ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Income Tax: ಕೃಷಿ ಮಾತ್ರವಲ್ಲ ತೆರಿಗೆ ಇಲ್ಲದ ಇನ್ನೂ 7 ಆದಾಯಗಳಿವೆ; ಅವು ಯಾವುವು ಗೊತ್ತೆ?

Vishwavani Money: ಭಾರತೀಯ ನಾಗರಿಕರು ಈ 8 ಮೂಲಗಳಿಂದ ಗಳಿಸುವ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಿಲ್ಲ. ಆದಾಯದ ಮೇಲೆ ತೆರಿಗೆಯನ್ನು ಸ್ಲ್ಯಾಬ್ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳಿಂದ ವಿನಾಯಿತಿ ಹೊಂದಿರುವ ತೆರಿಗೆ ಮೂಲಗಳು ಯಾವುದು ಎನ್ನುವ ಕುರಿತು ಟ್ಯಾಕ್ಸ್ ಟು ವಿನ್ ಸಂಸ್ಥೆಯ ಸಂಸ್ಥಾಪಕ ಅಭಿಷೇಕ್ ಸೋನಿ ನೀಡಿರುವ ಮಾಹಿತಿ ಇಲ್ಲಿದೆ.

ಈ 8 ಆದಾಯಗಳಿಗೆ ಪಾವತಿಸಬೇಕಿಲ್ಲ ತೆರಿಗೆ

ಸಾಂದರ್ಭಿಕ ಚಿತ್ರ -

ಬೆಂಗಳೂರು, ಜೂ. 23: ಭಾರತೀಯ ನಾಗರಿಕರಿಗೆ ಎಂಟು ಮೂಲಗಳಿಂದ ಬರುವ ಆದಾಯಕ್ಕೆ ತೆರಿಗೆ ವಿನಾಯಿತಿ (Tax exemption) ನೀಡಲಾಗಿದೆ. ಅವುಗಳು ಯಾವುದು ಎನ್ನುವ ಕುರಿತು ಟ್ಯಾಕ್ಸ್ ಟು ವಿನ್ (Tax to win)ನ ಸಂಸ್ಥೆಯ ಸಂಸ್ಥಾಪಕ ಅಭಿಷೇಕ್ ಸೋನಿ ನೀಡಿರುವ ಮಾಹಿತಿಯನ್ನು 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಹಂಚಿಕೊಂಡಿದ್ದಾರೆ. ಆದಾಯದ ಮೇಲೆ ತೆರಿಗೆಯನ್ನು ಸ್ಲ್ಯಾಬ್ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ. ಇವುಗಳಿಂದ ಕೆಲವು ಆದಾಯಗಳಿಗೆ ವಿನಾಯಿತಿ ಕೂಡ ಇದೆ ಎಂಬುದಾಗಿ ಹೇಳಿದ್ದಾರೆ.

8 ಆದಾಯಗಳಿಗೆ ಭಾರತೀಯ ನಾಗರಿಕರು ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಅವುಗಳಲ್ಲಿ ಕೃಷಿ, ಪ್ರಾವಿಡೆಂಟ್ ಫಂಡ್, ಕಮ್ಯುಟೆಡ್ ಪೆನ್ಶನ್, ಉಡುಗೊರೆಗಳು ಕೂಡ ಸೇರಿವೆ. ಆದರೆ ಇವುಗಳಿಗೆ ಕೆಲವು ನಿರ್ಬಂಧಗಳು ಕೂಡ ಇದೆ ಎಂದು ಅವರು ತಿಳಿಸಿದ್ದಾರೆ.

ವಿಡಿಯೊ ಇಲ್ಲಿದೆ:



ಕೃಷಿ ಭೂಮಿಯಿಂದ ಬರುವ ಆದಾಯವು ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಹೊಂದಿದೆ. ತಿಂಗಳಿಗೆ 5,000 ರುಪಾಯಿ ಆದಾಯವನ್ನು ಕೃಷಿಯಿಂದ ಪಡೆಯುವವರು ಕೃಷಿಯೇತರ ಆದಾಯ ಮೂಲ ಹೊಂದಿದ್ದರೆ ಅದು ತೆರಿಗೆ ಮಿತಿಯ ವ್ಯಾಪ್ತಿಯನ್ನು ಮೀರಿದ್ದರೆ ಅದಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎಂದರು.

ತಿಂಗಳ ಸಂಬಳ ಪಡೆಯುವವರು ಹೂಡಿಕೆ ಯೋಜನೆ ಮಾಡುವುದು ಹೇಗೆ? ಏನಂತಾರೆ ತಜ್ಞರು ?

ಹತ್ತಿರದ ಸಂಬಂಧಿಕರು ಅಂದರೆ ತಂದೆ, ತಾಯಿ, ಸಹೋದರ, ಸಹೋದರಿ, ಅಜ್ಜ, ಅಜ್ಜಿಯನ್ನು ಹೊರತು ಪಡಿಸಿ ದೂರದ ಸಂಬಂಧಿಕರು, ಸ್ನೇಹಿತರು ನೀಡುವ ಉಡುಗೊರೆಗಳಿಗೆ ಮಾತ್ರ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಜೀವ ವಿಮೆಯಿಂದ ಬರುವ ಹಣಕ್ಕೆ ತೆರಿಗೆ ವಿನಾಯಿತಿ ಇದೆ. ಆದರೆ ಹೆಚ್ಚಿನ ಪ್ರೀಮಿಯಂ, ಯುಲಿಪ್‌ಗಳಿಗೆ ಕೆಲವು ನಿರ್ಬಂಧವಿದೆ ಎಂದು ಅವರು ತಿಳಿಸಿದರು.

ನಿವೃತ್ತಿಗಾಗಿ ಇರಿಸಲಾಗುವ ಭವಿಷ್ಯ ನಿಧಿ ಖಾತೆಯಿಂದ ಬರುವ ಬರುವ ಆದಾಯಕ್ಕೂ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ ಇದಕ್ಕಾಗಿ ಉದ್ಯೋಗಿಗಳು ಅಗತ್ಯ ಸೇವೆಗಳನ್ನು ನಿರ್ದಿಷ್ಟ ಅವಧಿಗೆ ಪೂರ್ಣಗೊಳಿಸಿರಬೇಕಾಗುತ್ತದೆ ಎಂದು ಹೇಳಿದರು.

ರ‍್ಯಾಡಿಸನ್ ಬ್ಲೂ ಏಟ್ರಿಯಾ; 3 ದಶಕಗಳ ಆತಿಥ್ಯ ಪರಂಪರೆ

ಇದರೊಂದಿಗೆ ಕಮ್ಯುಟೆಡ್ ಪೆನ್ಶನ್ ನ ಒಂದು ಭಾಗ ಸಂಪೂರ್ಣ ತೆರಿಗೆ ವಿನಾಯಿತಿ ಹೊಂದಿದ್ದರೆ, ಪ್ರತಿ ತಿಂಗಳು ನಿಗದಿತವಾಗಿ ಬರುವ ಪೆನ್ಶನ್ ಹಣಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ವಿದ್ಯಾರ್ಥಿ ವೇತನ, ಸ್ಕಾಲರ್ ಶಿಪ್, ರಾಷ್ಟ್ರ ಮಟ್ಟದ ಪ್ರಶಸ್ತಿಗಳು, ಪರಿಹಾರ ನಿಧಿಗಳು, ಶಿಕ್ಷಣ ಸಾಧನೆಗೆ ಸಿಗುವ ಗೌರವ, ಗ್ರಾಚ್ಯುಟಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಪಾಲುದಾರಿಕೆ, ಎಲ್‌ಎಲ್‌ಪಿಯಿಂದ ಗಳಿಸುವ ಲಾಭಕ್ಕೂ ಕೂಡ ತೆರಿಗೆ ವಿನಾಯಿತಿ ಇದೆ ಎಂಬುದಾಗಿ ಅವರು ವಿವರಿಸಿದರು.