kalaburagi news: ಕಲಬುರಗಿಯಲ್ಲಿ ರಥದ ಚಕ್ರ ಮೈಮೇಲೆ ಹರಿದು ಭಕ್ತನ ದುರ್ಮರಣ
ರಥ ಎಳೆಯುವ ಸಂದರ್ಭದಲ್ಲಿ ಭಕ್ತರ ನೂಕುನುಗ್ಗಲಿನಲ್ಲಿ ವಿನೋದ ರೆಡ್ಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಚಲಿಸುತ್ತಿದ್ದ ರಥದ ಬೃಹತ್ ಚಕ್ರವು ನೇರವಾಗಿ ವಿನೋದ ರೆಡ್ಡಿ ತೊಡೆಯ ಮೇಲಿಂದ ಹರಿದು ಹೋಗಿದೆ. ಚಕ್ರದಡಿ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ.
ಸಾಂದರ್ಭಿಕ ಚಿತ್ರ -
ಕಲಬುರಗಿ, ಏ.08 : ಇತ್ತೀಚಿಗೆ ತಾನೇ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jevargi) ತಾಲೂಕಿನ ಅರಳಗುಂಡಗಿಯಲ್ಲಿ ಶರಣಬಸವೇಶ್ವರ ರಥೋತ್ಸವದಲ್ಲಿ ಮಹಿಳೆ ಮೇಲೆ ಚಕ್ರ ಹರಿದು ಕಾಲು ಕಳೆದುಕೊಂಡ ಘಟನೆ ನಡೆದಿತ್ತು. ಇದೀಗ ರಥದ ಚಕ್ರದಡಿ ಸಿಲುಕಿ ಭಕ್ತನೋರ್ವ ಭೀಕರವಾಗಿ ದುರ್ಮರಣಕ್ಕೀಡಾದ (Death) ಘಟನೆ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದಿದೆ.
ಹಾಗರಗುಂಡಗಿ ಗ್ರಾಮದ ನಿವಾಸಿಯಾಗಿರುವ ವಿನೋದ ರೆಡ್ಡಿ(49) ಶ್ರೀ ಶರಣಬಸವೇಶ್ವರ ದೇವರ ರಥದ ಚಕ್ರದಡಿ ಸಿಲುಕಿ ಮೃತಪಟ್ಟಿರುವ ದುರ್ದೈವಿ. ನಿನ್ನೆ ಸಂಜೆ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ದೇವರ ರಥೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯುತ್ತಿತ್ತು. ಸಾವಿರಾರು ಭಕ್ತರು ಆಗಮಿಸಿದ್ದರು. ಜಯಘೋಷ ಹಾಕುತ್ತಾ ರಥವನ್ನು ಎಳೆಯುತ್ತಿದ್ದಾಗ ದುರಂತ ನಡೆದುಹೋಗಿದೆ.
ರಥ ಎಳೆಯುವ ಸಂದರ್ಭದಲ್ಲಿ ಭಕ್ತರ ನೂಕುನುಗ್ಗಲಿನಲ್ಲಿ ವಿನೋದ ರೆಡ್ಡಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದುರದೃಷ್ಟವಶಾತ್ ಚಲಿಸುತ್ತಿದ್ದ ರಥದ ಬೃಹತ್ ಚಕ್ರವು ನೇರವಾಗಿ ವಿನೋದ ರೆಡ್ಡಿ ತೊಡೆಯ ಮೇಲಿಂದ ಹರಿದು ಹೋಗಿದೆ. ಚಕ್ರದಡಿ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವವಾಗಿದ್ದು, ವಿನೋದ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಫರತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Nanjangud Rathotsava: ನಂಜನಗೂಡು ರಥೋತ್ಸವದ ವೇಳೆ ನೂಕುನುಗ್ಗಲು; ಅಸ್ವಸ್ಥಗೊಂಡು ಓರ್ವ ಭಕ್ತ ಸಾವು, ಇಬ್ಬರಿಗೆ ಗಾಯ