Abortion: ಅತ್ಯಾಚಾರ ಸಂತ್ರಸ್ತೆಯ 34 ವಾರಗಳ ಭ್ರೂಣದ ಗರ್ಭಪಾತಕ್ಕೆ ಹೈಕೋರ್ಟ್ ನಿರಾಕರಣೆ
34 ವಾರಗಳ ಸುದೀರ್ಘ ಅವಧಿಯ ನಂತರ ಗರ್ಭಪಾತ ಮಾಡುವುದು ಅಕಾಲಿಕ ಹೆರಿಗೆಗೆ ಸಮಾನ. ಇದು ತಾಯಿ ಮತ್ತು ಮಗು ಇಬ್ಬರ ಜೀವಕ್ಕೂ ಗಂಭೀರ ಅಪಾಯ ತಂದೊಡ್ಡಬಹುದು ಎಂದು ವೈದ್ಯಕೀಯ ಮಂಡಳಿ ವರದಿ ನೀಡಿದೆ. ಸಂತ್ರಸ್ತೆ ಲೈಂಗಿಕ ದೌರ್ಜನ್ಯದಿಂದ ಮಾನಸಿಕ ಅಘಾತಕ್ಕೆ ಒಳಗಾಗಿದ್ದರೂ, ಈ ಹಂತದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ವೈದ್ಯಕೀಯವಾಗಿ ಸುರಕ್ಷಿತವಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ -
ಬೆಂಗಳೂರು, ಮಾ.23 : ಅತ್ಯಾಚಾರಕ್ಕೊಳಗಾಗಿ (Physical Abuse) ಗರ್ಭಿಣಿಯಾಗಿರುವ (pregnant) ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯ 34 ವಾರಗಳ ಭ್ರೂಣದ ಗರ್ಭಪಾತಕ್ಕೆ (Abortion) ಅನುಮತಿ ನೀಡಲು ಕರ್ನಾಟಕ ಹೈಕೋರ್ಟ್ (Karnataka High court) ನಿರಾಕರಿಸಿದೆ. ಸಂತ್ರಸ್ತೆಯ ಆರೋಗ್ಯ ಮತ್ತು ಭ್ರೂಣದ ಬೆಳವಣಿಗೆಯನ್ನು ಪರಿಗಣಿಸಿ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ.
ಸಂತ್ರಸ್ತೆಯ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯ ಪೀಠವು, ವೈದ್ಯಕೀಯ ವರದಿಯನ್ನು ಆಧರಿಸಿ ಈ ನಿರ್ಧಾರ ಕೈಗೊಂಡಿದೆ.
34 ವಾರಗಳ ಸುದೀರ್ಘ ಅವಧಿಯ ನಂತರ ಗರ್ಭಪಾತ ಮಾಡುವುದು ಅಕಾಲಿಕ ಹೆರಿಗೆಗೆ ಸಮಾನ. ಇದು ತಾಯಿ ಮತ್ತು ಮಗು ಇಬ್ಬರ ಜೀವಕ್ಕೂ ಗಂಭೀರ ಅಪಾಯ ತಂದೊಡ್ಡಬಹುದು ಎಂದು ವೈದ್ಯಕೀಯ ಮಂಡಳಿ ವರದಿ ನೀಡಿದೆ.
Foeticide: ಮೈಸೂರಿನಲ್ಲಿ ಭ್ರೂಣ ಲಿಂಗ ಪತ್ತೆ ಗ್ಯಾಂಗ್, ಮಹಿಳೆ ಸೇರಿ ಮೂವರು ಆರೆಸ್ಟ್
ಕಾನೂನಿನ ಪ್ರಕಾರ 24 ವಾರಗಳ ನಂತರ ಗರ್ಭಪಾತಕ್ಕೆ ಅವಕಾಶವಿರುವುದು ತಾಯಿಯ ಜೀವಕ್ಕೆ ತೀರಾ ಅನಿವಾರ್ಯತೆ ಇದ್ದಾಗ ಮಾತ್ರ. ಈ ಪ್ರಕರಣದಲ್ಲಿ ಸಂತ್ರಸ್ತೆಯ ದೈಹಿಕ ಸುರಕ್ಷತೆಯೇ ಆದ್ಯತೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಸಂತ್ರಸ್ತೆ ಲೈಂಗಿಕ ದೌರ್ಜನ್ಯದಿಂದ ಮಾನಸಿಕ ಅಘಾತಕ್ಕೆ ಒಳಗಾಗಿದ್ದರೂ, ಈ ಹಂತದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ವೈದ್ಯಕೀಯವಾಗಿ ಸುರಕ್ಷಿತವಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ವೈದ್ಯಕೀಯ ಆರೈಕೆ
ಸಂತ್ರಸ್ತೆಗೆ ಹೆರಿಗೆಯಾಗುವವರೆಗೆ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಮತ್ತು ಗುಣಮಟ್ಟದ ಪ್ರಸವಪೂರ್ವ ಆರೈಕೆಯನ್ನು ಸರ್ಕಾರವೇ ಒದಗಿಸಬೇಕು. ಸಂತ್ರಸ್ತೆಗೆ ಅಗತ್ಯವಾದ ಕೌನ್ಸೆಲಿಂಗ್, ಪುನರ್ವಸತಿ ಸೌಲಭ್ಯ ಹಾಗೂ ಸೂಕ್ತ ಆರ್ಥಿಕ ಪರಿಹಾರವನ್ನು ನೀಡಬೇಕು.
14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಮೌಲ್ವಿ; ಮಗುವಿಗೆ ಜನ್ಮಕೊಟ್ಟ ಅಪ್ರಾಪ್ತೆ!
ದತ್ತು ಪ್ರಕ್ರಿಯೆ: ಒಂದು ವೇಳೆ ಸಂತ್ರಸ್ತೆ ಅಥವಾ ಆಕೆಯ ಪೋಷಕರು ಮಗುವನ್ನು ಸಾಕಲು ಇಚ್ಛಿಸದಿದ್ದಲ್ಲಿ, ಮಗುವಿನ ಜನನದ ನಂತರ ಕಾನೂನುಬದ್ಧವಾಗಿ ದತ್ತು ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ತಿಳಿಸಿದೆ.