ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Elephant attack: ಪ್ರವಾಸಿ ತಾಣದಲ್ಲಿ ಆನೆ ದಾಳಿ: ಮೇಕೆದಾಟು ಬಳಿ ನುಗ್ಗಿಬಂದ ಕಾಡಾನೆ, ಮಹಿಳೆಗೆ ಗಾಯ

ಕನಕಪುರ (Kanakapura) ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ನೀರು ಕುಡಿಯಲು ನದಿಗೆ ಬಂದ ಕಾಡಾನೆ ಏಕಾಏಕಿ ಪ್ರವಾಸಿಗರ ಮೇಲೆ ಎರಗಿದೆ. ಈ ವೇಳೆ ಪ್ರವಾಸಿಗರು ಸ್ಥಳದಿಂದ ಎದ್ದೆನೋ ಬಿದ್ದೆನೋ ಎಂದು ಓಡಿದ್ದಾರೆ. ಈ ವೇಳೆ ಓರ್ವ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅಲ್ಲಿಂದ ಕಾಡಿನೊಳಗೆ ಕಾಲ್ಕಿತ್ತಿದೆ.

ಮೇಕೆದಾಟು ಬಳಿ ಪ್ರವಾಸಿಗರ ಮೇಲೆ ನುಗ್ಗಿಬಂದ ಕಾಡಾನೆ, ಮಹಿಳೆಗೆ ಗಾಯ

ಕಾಡಾನೆ ದಾಳಿ -

ಹರೀಶ್‌ ಕೇರ
ಹರೀಶ್‌ ಕೇರ Apr 25, 2026 12:23 PM

ರಾಮನಗರ, ಏ.25: ಬೇಸಿಗೆ ರಜೆ ಎಂದು ಮೇಕೆದಾಟು, ಮುತ್ತತ್ತಿ, ಸಂಗಮ ಪ್ರದೇಶದ ಕಾವೇರಿ ನದಿಯಲ್ಲಿ ತಂಪಾಗಿ ಈಜಾಡಲು ಹೋಗುವವರು ಎಚ್ಚರಿಕೆ ವಹಿಸಬೇಕಾದಂಥ ಘಟನೆ ನಡೆದಿದೆ. ಕಾವೇರಿ ನದಿಯಲ್ಲಿ (Cauvery River) ಆಟವಾಡುತ್ತಿದ್ದ ಪ್ರವಾಸಿಗರ (Tourists) ಮೇಲೆ ಕಾಡಾನೆ ದಾಳಿ (Wild Elephant Attack) ನಡೆಸಿರುವ ಘಟನೆ ಸಂಗಮ ಅರಣ್ಯ ಪ್ರದೇಶದ ಮೇಕೆದಾಟು ಬಳಿ ನಡೆದಿದೆ.

ಕನಕಪುರ (Kanakapura) ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ನೀರು ಕುಡಿಯಲು ನದಿಗೆ ಬಂದ ಕಾಡಾನೆ ಏಕಾಏಕಿ ಪ್ರವಾಸಿಗರ ಮೇಲೆ ಎರಗಿದೆ. ಈ ವೇಳೆ ಪ್ರವಾಸಿಗರು ಸ್ಥಳದಿಂದ ಎದ್ದೆನೋ ಬಿದ್ದೆನೋ ಎಂದು ಓಡಿದ್ದಾರೆ. ಈ ವೇಳೆ ಓರ್ವ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿ ಅಲ್ಲಿಂದ ಕಾಡಿನೊಳಗೆ ಕಾಲ್ಕಿತ್ತಿದೆ.

ಕಾಡಾನೆ ದಾಳಿಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಟಿಸಲಗ ಪ್ರವಾಸಿಗರ ಮೇಲೆ ದಾಳಿ ಮಾಡುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Elephant attack in Madikeri: ಮಡಿಕೇರಿಯಲ್ಲಿ ಆನೆ ದಾಳಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾವು