ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Lokayukta Raid: ಮೈಸೂರಿನಲ್ಲಿ 7 ಕಡೆ ಲೋಕಾಯುಕ್ತ ದಾಳಿ, ಲಕ್ಷಾಂತರ ಹಣ ಪತ್ತೆ

ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆ ಜೆ.ಇ. ಕೆ.ಆರ್.ಚಂದ್ರಶೇಖರ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ. ಚಂದ್ರಶೇಖರ್‌ಗೆ ಸಂಬಂಧಿಸಿದ ಮೈಸೂರಿನ ವಿಜಯ ನಗರದ ನಿವಾಸ, ಕೆಜಿ ಕೊಪ್ಪಲು ನಿವಾಸ ಹಾಗೂ ಟಿ.ನರಸೀಪುರ ಕಚೇರಿ ಏರಿ 4 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 60 ಲಕ್ಷ ಹಣ ಪತ್ತೆ ಮಾಡಿದ್ದಾರೆ.

ಮೈಸೂರಿನಲ್ಲಿ 7 ಕಡೆ ಲೋಕಾಯುಕ್ತ ದಾಳಿ, ಲಕ್ಷಾಂತರ ಹಣ ಪತ್ತೆ

ಮೈಸೂರಿನಲ್ಲಿ ಲೋಕಾಯುಕ್ತ ದಾಳಿ -

ಹರೀಶ್‌ ಕೇರ
ಹರೀಶ್‌ ಕೇರ Feb 6, 2026 7:22 AM

ಮೈಸೂರು, ಫೆ.06: ನಗರದಲ್ಲಿ (Mysuru) ಲೋಕಾಯುಕ್ತ ಪೊಲೀಸರು (Lokayukta Raid) ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ. ಇಬ್ಬರು ಭ್ರಷ್ಟರಿಗೆ (Corrupt Officer) ಸೇರಿದ ಒಟ್ಟು 7 ಸ್ಥಳದಲ್ಲಿ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು ಮನೆ, ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ ಹಾಗೂ ಟಿ.ನರಸೀಪುರ ಪುರಸಭೆ ಜೆ.ಇ. ಕೆ.ಆರ್.ಚಂದ್ರಶೇಖರ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ನಡೆಸಲಾಗಿದೆ. ಚಂದ್ರಶೇಖರ್‌ಗೆ ಸಂಬಂಧಿಸಿದ ಮೈಸೂರಿನ ವಿಜಯ ನಗರದ ನಿವಾಸ, ಕೆಜಿ ಕೊಪ್ಪಲು ನಿವಾಸ ಹಾಗೂ ಟಿ.ನರಸೀಪುರ ಕಚೇರಿ ಏರಿ 4 ಕಡೆ ಏಕಕಾಲದಲ್ಲಿ ದಾಳಿ ನಡೆಸಿ 60 ಲಕ್ಷ ಹಣ ಪತ್ತೆ ಮಾಡಿದ್ದಾರೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆ ಡೆಫ್ಯುಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಜಕಾರ್ತಿಗೆ ಸೇರಿದ ಎರಡು ನಿವಾಸ ಹಾಗೂ ಕಚೇರಿಯಲ್ಲಿ ಲೊಕಾಯುಕ್ತ ಪೊಲೀಸರ ಶೋಧ ನಡೆಸಿದ್ದಾರೆ.

ಮಹಿಳೆ ಅಪಹರಣ ಕೇಸ್‌: ರೇವಣ್ಣಗೆ ಹೈಕೋರ್ಟ್‌ ಶಾಕ್‌

ಬೆಂಗಳೂರು: ಕೆ.ಆರ್‌. ನಗರ ಮಹಿಳೆಯ ಅಪಹರಣ ಪ್ರಕರಣಕ್ಕೆ (Kidnap Case) ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್‌.ಡಿ.ರೇವಣ್ಣಗೆ (H.D.Revanna) ಹೈಕೋರ್ಟ್‌ ಬಿಗ್‌ ಶಾಕ್‌ ಕೊಟ್ಟಿದೆ. ಪ್ರಕರಣ ರದ್ದು ಕೋರಿದ್ದ ಹೆಚ್.ಡಿ.ರೇವಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸುನಿಲ್‌ ದತ್‌ ಯಾದವ್‌ ಅವರಿದ್ದ ಹೈಕೋರ್ಟ್‌ ಪೀಠ ಆದೇಶ ಹೊರಡಿಸಿದೆ.

ತುಮಕೂರಿನಲ್ಲಿ 40 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ

ಹೆಚ್‌.ಡಿ.ರೇವಣ್ಣ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದ್ದರು. ಹಿರಿಯ ವಕೀಲರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿದ್ದಾರೆಂಬ ಕಾರಣ ನೀಡಿ ಮನವಿ ಮಾಡಿದ್ದರು. ಹೆಚ್.ಡಿ.ರೇವಣ್ಣ ಪರ ವಕೀಲರ‌ ಮನವಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಹೆಚ್.ಡಿ.ರೇವಣ್ಣ ವಿರುದ್ಧ ದೋಷಾರೋಪ ಹೊರಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಕೋರ್ಟ್‌ ತೆರವು ಮಾಡಿದೆ.