Kalaburagi is number 1: ನಾಡ ಕಚೇರಿಯಿಂದ ತ್ವರಿತ ಸೇವೆ: ರಾಜ್ಯದಲ್ಲಿಯೇ ಕಲಬುರಗಿ ನಂಬರ್-1
ನಾಡ ಕಚೇರಿಯಿಂದ ಕಂದಾಯ ಇಲಾಖೆಯ 43 ಸೇವೆ ನೀಡಲು ಮೇ -2026ರ ಮಾಹೆಯಲ್ಲಿ ಸ್ವೀಕರಿಸ ಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ 9.48 ವಿಲೇವಾರಿ ಸೂಚ್ಯಂಕದ ಪ್ರಕಾರ ವಿಲೇವಾರಿ ಮಾಡುವ ಮೂಲಕ ಈಶಾನ್ಯದ ತುದಿಯಲ್ಲಿರುವ ಕಲಬುರಗಿ ಜಿಲ್ಲೆ ಸಾರ್ವಜನಿಕರ ಸೇವೆ ವಿಲೇವಾರಿ ಮತ್ತು ಮಾದರಿ ಆಡಳಿತದ ಮೂಲಕ ಮತ್ತೆ ರಾಜ್ಯದ ಗಮನ ಸೆಳೆದಿದೆ.
-
ಕಲಬುರಗಿ: ಅಟಲ್‌ಜೀ ಜನಸ್ನೇಹಿ ಕೇಂದ್ರ (Atalji Janasnehi Kendra) ದ ಮೂಲಕ ಮೇ-2026ರ ಮಾಹೆಯಲ್ಲಿ ಸ್ವೀಕರಿಸಿದ 39,363 ಅರ್ಜಿಗಳಲ್ಲಿ 38,551 ಅರ್ಜಿಗಳನ್ನು ಕಾಲಮಿತಿಯಲ್ಲಿಯೇ ವಿಲೇವಾರಿ ಮಾಡಿ ಶೇ.97.94 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿ ಯಲ್ಲಿ ಕಲಬುರಗಿ ಜಿಲ್ಲೆ ಮತ್ತೆ ನಂಬರ್-1(Kalaburagi is number 1) ಸ್ಥಾನ ಪಡೆದಿದೆ.
ನಾಡ ಕಚೇರಿಯಿಂದ ಕಂದಾಯ ಇಲಾಖೆಯ 43 ಸೇವೆ ನೀಡಲು ಮೇ -2026ರ ಮಾಹೆಯಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗದಿತ ಅವಧಿಯಲ್ಲಿ 9.48 ವಿಲೇವಾರಿ ಸೂಚ್ಯಂಕದ ಪ್ರಕಾರ ವಿಲೇವಾರಿ ಮಾಡುವ ಮೂಲಕ ಈಶಾನ್ಯದ ತುದಿಯಲ್ಲಿರುವ ಕಲಬುರಗಿ ಜಿಲ್ಲೆ ಸಾರ್ವಜನಿಕರ ಸೇವೆ ವಿಲೇವಾರಿ ಮತ್ತು ಮಾದರಿ ಆಡಳಿತದ ಮೂಲಕ ಮತ್ತೆ ರಾಜ್ಯದ ಗಮನ ಸೆಳೆದಿದೆ.
