -
ಕಲಬುರಗಿ: ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಶವದ ಗುರುತು ಪತ್ತೆಯಾಗಿದೆ. ಕೊಲೆಯಾದವರು (Kalaburagi Murder Case) ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾದ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ ಎಂದು ತಿಳಿದುಬಂದಿದೆ. ಮಾರಕಾಸ್ತ್ರಗಳಿಂದ ಶಿಕ್ಷಕಿಯನ್ನು ಕೊಚ್ಚಿಕೊಂದು, ಶವವನ್ನು ದುಷ್ಕರ್ಮಿಗಳು ಸುಟ್ಟುಹಾಕಿದ್ದರು ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿದೆ.
ಜ್ಯೋತಿ ಕಪಾಳೆ ಹಿರೇಮಠ (57) ಅವರು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಬೀದರ್‌ನಲ್ಲೇ ಮನೆ ಮಾಡಿ ಶಾಲೆಗೆ ಹೋಗಿಬರುತ್ತಿದ್ದ ಜ್ಯೋತಿ ವಾರಕ್ಕೊಂದು ಬಾರಿ ಕಲಬುರಗಿಗೆ ಬಂದು ವಾಪಸ್ ತೆರಳುತ್ತಿದ್ದರು.
ಕಲಬುರಗಿಯಿಂದ ಬೀದರ್ ತೇರಳುವಾಗ ಮಾರ್ಗ ಮಧ್ಯದ ಕಮಲಾಪುರದ ಕಲ್ಮೂಡನಲ್ಲಿ ಜ್ಯೋತಿಯನ್ನು ಕೊಲೆಗೈದ ದುಷ್ಕರ್ಮಿಗಳು, ರಸ್ತೆ ಪಕ್ಕದಲ್ಲಿ ಐದು ಲೀಟರ್ ಪೆಟ್ರೋಲ್ ಹಾಕಿ ಶವವನ್ನು ಸುಟ್ಟಿದ್ದಾರೆ.
ಈ ಕುರಿತು ಪೊಲೀಸರು ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ವೇಳೆಯಲ್ಲಿ ಕಲಬುರಗಿ ನಿವಾಸಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Road Accident: ಬೈಕ್‌ಗೆ ಬೊಲೆರೋ ಡಿಕ್ಕಿ, ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಸಾವು
ಹಾವೇರಿಯಲ್ಲಿ ಟ್ರ್ಯಾಕ್ಟರ್ ಹರಿದು 2 ವರ್ಷದ ಮಗು ಸಾವು
ಹಾವೇರಿ: ಮನೆಯ ಮುಂದೆ ನಿಂತಿದ್ದ 2 ವರ್ಷದ ಮಗುವಿನ ಮೇಲೆ
ಟ್ರ್ಯಾಕ್ಟರ್ ಹರಿದು ಮನೆ ಮುಂದೆ ನಿಂತಿದ್ದ 2 ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹಳೆಬಂಕಾಪುರ ಗ್ರಾಮದಲ್ಲಿ ನಡೆದಿದೆ. ಮೃತ ಮಗುವನ್ನ ರಬೀಯಾ ದೊಡ್ಡಮನಿ ಎಂದು ಗುರುತಿಸಲಾಗಿದೆ.
ಮನೆಯ ಮುಂದೆ ನಿಂತಿದ್ದ ಮಗುವಿನ ಮೇಲೆ ಏಕಾಏಕಿ ಟ್ರ್ಯಾಕ್ಟರ್ ಹರಿದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ. ಘಟನೆ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.