ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MLA S.R.Srinivas: ಬೇಸಿಗೆ ನೀರಿನ ಸಮಸ್ಯೆಗೆ ಮೆನ್ನೆಚ್ಚರಿಕೆಗೆ ಕ್ರಮ: ಶಾಸಕ ಎಸ್.ಆರ್.ಶ್ರೀನಿವಾಸ್

ತಾಲ್ಲೂಕಿನ ಚಿಕ್ಕಹಳ್ಳಿ, ವಿರೂಪಾಕ್ಷಪುರ, ಎಂ.ಎನ್.ಕೋಟೆ ಹಾಗೂ ಅಳಿಲುಘಟ್ಟ ಗ್ರಾಮದಲ್ಲಿ ಒಟ್ಟು 5.30 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಅದಲಗೆರೆ ಗೊಲ್ಲರಹಟ್ಟಿ, ಕೊಂಡ್ಲಿ ಕ್ರಾಸ್ ನಲ್ಲಿ ನೀರಿನ ಸಮಸ್ಯೆ ಕಂಡಿತ್ತು. ಶೀಘ್ರ ಕ್ರಮಕ್ಕೆ ಸೂಚಿಸಲಾಯಿತು. ಈ ಬೇಸಿಗೆಯಲ್ಲಿ ನೀರು ವಿದ್ಯುತ್ ಸಮಸ್ಯೆ ತಲೆದೋರುವ ಮುನ್ನ ಎಲ್ಲಾ ರೀತಿಯ ಎಚ್ಚರಿಕೆ ಕ್ರಮಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಬೇಸಿಗೆ ನೀರಿನ ಸಮಸ್ಯೆಗೆ ಮೆನ್ನೆಚ್ಚರಿಕೆಗೆ ಕ್ರಮ

-

Profile
Ashok Nayak Apr 11, 2026 11:33 PM

ಗುಬ್ಬಿ: ತಾಲ್ಲೂಕಿನಲ್ಲಿ ಕೆಲ ಗ್ರಾಮದಲ್ಲಿ ನೀರಿನ ಸಮಸ್ಯೆ ಬಗ್ಗೆ ದೂರು ಬಂದ ಹಿನ್ನಲೆ ತಕ್ಷಣ ತುರ್ತು ಕ್ರಮ ವಹಿಸಲಾಗಿದೆ. ಮುಂದಿನ ದಿನದಲ್ಲಿ ನೀರಿನ ಸಮಸ್ಯೆ ಕಾಣದಂತೆ ಮೆನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಎಲ್ಲಾ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳ ಸಭೆ ಇದೇ ತಿಂಗಳ 13 ರಂದು ಕರೆಯಲಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್(MLA S.R. Srinivas) ತಿಳಿಸಿದರು.

ತಾಲ್ಲೂಕಿನ ಚಿಕ್ಕಹಳ್ಳಿ, ವಿರೂಪಾಕ್ಷಪುರ, ಎಂ.ಎನ್.ಕೋಟೆ ಹಾಗೂ ಅಳಿಲುಘಟ್ಟ ಗ್ರಾಮದಲ್ಲಿ ಒಟ್ಟು 5.30 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಅದಲಗೆರೆ ಗೊಲ್ಲರಹಟ್ಟಿ, ಕೊಂಡ್ಲಿ ಕ್ರಾಸ್ ನಲ್ಲಿ ನೀರಿನ ಸಮಸ್ಯೆ ಕಂಡಿತ್ತು. ಶೀಘ್ರ ಕ್ರಮಕ್ಕೆ ಸೂಚಿಸ ಲಾಯಿತು. ಈ ಬೇಸಿಗೆಯಲ್ಲಿ ನೀರು ವಿದ್ಯುತ್ ಸಮಸ್ಯೆ ತಲೆದೋರುವ ಮುನ್ನ ಎಲ್ಲಾ ರೀತಿಯ ಎಚ್ಚರಿಕೆ ಕ್ರಮಕ್ಕೆ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಲ ಜೀವನ್ ಮಿಷನ್ ಯೋಜನೆ(Jal Jeevan Mission Scheme)ಯಡಿ ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಹರಿಸುವ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕೇಂದ್ರ ಸರ್ಕಾರ ಈ ಯೋಜನೆಗೆ 10 ಸಾವಿರ ಕೋಟಿ ಬಾಕಿ ನೀಡಬೇಕಿದೆ. ಗುತ್ತಿಗೆದಾರರು ಕೆಲಸ ಕೈಬಿಟ್ಟಿದ್ದಾರೆ. ನಿತ್ಯ ದೂರುಗಳು ಬರುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ತಲಾ ಶೇಕಡಾ 37.50 ಹಣ ನೀಡಿದರೆ, ಗ್ರಾಮ ಪಂಚಾಯಿತಿ ಮುಂದಿನ ಕ್ರಮ ವಹಿಸಿದೆ. ಆದರೆ ಯೋಜನೆಗೆ ಕೇಂದ್ರವೇ ಹಣ ನೀಡಿಲ್ಲ ಎಂದು ದೂರಿದರು.

