ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tejasvi Surya: 'ಐರನ್‌ ಮ್ಯಾನ್‌ʼ ತೇಜಸ್ವಿ ಸೂರ್ಯಗೆ ಪತ್ನಿ ಶಿವಶ್ರೀ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ

Sivasri Skandaprasad and Tejasvi Surya: ಸಂಸದ ಸೂರ್ಯ ಅವರು ಸ್ಪರ್ಧೆಯ ಮೂರು ಕಠಿಣ ಹಂತಗಳಾದ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷಗಳನ್ನು ತೆಗೆದುಕೊಂಡಿದ್ದರು. ಇವರಿಗೆ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಸಾಥ್​ ನೀಡಿದ್ದು, ಅವರು ಈ ಸ್ಪರ್ಧೆಯನ್ನು 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಇವರ ಈ ಸಾಧನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸಂತಸ ವ್ಯಕ್ತಪಡಿಸಿದ್ದರು.

'ಐರನ್‌ ಮ್ಯಾನ್‌ʼ ತೇಜಸ್ವಿ ಸೂರ್ಯಗೆ ಪತ್ನಿ ಶಿವಶ್ರೀ ಮೆಚ್ಚುಗೆ ಪೋಸ್ಟ್

ಶಿವಶ್ರೀ ಸ್ಕಂದಪ್ರಸಾದ್‌ ಹಾಗೂ ತೇಜಸ್ವಿ ಸೂರ್ಯ -

ಹರೀಶ್‌ ಕೇರ
ಹರೀಶ್‌ ಕೇರ Nov 11, 2025 2:45 PM

ಬೆಂಗಳೂರು, ನ.11: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಸತತ 2ನೇ ವರ್ಷವೂ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಮ್ಯಾರಥಾನ್‌ (Iron man marathaon) ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್​ (Sivasri Skandaprasad) ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದು, ಪತಿಯ ಸಾಧನೆಯನ್ನು ಪ್ರಶಂಸಿಸಿದ್ದಾರೆ. "ಎರಡನೇ ಬಾರಿ ಐರನ್‌ಮ್ಯಾನ್ 70.3 ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕೆ ‘ಮ್ಯಾನ್ ಆಫ್ ಸ್ಟೀಲ್’ ನನ್ನ ಪತಿ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು. ಹಿಂದಿನ ಬಾರಿ ಹೋಲಿಸಿದರೆ 40 ನಿಮಿಷ ಕಡಿಮೆ ಸಮಯದಲ್ಲಿ ಗುರಿಯನ್ನ ಪೂರ್ಣಗೊಳಿಸಿದ್ದೀರಿ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, ತೇಜಸ್ವಿ ಸೂರ್ಯ ಅವರು ತಮ್ಮನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್‌ ಮಾಡಿದ್ದಾರೆ.

ಶಿವಶ್ರೀ ಸ್ಕಂದಪ್ರಸಾದ್​ ಪೋಸ್ಟ್​ನಲ್ಲಿ ಏನಿದೆ?

ನನ್ನ ವೈಯಕ್ತಿಕ ಕೋಚ್ ಮತ್ತು ಮುಖ್ಯ ಪ್ರೇರಣಾದಾಯಕರಾಗಿ ನನ್ನ ಐರನ್‌ಮ್ಯಾನ್ ಸರಣಿಯನ್ನು ಮುಂದುವರಿಸಲು ನೀವು ನೆರವಾಗಿದ್ದಕ್ಕೆ ಧನ್ಯವಾದಗಳು. ನಾನು ಈಗ ಮಾಡುತ್ತಿರುವ ಕೆಲಸಗಳಿಗೆ ನೀವಲ್ಲದೆ ಬೇರೆ ಯಾರೂ ಇಷ್ಟು ಪ್ರೇರಣೆ ನೀಡಲಾರರು. ನೀವು ನನಗೆ ದೊರೆತ ಅತ್ಯುತ್ತಮ ವ್ಯಕ್ತಿ. ನೀವು ಯಾವಾಗಲೂ ನನ್ನ ಬೆನ್ನಿನ ಹಿಂದೆ ಬೆಂಬಲವಾಗಿ ಇದ್ದೀರಿ ಎಂಬುದು ನನಗೆ ಗೊತ್ತಿದೆ ಎಂದು ಶಿವಶ್ರೀ ಸ್ಕಂದಪ್ರಸಾದ್​ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ. ಶಿವಶ್ರೀ ಸ್ಕಂದಪ್ರಸಾದ್​ ಅವರು ಕೂಡ ಐರನ್‌ಮ್ಯಾನ್ 70.3ರಲ್ಲಿ ಭಾಗಿಯಾಗಿದ್ದು, 90 ಕಿ.ಮೀ. ಸೈಕ್ಲಿಂಗ್​ ಮಾಡಿ ಗಮನ ಸೆಳೆದಿದ್ದಾರೆ.



ಸಂಸದ ಸೂರ್ಯ ಅವರು ಸ್ಪರ್ಧೆಯ ಮೂರು ಕಠಿಣ ಹಂತಗಳಾದ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷಗಳನ್ನು ತೆಗೆದುಕೊಂಡಿದ್ದರು. ಇವರಿಗೆ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಸಾಥ್​ ನೀಡಿದ್ದು, ಅವರು ಈ ಸ್ಪರ್ಧೆಯನ್ನು 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಇವರ ಈ ಸಾಧನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸಂತಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Tejasvi Surya: ಸತತ 2ನೇ ಬಾರಿ ಐರನ್‌ಮ್ಯಾನ್ 70.3 ಓಟ ಪೂರ್ಣಗೊಳಿಸಿದ ಸಂಸದ ತೇಜಸ್ವಿ ಸೂರ್ಯ; ಅಣ್ಣಾಮಲೈ ಸಾಥ್‌

ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟದಲ್ಲಿ ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ನೋಡಿ ಸಂತೋಷವಾಯಿತು. ಇಂತಹ ಕಾರ್ಯಕ್ರಮಗಳು #FitIndia ಆಂದೋಲನಕ್ಕೆ ಕೊಡುಗೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಐರನ್‌ಮ್ಯಾನ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಲ್ಲಿ ನಮ್ಮ ಪಕ್ಷದ ಯುವ ಸಹೋದ್ಯೋಗಿಗಳಾದ ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಸೇರಿದ್ದಾರೆ ಎನ್ನುವುದು ಸಂತೋಷ ಎಂದು ಮೋದಿ ಹೇಳಿದ್ದರು.