ರಾಜ್ಯದ 82 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ: ಭಾರತ್ ಜೋಡೋ 2.0
ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಮುಖ ಏಳು ಅಂಶಗಳನ್ನು ಮುಂದಿಟ್ಟುಕೊಂಡು ಕನ್ಯಾಕುಮಾರಿಯಿಂದ ಪಾದಯಾತ್ರೆ ನಡೆಸಿದ್ದರು. ಅವರ ಪಾದಯಾತ್ರೆಯು ಸೆ.30ರಂದು ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿ, ಸುಮಾರು ಒಂದು ವಾರ ಕಾಲ ರಾಜ್ಯದಲ್ಲಿ ಯಾತ್ರೆ ನಡೆದಿತ್ತು
-
ಶಿವಮೊಗ್ಗ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಡೆಸಿದ್ದ ‘ಭಾರತ್ ಜೋಡೋ’ ಯಾತ್ರೆಯ ಆಶಯಗಳನ್ನು ಮುಂದುವರಿಸಿಕೊಂಡು ಹೋಗಬೇಕು, ಗ್ಯಾರೆಂಟಿಗಳ ಬಗ್ಗೆ ಜನರಿಗೆ ತಿಳಿಸಬೇಕು. ಆ ಮೂಲಕ ಜನರೊಂದಿಗೆ ನೇರ ಸಂಪರ್ಕ ಹೊಂದ ಬೇಕೆನ್ನುವ ಉದ್ದೇಶದೊಂದಿಗೆ ರಾಜ್ಯದ 82 ವಿಧಾನಸಭಾ ಕ್ಷೇತ್ರ ಗಳಲ್ಲಿ ಭಾರತ್ ಜೋಡೋ 2 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಮುಖ ಏಳು ಅಂಶಗಳನ್ನು ಮುಂದಿಟ್ಟುಕೊಂಡು ಕನ್ಯಾಕುಮಾರಿ ಯಿಂದ ಪಾದಯಾತ್ರೆ ನಡೆಸಿದ್ದರು. ಅವರ ಪಾದಯಾತ್ರೆಯು ಸೆ.30ರಂದು ಚಾಮರಾಜನಗರದ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಿ, ಸುಮಾರು ಒಂದು ವಾರ ಕಾಲ ರಾಜ್ಯದಲ್ಲಿ ಯಾತ್ರೆ ನಡೆದಿತ್ತು. ಅದರ ನೆನಪಿನಲ್ಲಿ ಸೆ.30ರಂದು ಶಿಕಾರಿಪುರದಿಂದ ಭಾರತ್ ಜೋಡೋ-2 ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಇದನ್ನೂ ಓದಿ: Shimoga News: ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್ ಮಿನುಗುತಾರೆ
ಭಾರತ್ ಜೋಡೋ ಯಾತ್ರೆಯ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ಅವರನ್ನು ಆಹ್ವಾನಿಸುವ ಯೋಚನೆ ಇತ್ತು. ಆದರೆ ಆ ಇಬ್ಬರು ನಾಯಕರು ಅಂದು ದೆಹಲಿಗೆ ತೆರಳುತ್ತಿರುವ ಕಾರಣಕ್ಕೆ ಅವರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಸಚಿವರು ಮುಖ್ಯ ಅತಿಥಿಗಳಾಗಿ ಆಗಮಿಸಲಿ ದ್ದಾರೆಂದು ಅವರು ತಿಳಿಸಿದರು.
ರಾಹುಲ್ ಗಾಂಧಿಯವರ ಭಾರತ್ ಜೋ ಡೋ ಯಾತ್ರೆಯ ಸಂದರ್ಭದಲ್ಲಿ ದೇಶದ ಸಾಮರಸ್ಯ ಮತ್ತು ಏಕತೆ, ಜನರೊಂದಿಗೆ ನೇರ ಸಂಪರ್ಕ, ಉದ್ಯೋಗ ಹಾಗೂ ಆರ್ಥಿಕ ಸಮ ಸ್ಯೆಗಳ ಅರಿವು, ರೈತರು ಮತ್ತು ಕಾರ್ಮಿಕರ ಜೀವನ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವುದು, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆ ಹಾಗೂ ದ್ವೇಷದ ಬದಲಿಗೆ ಪ್ರೀತಿಯ ಸಂದೇಶವನ್ನು ಸಾರುವುದು ಸೇರಿದಂತೆ ಹಲವು ಪ್ರಮುಖ ಆಶಯಗಳನ್ನು ಮುಂದಿಟ್ಟು ಕೊಳ್ಳಲಾಗಿತ್ತು. ಅದೇ ವಿಚಾರಗಳನ್ನು ಮುಂದು ವರಿಸಲಾಗುತ್ತದೆ ಎಂದು ವಿವರಿಸಿದರು.