ಮೆಸ್ಸಿ,ಎಂಬಾಪೆ ಮ್ಯಾಜಿಕ್; ಫಿಫಾ ನಾಕೌಟ್‌ಗೆ ಲಗ್ಗೆಯಿಟ್ಟ ಅರ್ಜೆಂಟೀನಾ, ಫ್ರಾನ್ಸ್
FIFA World Cup 2026: ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಬಾರಿಸಿದ 2 ಗೋಲುಗಳ ನೆರವಿನಿಂದ ಇರಾಕ್ ವಿರುದ್ಧ ಫ್ರಾನ್ಸ್ 3-0 ಅಂತರದ ಜಯ ಸಾಧಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
Messi -
ಕನ್ಸಾಸ್ ಸಿಟಿ, ಜೂ.23: ದಿಗ್ಗಜ ಲಿಯೋನೆಲ್ ಮೆಸ್ಸಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ. ಸೋಮವಾರ ತಡರಾತ್ರಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ, ಆಸ್ಟ್ರಿಯಾ ವಿರುದ್ಧದ ‘ಜೆ’ ಗುಂಪಿನ ಪಂದ್ಯದಲ್ಲಿ ಅವಳಿ ಗೋಲು ಬಾರಿಸಿ ಮಿಂಚಿದರು. ಅವರ ಈ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾಗೆ ಸತತ ಎರಡನೇ ಗೆಲುವು ದಾಖಲಿಸಿ ನಾಕೌಟ್‌ಗೆ ಲಗ್ಗೆಯಿಟ್ಟಿತು.
ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ್ದ ಮೆಸ್ಸಿಯ ಮೇಲೆ ಈ ಪಂದ್ಯದಲ್ಲಿಯೂ ಭಾರೀ ನಿರೀಕ್ಷೆ ಮಾಡಲಾಗಿತ್ತು. ಪಂದ್ಯದ ಆರಂಭದಲ್ಲಿ ಲಭಿಸಿದ್ದ ಪೆನಾಲ್ಟಿ ಅವಕಾಶದಲ್ಲಿ ಮೆಸ್ಸಿ ಎಡವಿದ ವೇಳೆ ಅಭಿಮಾನಿಗಳು ನಿರಾಸೆಗೊಂಡರು. ಆದರೆ ಛಲ ಬಿಡದ ಮೆಸ್ಸಿ 38ನೇ ನಿಮಿಷದಲ್ಲಿ ಅದ್ಭುತ ಗೋಲು ಬಾರಿಸಿ ಸಂಭ್ರಮಿಸಿರು. ಇದೇ ವೇಳೆ ಅವರು ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಆಟಗಾರರ ಎನಿಸಿದರು. ಜರ್ಮಿನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸಾ(16) ದಾಖಲೆ ಪತನಗೊಂಡಿತು. ಮೆಸ್ಸಿ ಈಗ 18 ಗೋಲು ಬಾರಿಸಿದ್ದಾರೆ. ಮೆಸ್ಸಿಗೆ ಎಂಬಾಪೆ ತೀವ್ರ ಪೈಪೋಟಿ ನೀಡುತ್ತಿದ್ದು, ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿ ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ. ಎಂಪಾಪೆ 16* ಗೋಲು ಬಾರಿಸಿ ಜಂಟಿ ಎರಡನೇ ಸ್ಥಾನಿಯಾಗಿದ್ದಾರೆ.
🚨 WATCH: Lionel Messi scores and becomes the highest goalscorer in FIFA World Cup history. 🔥 🐐
— World Cup 2026 (@WorldCupMedia_) June 22, 2026
A historic moment for Argentina. 🇦🇷 pic.twitter.com/Z2DiVZonuJ
ಪಂದ್ಯದ ಕೊನೆಯ ಹೆಚ್ಚುವರಿ ಅವಧಿಯಲ್ಲಿ ಮತ್ತೊಮ್ಮೆ ಪರಾಕ್ರಮ ಮೆರೆದ ಮೆಸ್ಸಿ (90+5ನೇ) ಗೋಲು ಬಾರಿಸಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು. ಅರ್ಜೇಂಟೀನಾ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಜೋರ್ಡನ್ ತಂಡವನ್ನು ಎದುರಿಸಲಿದೆ. ಈ ಪಂದ್ಯ 28ರಂದು ನಡೆಯಲಿದೆ.
ಎಂಬಾಪೆ ಮ್ಯಾಜಿಕ್‌ಗೆ ತಲೆಬಾಗಿದ ಇರಾಕ್
ಭಾರತೀಯ ಕಾಲಮಾನ ಮಂಗಳವಾರ ಬೆಳಗ್ಗೆ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಕಿಲಿಯನ್ ಎಂಬಾಪೆ ಬಾರಿಸಿದ 2 ಗೋಲುಗಳ ನೆರವಿನಿಂದ ಇರಾಕ್ ವಿರುದ್ಧ ಫ್ರಾನ್ಸ್ 3-0 ಅಂತರದ ಜಯ ಸಾಧಿಸಿ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಫ್ರಾನ್ಸ್ ಪರ 100ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಲಿಳಿದ ಎಂಬಾಪೆ, ಪಂದ್ಯ ಆರಂಭಗೊಂಡ 14ನೇ ನಿಮಿಷದಲ್ಲೇ ಗೋಲು ಬಾರಿಸಿ ಸಂಭ್ರಮಿಸಿದರು. ಇದಾಗಿ 54ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಮಾಜಿ ಆಟಗಾರ ಮಿರೋಸ್ಲಾವ್ ದಾಖಲೆಯನ್ನು ಸರಿಗಟ್ಟಿದರು. ಕಳೆದ ಸೆನೆಗಲ್ ವಿರುದ್ಧದ ಪಂದ್ಯದಲ್ಲಿಯೂ ಅವರು ಅವಳಿ ಗೋಲು ಬಾರಿಸಿದ್ದರು. ಫಿಫಾ ವಿಶ್ವಕಪ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಎರಡನೇ ಆಟಗಾರರ ಎನಿಸಿಕೊಂಡಿರುವ ಜರ್ಮಿನಿಯ ದಿಗ್ಗಜ ಮಿರೋಸ್ಲಾವ್ ಕ್ಲೋಸಾ(16 ಗೋಲು) ದಾಖಲೆಯನ್ನು ಎಂಬಾಪೆ ಸರಿಗಟ್ಟಿದರು.
ಪಂದ್ಯದ 66ನೇ ನಿಮಿಷದಲ್ಲಿ ಔಸ್ಮಾನೆ ಡೆಂಬೆಲೆ ಗೋಲು ಗಳಿಸಿ ತಂಡದ ಗೋಲಿನ ಅಂತರವನ್ನು 3ಕ್ಕೇರಿಸಿದರು. ಫ್ರಾನ್ಸ್ ಆಟಗಾರರ ಆಕ್ರಮಣಕಾರಿ ಆಟದ ಮುಂದೆ ಇರಾಕ್ ಸಂಪೂರ್ಣವಾಗಿ ಶರಣಾಯಿತು.