ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Nanjangud Rathotsava: ನಂಜನಗೂಡು ರಥೋತ್ಸವದ ವೇಳೆ ನೂಕುನುಗ್ಗಲು; ಅಸ್ವಸ್ಥಗೊಂಡು ಓರ್ವ ಭಕ್ತ ಸಾವು, ಇಬ್ಬರಿಗೆ ಗಾಯ

Nanjangud Stampede: ಮೈಸೂರು ಜಿಲ್ಲೆಯ ನಂಜನಗೂಡು ರಥೋತ್ಸವದ ವೇಳೆ ಅವಘಡ ನಡೆದಿದೆ. ಬೆಂಗಳೂರು ಮೂಲದ ನಂಜುಂಡಸ್ವಾಮಿ ಎಂಬುವವರು ಜನರ ಮಧ್ಯೆ ಸಿಲುಕಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಇದೇ ವೇಳೆ ಮತ್ತಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಂಜನಗೂಡು ರಥೋತ್ಸವದ ವೇಳೆ ನೂಕುನುಗ್ಗಲು; ಓರ್ವ ಭಕ್ತ ಸಾವು

ನಂಜನಗೂಡು ರಥೋತ್ಸವದಲ್ಲಿ ಸೇರಿದ್ದ ಜನಸಾಗರ. -

Prabhakara R
Prabhakara R Mar 30, 2026 6:15 PM

ಮೈಸೂರು: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿಯ ಪಂಚಮಹಾರಥೋತ್ಸವದ (Nanjangud Rathotsava) ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಭಕ್ತರೊಬ್ಬರು ಮೃತಪಟ್ಟಿದ್ದು, ತಂದೆ ಮತ್ತು ಮಗ ಗಾಯಗೊಂಡಿದ್ದಾರೆ. ರಥೋತ್ಸವ ವೀಕ್ಷಿಸಲು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಭಾರಿ ನೂಕುನುಗ್ಗಲು ಉಂಟಾಗಿ 56 ವರ್ಷದ ನಂಜುಂಡಸ್ವಾಮಿ ಎಂಬುವವರು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.

ರಥದ ಸುತ್ತ ದೊಡ್ಡಮಟ್ಟದ ಜನಸಮೂಹವಿತ್ತು. ಈ ವೇಳೆ ನಂಜುಂಡಸ್ವಾಮಿ ಅವರು ಜನರ ಮಧ್ಯೆ ಸಿಲುಕಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಮೃತ ನಂಜುಂಡಸ್ವಾಮಿ ಅವರು ಬೆಂಗಳೂರು ಮೂಲದವರಾಗಿದ್ದು, ರಥೋತ್ಸವ ಹಿನ್ನೆಲೆ ನಂಜನಗೂಡಿಗೆ ಬಂದಿದ್ದರು. ಘಟನೆ ಬಗ್ಗೆ ಕುಟುಂಬಸ್ಥರು ತಿಳಿದು ಆಸ್ಪತ್ರೆಗೆ ಧಾವಿಸಿದ್ದಾರೆ.

ಇನ್ನು ನೂಕುನುಗ್ಗಲಿನ ವೇಳೆ ರಂಗಸ್ವಾಮಿ ಮತ್ತು ಮಗ ಅಪ್ಪು ಎಂಬುವವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರೇಯಸಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್​​ನಲ್ಲಿಟ್ಟ ನೌಕಾಪಡೆ ಅಧಿಕಾರಿ

ರಥೋತ್ಸವದ ವೇಳೆ ನೂಕುನುಗ್ಗಲು, ತಳ್ಳಾಟ ಉಂಟಾಗುವುದು ಸಾಮಾನ್ಯ. ಯಾವುದೇ ಕಾಲ್ತುಳಿತ ಉಂಟಾಗಿಲ್ಲ. ಕೆಲವರು ವದಂತಿ ಹಬ್ಬಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ನಿತ್ರಾಣರಾದವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ನಂಜನಗೂಡು ಪೊಲೀಸರು ತಿಳಿಸಿದ್ದಾರೆ.