ಕಳೆದ 2025ರ ಜುಲೈ, ಡಿಸೆಂಬರ್ ಮಾಹೆಯಲ್ಲಿಯೂ ಕಲಬುರಗಿ ಜಿಲ್ಲೆ ಅಟಲ್‌ಜೀ ಜನಸ್ನೇಹಿ ಕೇಂದ್ರದಿಂದ ಅರ್ಜಿ ವಿಲೇವಾರಿಯಲ್ಲಿ ಮೊದಲನೇ ಸ್ಥಾನ ಪಡೆದಿತ್ತು. ಇದೀಗ ಮತ್ತೆ ವಿಲೇವಾರಿ ಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದು, ಕಲಬುರಗಿ ಜಿಲ್ಲಾಡಳಿತ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನಲ್ಲಿ ಸ್ವೀಕೃತ 3,572 ರಲ್ಲಿ 3,516, ಆಳಂದನಲ್ಲಿ 4,203 ರಲ್ಲಿ 4,116, ಚಿಂಚೋಳಿಯಲ್ಲಿ ಸ್ವೀಕೃತ 3,326ರಲ್ಲಿ 3,297, ಚಿತ್ತಾಪುರನಲ್ಲಿ ಸ್ವೀಕೃತ 3,355 ರಲ್ಲಿ 3,324, ಜೇವರ್ಗಿಯಲ್ಲಿ ಸ್ವೀಕೃತ 2,078 ರಲ್ಲಿ 2,009, ಕಲಬುರಗಿಯಲ್ಲಿ ಸ್ವೀಕೃತ 10,557 ರಲ್ಲಿ 10,212, ಕಾಳಗಿಯಲ್ಲಿ ಸ್ವೀಕೃತ 2,096 ರಲ್ಲಿ 2,056, ಕಮಲಾಪುರನಲ್ಲಿ ಸ್ವೀಕೃತ 2,754ರಲ್ಲಿ 2,709, ಸೇಡಂನಲ್ಲಿ ಸ್ವೀಕೃತ 3,806ರಲ್ಲಿ 3,750, ಶಹಾಬಾದನಲ್ಲಿ ಸ್ವೀಕೃತ 1,781 ರಲ್ಲಿ 1,761, ಯಡ್ರಾಮಿ ಯಲ್ಲಿ ಸ್ವೀಕೃತ 1,835ರಲ್ಲಿ 1,801 ಅರ್ಜಿ ವಿಲೇವಾರಿ ಮಾಡುವ ಜಿಲ್ಲೆಯ ಜನತೆಗೆ ನಾಡ ಸೇವೆ ಕಚೇರಿ ತ್ವರಿತವಾಗಿ ಸ್ಪಂದಿಸಿದಿರುವುದು ಅಂಕಿ ಅಂಶಗಳು ಖಚಿತಪಡಿಸಿವೆ.
ಜಿಲ್ಲೆಯಲ್ಲಿನ ಈ ಕಾರ್ಯ ಸಾಧನೆಗೆ ನಾಡ ಕಛೇರಿ ಮತ್ತು ಆಟಲ್‌ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಗಳ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಿಬ್ಬಂದಿ ವರ್ಗ ದವರಿಗೆ ಅಭಿನಂದನೆ ಸಲ್ಲಿಸಿರುವ ಡಿ.ಸಿ ಇಕ್ರಮ್ ಶರೀಫ್ ಅವರು, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಾಧನೆ ಮಾಡುವಂತೆ ಹುರಿದುಂಬಿಸಿದಲ್ಲದೆ ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ಮನೋಭಾವ ಬೆಳೆಸಿಕೊಳ್ಳುವಂತೆ ಸಿಬ್ಬಂದಿಗಳಿಗೆ ಕರೆ ನೀಡಿದ್ದಾರೆ.
ಟಾಪ್ 10ನಲ್ಲಿ ಕಲ್ಯಾಣದ 4 ಜಿಲ್ಲೆಗಳು: ಇನ್ನು ರಾಜ್ಯದಾದ್ಯಂತ ಜಿಲ್ಲಾವಾರು ಅರ್ಜಿ ವಿಲೇವಾರಿ ಪಟ್ಟಿ ಅವಲೋಕಿಸಿದಾಗ ಅಗ್ರ 10 ರಲ್ಲಿ ಕಲಬುರಗಿ ನಂಬರ್ 1 ಸ್ಥಾನದಲ್ಲಿದರೆ, ಶೇ.8.71 ವಿಲೇವಾರಿ ಸೂಚ್ಯಂಕದೊಂದಿಗೆ ವಿಜಯನಗರ ಜಿಲ್ಲೆ ಮೂರನೇ, ಶೇ.8.29 ವಿಲೇವಾರಿ ಸೂಚ್ಯಂಕದೊಂದಿಗೆ ಬಳ್ಳಾರಿ ಜಿಲ್ಲೆ ನಾಲ್ಕನೇ ಹಾಗೂ ಶೇ.6.52 ವಿಲೇವಾರಿ ಸೂಚ್ಯಂಕದೊಂದಿಗೆ ರಾಯಚೂರು ಜಿಲ್ಲೆ ಏಳನೇ ಸ್ಥಾನ ಪಡೆದಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ 4 ಜಿಲ್ಲೆಗಳು ಸಾರ್ವಜನಿಕ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಂತಾಗಿದೆ.