ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raichur News: ಭಾರತದಲ್ಲಿ ಗಲಭೆಗೆ ಸಂಚು; ವಿದೇಶಿಗನ ಜತೆ ಸಂಪರ್ಕದಲ್ಲಿದ್ದ ರಾಯಚೂರಿನ ಯುವಕ ಅರೆಸ್ಟ್‌

ಭಾರತದಲ್ಲಿ ಗಲಭೆ ಎಬ್ಬಿಸುವ ಸಂಚು ರೂಪಿಸಿದ ಆರೋಪದಲ್ಲಿ ರಾಯಚೂರಿನ ಟೀ ಸ್ಟಾಲ್‌ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ವಿದೇಶಿ ವ್ಯಕ್ತಿಯ ಪ್ರಚೋದನೆಯ ಮೇರೆಗೆ ರಾಯಚೂರಿನ ಯುವಕ ದುಷ್ಕೃತ್ಯಕ್ಕೆ ಸಿದ್ಧತೆ ನಡೆಸಿದ್ದನಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಾರತದಲ್ಲಿ ಗಲಭೆಗೆ ಸಂಚು; ರಾಯಚೂರಿನ ಟೀ ಸ್ಟಾಲ್‌ ಮಾಲೀಕ ಅರೆಸ್ಟ್‌

-

Prabhakara R
Prabhakara R Aug 9, 2026 7:05 PM

ರಾಯಚೂರು: ಭಾರತದಲ್ಲಿ ಗಲಭೆ ಸೃಷ್ಟಿಸಲು ವಿದೇಶಿಗನ ಜತೆ ಸಂಪರ್ಕದ ಹೊಂದಿದ್ದ ಆರೋಪದಲ್ಲಿ ರಾಯಚೂರಿನ (Raichur) ಯುವಕನೊಬ್ಬನನ್ನು ಸದರಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಾಹಿಲ್(24) ಬಂಧಿತ ಆರೋಪಿ. ಈತ ಟೀ ಸ್ಟಾಲ್ ಇಟ್ಟುಕೊಂಡಿದ್ದು, ಭಾರತದಲ್ಲಿ ಗಲಭೆ ಎಬ್ಬಿಸಲು ಸ್ಕೆಚ್ ಹಾಕಿದ್ದ ಅರಬ್ ಮೂಲದ ವ್ಯಕ್ತಿಯ ಜತೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.

ಇನ್​​ಸ್ಟಾಗ್ರಾಂನಲ್ಲಿ ರಾಣಾ ಭಾಯ್ ಹೆಸರಿನ ವಿದೇಶಿ ವ್ಯಕ್ತಿಯ ಜತೆಗೆ ಮೊಹಮ್ಮದ್ ಶಾಹಿಲ್ ಚಾಟಿಂಗ್​​ ಮಾಡುತ್ತಿದ್ದ. ಅನಾಮಧೇಯ ವ್ಯಕ್ತಿಯ ಪೋಸ್ಟ್​ ನೋಡಿ ಪ್ರಭಾವಿತನಾಗಿದ್ದ ಶಾಹಿಲ್, ರಾಣಾ ಭಾಯ್​ಗೆ ಮೆಸೇಜ್ ಮೂಲಕ ಪಿಸ್ತೂಲ್ ಕೂಡ ಕೇಳಿದ್ದ. ಭಾಯ್ ಮುಝೇ ಏಕ್ ಪಿಸ್ತೂಲ್ ಚಾಹಿಯೇ ಥೀ, ಮಿಲೇಗಿ ಕ್ಯಾ ಎಂದು ಪ್ರಶ್ನಿಸಿದ್ದ ಎನ್ನಲಾಗಿದೆ.

ಬಳಿಕ ಅರಬ್ ಮೂಲದ ವ್ಯಕ್ತಿ ಮೊಹಮ್ಮದ್ ಶಾಹಿಲ್ ನಂಬರ್ ಪಡೆದಿದ್ದ. ಜುಲೈ 14ರಿಂದ ಇಬ್ಬರ ನಡುವೆ ಹತ್ತಾರು ವಿಚಾರಗಳ ಕುರಿತು ಚರ್ಚೆಯಾಗಿದ್ದು, ಈ ವೇಳೆ ಗಲಭೆ ಎಬ್ಬಿಸಲು ರಾಣಾ ಭಾಯ್ ಪ್ರಚೋದನೆ ನೀಡಿದ್ದ. ಗಲಭೆ ಎಬ್ಬಿಸಲು ಎಷ್ಟು ಬೇಕಾದರೂ ಹಣ ಕೊಡುವುದಾಗಿ ಹಾಗೂ ಶಾಹಿಲ್ ಕೇಳಿದಂತೆ ಪಿಸ್ತೂಲ್ ಕೊಡೋದಾಗಿ ಭರವಸೆ ನೀಡಿದ್ದ ಎನ್ನಲಾಗಿದೆ.

ಗರ್ಭಿಣಿ ಪತ್ನಿಯ ಕತ್ತು ಹಿಸುಕಿ ಕೊಲೆ; ಭಾರತೀಯ ಯೋಧನ ಬಂಧನ

ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪದಡಿ ಮೊಹಮ್ಮದ್ ಶಾಹಿಲ್ ವಿರುದ್ಧ ರಾಯಚೂರಿನ ಸದರ್​ಬಜಾರ್ ಪೊಲೀಸ್ ‌ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.