Tapassi Movie: ತೆರೆಮೇಲೆ ಮೋಡಿ ಮಾಡೋಕೆ ಕ್ರೇಜಿಸ್ಟಾರ್ ರೆಡಿ; ಬಹುನಿರೀಕ್ಷಿತ ‘ತಪಸ್ಸಿ’ ಚಿತ್ರ ಈ ವಾರ ರಿಲೀಸ್
Tapassi Movie: ಸ್ಪೆನ್ಸರ್ ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷಪಾತ್ರದಲ್ಲಿ ನಟಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ ʼತಪಸ್ಸಿʼ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ʼತಪಸ್ಸಿʼ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಮೆಯ್ರಾ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ.


ಬೆಂಗಳೂರು: ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಸ್ಪೆನ್ಸರ್ ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ವಿಶೇಷಪಾತ್ರದಲ್ಲಿ ನಟಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ ʼತಪಸ್ಸಿʼ ಚಿತ್ರ (Tapassi Movie) ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ʼತಪಸ್ಸಿʼ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಮೆಯ್ರಾ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ. ಭಾಸ್ಕರ್, ಅನುಶಾ ಕಿಣಿ, ರಥರ್ವ, ಸಚ್ಚಿನ್, ಗುಬ್ಬಿ ನಟರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರೇ ಛಾಯಾಗ್ರಹಣ ಹಾಗೂ ಕಲಾ ನಿರ್ದೇಶನವನ್ನೂ ಮಾಡಿರುವ ಬಹು ನಿರೀಕ್ಷಿತ ʼತಪಸ್ಸಿʼ ಚಿತ್ರಕ್ಕೆ ಅರುಣ್ ಪಿ. ಥಾಮಸ್ ಸಂಕಲನವಿದೆ. ಆರವ್ ರಾಶಿಕ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಭಾಸ್ಕರ್, ಅನುಶಾ ಕಿಣಿ, ರಥರ್ವ, ಸಚ್ಚಿನ್, ಗುಬ್ಬಿ ನಟರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Dupatta Fashion 2025: ಹುಡುಗಿಯರ ಆಕರ್ಷಕ ಲುಕ್‌ಗಾಗಿ ಶೀರ್ ದುಪಟ್ಟಾ ಫ್ಯಾಷನ್