Physical Abuse: ಕಲಬುರಗಿಯಲ್ಲಿ ಪೈಶಾಚಿಕ ಕೃತ್ಯ; ಆಸ್ಪತ್ರೆಯಲ್ಲೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸಿಬ್ಬಂದಿ!
Kalaburagi News: ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಂದೆಯ ಆರೈಕೆಗೆ ಆಸ್ಪತ್ರೆಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ವೇಳೆ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪರಿಚಯಸ್ಥ ಸಿಬ್ಬಂದಿಯೊಬ್ಬ ಹೀನ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


ಕಲಬುರಗಿ: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದೆ. ಕಲಬುರಗಿಯ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ (Physical Abuse) ನಡೆದಿದ್ದು, ಈ ಬಗ್ಗೆ ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ತಂದೆಯ ಆರೈಕೆಗೆ ಅಪ್ರಾಪ್ತ ವಯಸ್ಸಿನ ಬಾಲಕಿ ಬಂದಿದ್ದಳು. ಈ ವೇಳೆ ಆಕೆಯ ಮೇಲೆ ಆಸ್ಪತ್ರೆಯ ಸಿಬ್ಬಂದಿಯೊಬ್ಬ ಹೀನ ಕೃತ್ಯ ಎಸಗಿದ್ದಾನೆ.
ತಾಯಿ ವಿಶೇಷಚೇತನರಾದ ಹಿನ್ನೆಲೆಯಲ್ಲಿ ಬಾಲಕಿ ತಂದೆಯ ಆರೈಕೆಗಾಗಿ ಆಸ್ಪತ್ರೆಗೆ ಬಂದಿದ್ದಳು. ಈ ವೇಳೆ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಒಂದು ವಾರದಿಂದ ತಂದೆ ಮತ್ತು ಮಗಳು ಆಸ್ಪತ್ರೆಯಲ್ಲಿದ್ದರು. ಅವರದೇ ಊರಿನ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಬಟ್ಟೆ, ಮತ್ತಿತರ ವಸ್ತುಗಳನ್ನು ತರಲು ಮಗಳನ್ನು ಕಳುಹಿಸಿ ಎಂದು ಕರೆದೊಯ್ದು ವ್ಯಕ್ತಿ, ಬಾಲಕಿಯ ಆರ್ಥಿಕ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವೈದ್ಯಕೀಯ ಕಾಲೇಜಿನ ವಿಶ್ರಾಂತಿ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿ ಸಂಪತ್ ಕೆವಡೆಕರ್‌ನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Physical Assault: ಅನ್ಯಕೋಮಿನ ಯುವಕನೊಂದಿಗೆ ಅರೆನಗ್ನ ಸ್ಥಿತಿಯಲ್ಲಿ ಯುವತಿ-ಜನ ಸೇರ್ತಿದ್ದಂತೆ ರೇಪ್ ಎಂದು ಯೂಟರ್ನ್ ಹೊಡೆದ್ಳು!
ಅಶ್ಲೀಲ ಫೋಟೋ ವೈರಲ್ ಮಾಡುವ ಬೆದರಿಕೆ; 3 ತಿಂಗಳಲ್ಲಿ 19 ಕೋಟಿ ರೂ ಕಳೆದುಕೊಂಡ ವೈದ್ಯೆ

ಗಾಂಧಿನಗರ: ದೇಶದಲ್ಲಿ ಡಿಜಿಟಲ್ ಅರೆಸ್ಟ್ (Digital Arrest) ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ. ಅನಕ್ಷರಸ್ಥರಿಗೆ ಹೊಲೀಸಿದರೆ ಅಕ್ಷರಸ್ಥರೇ ಸೈಬರ್ ಕ್ರೈಂಗೆ ಒಳಗಾಗುತ್ತಿದ್ದಾರೆ. ಇದೀಗ ಅಂತಹುದೇ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗುಜರಾತ್‌ನ ಗಾಂಧಿನಗರದ ವೈದ್ಯೆಯೊಬ್ಬರಿಗೆ ವ್ಯಕ್ತಿಯೋರ್ವ ನಕಲಿ ಪೊಲೀಸರ ರೂಪದಲ್ಲಿ ಬರೋಬ್ಬರಿ 3 ತಿಂಗಳಲ್ಲಿ 19 ಕೋಟಿ ರೂ ಸುಲಿಗೆ ಮಾಡಿದ್ದಾನೆ. ಗಾಂಧಿನಗರದ ವೈದ್ಯೆಯೊಬ್ಬರಿಗೆ ಮೊದಲು ಮಾರ್ಚ್ 15 ರಂದು, ಫೋನ್ ಕರೆ ಮಾಡಲಾಗಿದೆ. ನಿಮ್ಮ ಅಶ್ಲೀಲ ಚಿತ್ರಗಳು ನಮ್ಮ ಬಳಿ ಇದೆ. ಇದನ್ನು ವೈರಲ್ ಮಾಡುತ್ತೇವೆಂದು ಬೆದರಿಕೆ ಹಾಕಿದ್ದರು. ತಮ್ಮನ್ನು ತಾವು ಸಬ್-ಇನ್ಸ್‌ಪೆಕ್ಟರ್, ಪಬ್ಲಿಕ್ ಪ್ರಾಸಿಕ್ಯೂಟರ್ ಎಂದು ಹೇಳಿಕೊಂಡಿದ್ದರು.
ಕೊನೆಗೆ ಯಾವುದೇ ಬೇರೆ ದಾರಿಯಲ್ಲಿದೆ, ಆ ವೈದ್ಯೆ ಮೂರು ತಿಂಗಳ ಅವಧಿಯಲ್ಲಿ ತನ್ನ ಜೀವಮಾನದ ಉಳಿತಾಯ ಮತ್ತು ಆಸ್ತಿಯಲ್ಲಿ 19 ಕೋಟಿ ರೂ.ಗಳನ್ನು 35 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದಾರೆ. ತಮ್ಮ ಚಿನ್ನಾಭರಣವನ್ನು ಅಡವಿಟ್ಟು ವಂಚಕರಿಗೆ ಅವರು ಹಣ ನೀಡಿದ್ದಾರೆ. ವಿಡಿಯೋ ಕರೆಗಳ ಮೂಲಕ ಮಾನಸಿಕವಾಗಿ ಅವರಿಗೆ ಹಿಂಸೆ ನೀಡಲಾಗುತ್ತಿತ್ತು. ಸತತ ಮೂರು ತಿಂಗಳ ಬಳಿಕ ಆರೋಪಿಗಳು ಏಕಾಏಕಿ ಕರೆ ಮಾಡುವುದನ್ನು ನಿಲ್ಲಿಸಿದ್ದರು.
ಇದಾದ ಬಳಿಕ ಆ ವೈದ್ಯೆ ನಡೆದ ಘಟನೆಯನ್ನು ತನ್ನ ಸಂಬಂಧಿಯೊಬ್ಬರಿಗೆ ತಿಳಿಸಿದ್ದಾರೆ. ಬಳಿಕ ಅದು ಸುಳ್ಳು ಕರೆ ಎಂದು ತಿಳಿದು ಬಂದಿದೆ. ಡಿಜಿಟಲ್ ಅರೆಸ್ಟ್ ಮೂಲಕ ಆಕೆಯ ಬಳಿಯಿದ್ದ ಹಣವನ್ನು ಸುಲಿಗೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಜುಲೈ 16 ರಂದು ವೈದ್ಯೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ, ಗುಜರಾತ್‌ನ ಸಿಐಡಿ ಅಪರಾಧದ ಸೈಬರ್ ಸೆಲ್ ತನಿಖೆ ಪ್ರಾರಂಭಿಸಿ, ಸೂರತ್‌ನಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧನದ ವೇಳೆ ಆತನ ಬಳಿ ಸುಮಾರು 1 ಕೋಟಿ ರೂ. ಇತ್ತು ಎಂದು ತಿಳಿದು ಬಂದಿದೆ. ಈ ಜಾಲವನ್ನು ಬಯಲು ಮಾಡಲು ಮತ್ತು ಹಗರಣದಲ್ಲಿ ಭಾಗಿಯಾಗಿರುವ ಹೆಚ್ಚುವರಿ ವ್ಯಕ್ತಿಗಳನ್ನು ಗುರುತಿಸಲು ಶಂಕಿತನನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Digital Arrest: ಡಿಜಿಟಲ್ ಆರೆಸ್ಟ್ ಹೆಸರಿನಲ್ಲಿ ಇಬ್ಬರು ಯುವತಿಯರನ್ನು ವಿವಸ್ತ್ರಗೊಳಿಸಿ ಕಿರುಕುಳ
ಇದು ಭಾರತದ ಅತಿದೊಡ್ಡ ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಒಂದಾಗಿರಬಹುದು, ಒಬ್ಬ ವ್ಯಕ್ತಿಯಿಂದ ಇಷ್ಟು ದೊಡ್ಡ ಮೊತ್ತದ ವಂಚನೆ ನಡೆದಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಕದ್ದ ಹಣವನ್ನು ಮರುಪಡೆಯುವುದು ಇನ್ನೂ ಒಂದು ಸವಾಲಾಗಿದ್ದು, ಹಣದ ಒಂದು ಭಾಗ ಮಾತ್ರ ಶಂಕಿತನ ಖಾತೆಗೆ ಹೋಗಿದೆ. ವಿವಿಧ ಖಾತೆಗಳಲ್ಲಿ ಹರಡಿರುವ ಉಳಿದ ಹಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.