ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Nisha Yogeshwar: ನಾವು ಹುಟ್ಟಿ ಬೆಳೆದ ಮನೆಗೆ ನಮಗೆ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್‌ ಕಣ್ಣೀರು, Video

ಚನ್ನಪಟ್ಟಣದ ತಮ್ಮ ಸ್ವಗೃಹದ ಮುಂದೆ ನಿಂತು ಅಸಹಾಯಕತೆ ವ್ಯಕ್ತಪಡಿಸಿರುವ ನಿಶಾ ಯೋಗೇಶ್ವರ್‌ ಅವರು, ನಾವು ಹುಟ್ಟಿ ಬೆಳೆದ ನಮ್ಮ ಮನೆಗೆ ನಮಗೆ ಪ್ರವೇಶವಿಲ್ಲ. ನಮ್ಮ ಮನೆಗೆ ಈಗ ಬೀಗ ಹಾಕಲಾಗಿದೆ ಎಂದು ಹೇಳಿದ್ದಾರೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ನಾವು ಹುಟ್ಟಿ ಬೆಳೆದ ಮನೆಗೆ ನಮಗೆ ಪ್ರವೇಶವಿಲ್ಲ: ನಿಶಾ ಯೋಗೇಶ್ವರ್‌

ನಿಶಾ ಯೋಗೇಶ್ವರ್‌ ಮತ್ತು ಶಾಸಕ ಸಿ.ಪಿ.ಯೋಗೇಶ್ವರ್‌. -

Prabhakara R
Prabhakara R May 9, 2026 3:23 PM

ಚನ್ನಪಟ್ಟಣ: ಮಾಜಿ ಸಚಿವ ಹಾಗೂ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ (CP Yogeshwara) ಅವರ ಕುಟುಂಬದ ಆಂತರಿಕ ಕಲಹ ಇದೀಗ ಬೀದಿಗೆ ಬಂದಿದೆ. ತಾವು ಹುಟ್ಟಿ ಬೆಳೆದ ಮನೆಗೆ ತಮಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಅವರ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ನೋವು ತೋಡಿಕೊಂಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಿಶಾ ಯೋಗೇಶ್ವರ್‌ ವಿಡಿಯೊ ಹಂಚಿಕೊಂಡಿದ್ದಾರೆ. ಚನ್ನಪಟ್ಟಣದ ತಮ್ಮ ಸ್ವಗೃಹದ ಮುಂದೆ ನಿಂತು ಅಸಹಾಯಕತೆ ವ್ಯಕ್ತಪಡಿಸಿರುವ ನಿಶಾ ಅವರು, "ನಾವು ಹುಟ್ಟಿ ಬೆಳೆದ ನಮ್ಮ ಮನೆಗೆ ನಮಗೆ ಪ್ರವೇಶವಿಲ್ಲ. ನಮ್ಮ ಮನೆಗೆ ಈಗ ಬೀಗ ಹಾಕಲಾಗಿದೆ" ಎಂದು ಅವರು ಹೇಳಿದ್ದಾರೆ.

ನಮ್ಮ ಊರ ಹಬ್ಬ ಆಚರಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಆದರೆ, ನಮ್ಮ ಮನೆಗೆ ಹೋಗಲು ನಮಗೇ ಅವಕಾಶ ನೀಡುತ್ತಿಲ್ಲ. ಮಧ್ಯಾಹ್ನ 3 ಗಂಟೆಗೆ ಬಂದವರು ನಾವು. ರಾತ್ರಿ 8 ಗಂಟೆಯಾದರೂ ಮನೆ ಬೀಗ ತೆಗೆದಿಲ್ಲ ಎಂದು ನಿಶಾ ಯೋಗೇಶ್ವರ್ ಅಳಲು ತೋಡಿಕೊಂಡಿರುವುದು ವಿಡಿಯೊದಲ್ಲಿದೆ.

ವಿಡಿಯೋದಲ್ಲಿ ನಿಶಾ ಅವರು ತಮ್ಮ ಮನೆಯ ಗೇಟ್ ಮುಂದೆ ನಿಂತಿದ್ದು, ಗೇಟ್‌ಗೆ ಬೀಗ ಹಾಕಿರುವುದನ್ನು ಕಾಣಬಹುದು. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಅನೇಕರು ಸ್ವಂತ ಮಕ್ಕಳಿಗೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದರೆ, ಇನ್ನು ಕೆಲವರು, ಏನೇ ಆದರೂ ಮನೆಯವರ ಜತೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಶ್ರೀಗಂಧ ಮರ ಕಳವು ತಡೆಗೆ ಕೆಎಸ್‌ಡಿಎಲ್ ಉಪಕ್ರಮ: ಸಾರ್ವಜನಿಕರಿಂದ ತಾಂತ್ರಿಕ ಪರಿಹಾರಗಳಿಗೆ ಆಹ್ವಾನ

ಕಳೆದ ಕೆಲವು ಸಮಯದಿಂದ ಸಿ.ಪಿ. ಯೋಗೇಶ್ವರ್ ಮತ್ತು ಅವರ ಪುತ್ರಿ ನಿಶಾ ನಡುವೆ ಅಂತರ ಸೃಷ್ಟಿಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈಗ ನೇರವಾಗಿ ಮನೆಯ ಪ್ರವೇಶದ ಬಗ್ಗೆಯೇ ನಿಶಾ ಧ್ವನಿ ಎತ್ತಿರುವುದು ಚನ್ನಪಟ್ಟಣ ರಾಜಕೀಯ ವಲಯದಲ್ಲಿ ಮಾತ್ರವಲ್ಲದೆ ಸಾರ್ವಜನಿಕವಾಗಿಯೂ ಚರ್ಚೆಗೆ ಗ್ರಾಸವಾಗಿದೆ.