Bhuvneshwar Kumar: ಬೌಲರ್‌ಗಳ ಕೆಲಸದ ಒತ್ತಡ ನಿಭಾಯಿಸುವ ಬಿಸಿಸಿಐ ಕ್ರಮ ಸಮರ್ಥಿಸಿದ ಭುವನೇಶ್ವರ್
‘ಪೋಡ್‌ಕಾಸ್ಟ್ ಟಾಕ್’ನೊಂದಿಗೆ ಮಾತನಾಡಿದ ಭುವನೇಶ್ವರ್, ಬುಮ್ರಾ ವಿಶ್ರಾಂತಿ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ‘‘ಬುಮ್ರಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಎಷ್ಟು ವರ್ಷದಿಂದ ಆಡುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಬೇಕು. ಈ ಎಲ್ಲ ಮಾದರಿಯಲ್ಲಿ ಆಡುವುದು ಕಷ್ಟಕರ. ಬುಮ್ರಾ ಹೊಂದಿರುವ ಬೌಲಿಂಗ್ ಶೈಲಿಯಿಂದ ಅವರಿಗೆ ಗಾಯವಾಗಬಹುದು’’ ಎಂದರು.

ನವದೆಹಲಿ: ಬೌಲರ್‌ಗಳ ಕೆಲಸದ ಒತ್ತಡವನ್ನು ನಿಭಾಯಿಸುವ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಭಾರತದ ವೇಗಿ ಭುವನೇಶ್ವರ ಕುಮಾರ್(Bhuvneshwar Kumar) ಅವರು ಜಸ್‌ಪ್ರಿತ್ ಬುಮ್ರಾ(Jasprit Bumrah)ರ ಬೆಂಬಲಕ್ಕೆ ನಿಂತಿದ್ದಾರೆ. ಜಸ್‌ಪ್ರೀತ್ ಬುಮ್ರಾ ಕಾರ್ಯದೊತ್ತಡಕ್ಕೆ ಸಿಲುಕಿದ್ದರೆ ಕಳೆದ ಐಪಿಎಲ್ ಪಂದ್ಯಾವಳಿಯಲ್ಲೇ ವಿಶ್ರಾಂತಿ ಪಡೆಯಬಹುದಿತ್ತು, ಇಂಗ್ಲೆಂಡ್ ಸರಣಿ ವೇಳೆ ವಿಶ್ರಾಂತಿ ಕೊಡುವ ಅಗತ್ಯವಿರಲಿಲ್ಲ ಎಂದು ಮಾಜಿ ಆಟಗಾರ ದಿಲೀಪ್ ವೆಂಗ್‌ಸರ್ಕಾರ್ ಸೇರಿ ಹಲವರು ಹೇಳಿಕೆ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಬುಮ್ರಾಗೆ ಭುವನೇಶ್ವರ ಬೆಂಬಲ ಸೂಚಿಸಿದ್ದಾರೆ.
‘ಪೋಡ್‌ಕಾಸ್ಟ್ ಟಾಕ್’ನೊಂದಿಗೆ ಮಾತನಾಡಿದ ಭುವನೇಶ್ವರ್, ಬುಮ್ರಾ ವಿಶ್ರಾಂತಿ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರು. ‘‘ಬುಮ್ರಾ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಎಷ್ಟು ವರ್ಷದಿಂದ ಆಡುತ್ತಿದ್ದಾರೆ ಎನ್ನುವುದನ್ನು ಪರಿಗಣಿಸಬೇಕು. ಈ ಎಲ್ಲ ಮಾದರಿಯಲ್ಲಿ ಆಡುವುದು ಕಷ್ಟಕರ. ಬುಮ್ರಾ ಹೊಂದಿರುವ ಬೌಲಿಂಗ್ ಶೈಲಿಯಿಂದ ಅವರಿಗೆ ಗಾಯವಾಗಬಹುದು’’ ಎಂದರು.
‘‘ಐದು ಪಂದ್ಯಗಳಲ್ಲಿ ಮೂರರಲ್ಲಿ ಆಡುವುದರಿಂದ ಏನೂ ಸಮಸ್ಯೆ ಇಲ್ಲ. ಆ ಮೂರು ಪಂದ್ಯಗಳಲ್ಲಿ ಬುಮ್ರಾ ಉತ್ತಮವಾಗಿ ಆಡಬಲ್ಲರು ಎಂದು ಆಯ್ಕೆ ಸಮಿತಿಗೆ ಗೊತ್ತಿತ್ತು. ಬುಮ್ರಾ ಅವರು ಎಲ್ಲ ಐದು ಪಂದ್ಯಗಳಲ್ಲಿ ಆಡದೇ ಇದ್ದರೂ ಮೂರು ಪಂದ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ’’ ಎಂದು ಭುವಿ ಹೇಳಿದರು.
ಇದನ್ನೂ ಓದಿ ಜಸ್‌ಪ್ರೀತ್ ಬುಮ್ರಾ ಅಲ್ಲ, ಭಾರತ ತಂಡದ ಅತ್ಯುತ್ತಮ ಬೌಲರ್ ಹೆಸರಿಸಿದ ವಸಿಮ್ ಅಕ್ರಮ್!
‘‘ಹಲವು ವರ್ಷಗಳಿಂದ ಎಲ್ಲ ಮಾದರಿಯ ಕ್ರಿಕೆಟ್ ನಲ್ಲಿ ಆಡುವುದು ಎಷ್ಟು ಕಷ್ಟ ಎನ್ನುವುದು ಜನರಿಗೆ ಅರ್ಥವಾಗುವುದಿಲ್ಲ. ಬುಮ್ರಾ ಯಾವಾಗಲೂ ಕಠಿಣ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡುತ್ತಾರೆ. ಇದರಿಂದ ಮಾನಸಿಕ ಹಾಗೂ ದೈಹಿಕ ಒತ್ತಡ ಉಂಟಾಗುತ್ತದೆ. ದೀರ್ಘ ಸಮಯದ ತನಕ ಆಡಬೇಕಾದರೆ ಕೆಲಸದ ಒತ್ತಡವನ್ನು ನಿಭಾಯಿಸುವುದು ಅಗತ್ಯ’’ ಎಂದು ಭುವನೇಶ್ವರ ಹೇಳಿದರು. 207 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಬುಮ್ರಾ ಅವರು 457 ವಿಕೆಟ್ ಗಳನ್ನು ಉರುಳಿಸಿ ಭಾರತದ ಬೌಲಿಂಗ್ ದಾಳಿಯ ಪ್ರಮುಖ ಅಸ್ತ್ರವಾಗಿ ಉಳಿದುಕೊಂಡಿದ್ದಾರೆ.