ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ; ಅದೃಷ್ಟವಶಾತ್‌ ತಪ್ಪಿದ ಅನಾಹುತ

Chitrakoota Kaushalya School: ಇನ್ನೂ ಶೈಕ್ಷಣಿಕ ವರ್ಷ ಆರಂಭವಾಗದ ಕಾರಣ ಹೆಚ್ಚಿನ ಮಕ್ಕಳು ಶಾಲೆಗೆ ಆಗಮಿಸಿರಲಿಲ್ಲ. ಬೆಂಕಿ ಹೊತ್ತಿದ ಬಳಿಕ ಅಲ್ಲಿದ್ದ ಕೆಲ ಸಿಬ್ಬಂದಿಗಳು ಹೊರಗೆ ಬಂದಿದ್ದು, ಇದರಿಂದಾಗಿ ಅದೃಷ್ಟವಶಾತ್‌ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ

ಬೆಂಗಳೂರಿನ ನಾಗದೇವನಹಳ್ಳಿಯ ಚಿತ್ರಕೂಡ ಕೌಶಲ್ಯ ಶಾಲೆಯಲ್ಲಿ ಬೆಂಕಿ ಅವಘಡ. -

Prabhakara R
Prabhakara R May 30, 2026 2:47 PM

ಬೆಂಗಳೂರು: ನಗರದ ಖಾಸಗಿ ಶಾಲೆಯಲ್ಲಿ ಭಾರಿ ಅಗ್ನಿ ಅವಘಡ (fire accident) ಸಂಭವಿಸಿದೆ. ಶಾಲೆಯ ಆಡಿಟೋರಿಯಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಕಟ್ಟಡದ ಇತರ ಕೊಠಡಿಗಳಿಗೆ ವ್ಯಾಪಿಸಿದೆ. ವಿಶ್ವೇಶ್ವರಯ್ಯ ಲೇಔಟ್ ಬಳಿಯ ನಾಗದೇವನಹಳ್ಳಿಯ ಚಿತ್ರಕೂಡ ಕೌಶಲ್ಯ ಶಾಲೆಯಲ್ಲಿ ಘಟನೆ ನಡೆದಿದೆ.

ಇಂದು ಶಾಲೆಯಲ್ಲಿ ಪೋಷಕರ ಸಭೆ ಕರೆಯಲಾಗಿತ್ತು. 50ಕ್ಕೂ ಹೆಚ್ಚು ಮಕ್ಕಳ ಪೋಷಕರು ಶಾಲೆಗೆ ಆಗಮಿಸಿದ್ದರು. ಬೆಳಗ್ಗೆ 10:15 ರ ಸುಮಾರಿಗೆ ಶಾಲೆಯ 4ನೇ ಮಹಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಶಾಲಾ ಸಿಬ್ಬಂದಿ ಎಲ್ಲಾ ಹೊರಗೆ ಬಂದಿದ್ದಾರೆ. ಬೆಂಕಿಯ ಕೆನ್ನಾಲಿಗೆ 3ನೇ ಮಹಡಿ ಆವರಿಸಿಕೊಂಡಿದೆ. ಶಾಲೆಯ ಮೇಲ್ಭಾಗದಲ್ಲಿ ಹೊಗೆ ಕಂಡು ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಸದ್ಯ ಬೆಂಕಿಯನ್ನ ಅಗ್ನಿಶಾಮಕ ಸಿಬ್ಬಂದಿ ಹತೋಟಿಗೆ ತಂದಿದ್ದಾರೆ. ಸ್ಥಳಕ್ಕೆ ಜ್ಞಾನ ಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಶೈಕ್ಷಣಿಕ ವರ್ಷ ಆರಂಭವಾಗದ ಕಾರಣ ಮಕ್ಕಳು ಶಾಲೆಗೆ ಆಗಮಿಸಿರಲಿಲ್ಲ. ಪೋಷಕರ ಸಭೆ ಕರೆದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಭಾರಿ ಮಳೆಗೆ ಕುಸಿದ ಮನೆಯ ಗೋಡೆ; 7 ಮಂದಿ ಅಪಾಯದಿಂದ ಪಾರು

ಕೋಲಾರ: ಭಾರಿ ಮಳೆಗೆ ಮನೆಯ ಗೋಡೆ ಕುಸಿದಿದ್ದು, ಅದೃಷ್ಟವಶಾತ್ 7 ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕೆಜಿಎಫ್‌ನ ಮಾರಿಕುಪ್ಪಂನ ಕೃಷ್ಣಮೂರ್ತಿ ಎಂಬವರ ಮನೆಯ ಒಂದು ಭಾಗದ ಗೋಡೆ ಸಂಪೂರ್ಣ ಕುಸಿದಿದೆ. ಅಲ್ಲದೇ ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ರಾಬರ್ಟ್ ಸನ್ ಪೇಟೆಯಲ್ಲಿ ಬೃಹತ್ ಮರಗಳು ಧರೆಗುರುಳಿವೆ.

ಮಳೆ ಅವಾಂತರ ಆದರೂ ತಹಸೀಲ್ದಾರ್ ಹಾಗೂ ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.