ಇದನ್ನೂ ಓದಿ: Gubbi News: ದೇವಾಲಯದ ಜಾಗ ಅತಿಕ್ರಮಣ : ತೆರವು ಮಾಡಲು ಗ್ರಾಮಸ್ಥರ ಆಗ್ರಹ

ತಾಲ್ಲೂಕಿನಲ್ಲಿ ಬಾಕಿ ಇರುವ ಗ್ರಾಮೀಣ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ. ಕಳೆದೆರಡು ತಿಂಗಳಿಂದ ನೂರಾರು ಕೋಟಿ ಕೆಲಸಕ್ಕೆ ಪೂಜೆ ನಡೆದಿದೆ. ಈಗಾಗಲೇ, 500 ಕೋಟಿ ಅನುದಾನ ಬೇರೆ ಬೇರೆ ಯೋಜನೆಯಡಿ ತಾಲ್ಲೂಕಿನಲ್ಲಿ ಕೆಲಸ ನಡೆದಿದೆ. ವಿಶೇಷವಾಗಿ, ಹಾಗಲವಾಡಿ ಹೋಬಳಿ ಯಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಸರ್ಕಾರಿ ವ್ಯಾಲಿ ಜೊತೆಗೆ ರೈತರ ಜಮೀನಲ್ಲಿ ಸಹ ಚೆಕ್ ಡ್ಯಾಂ ನಿರ್ಮಿಸಲಾಗುತ್ತಿದೆ ಎಂದ ಅವರು ಯುದ್ಧದ ನೆಪದಲ್ಲಿ ಕೆಲ ಔಷಧಿಗಳ ಕಾಳಸಂತೆ ಮಾರಾಟದ ಬಗ್ಗೆ ಸರ್ಕಾರ ಗಮನಹರಿಸಿದೆ ಎಂದರು.

ಮತಯಂತ್ರ ಬದಲು ಮತಪತ್ರ ಬಳಕೆಗೆ ಸುಪ್ರಿಂ ಕೋರ್ಟ್ ಆದೇಶ ನೀಡಿದೆ. ಎಲ್ಲೆಡೆ ಅದೇ ಪ್ರಾಮುಖ್ಯತೆ ಪಡೆಯುತ್ತಿದೆ. ರಾಜ್ಯಪಾಲರು ಅದನ್ನು ತಡೆಹಿಡಿಯಲು ಸಾಧ್ಯವಿಲ್ಲ. ಮತಪತ್ರ ಬಳಕೆಗೆ ಅಂಗೀಕಾರ ಸಿಗಲಿದೆ ಎಂದ ಅವರು ದಾವಣಗೆರೆ ಉಪಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಮುಖಂಡರು ಚುನಾವಣೆ ಮಾಡಿಲ್ಲ ಎನ್ನುವ ಆರೋಪಕ್ಕೆ ಆಧಾರವಿಲ್ಲ. ಅಸಮಾಧಾನದ ಮಾತು ಗಳು ಅಷ್ಟೇ ಅಲ್ಲಿ ಕಂಡಿರುವುದು ಎಂದು ಸಮಜಾಯಿಸಿ ನೀಡಿದರು.

ವಿದ್ಯುತ್ ಸಮಸ್ಯೆಗೆ ನಮ್ಮಲ್ಲಿ ಸರಬರಾಜು ಉಪಘಟಕಗಳು ಇನ್ನೂ ಕೆಲವು ಆರಂಭವಾಗಲಿದೆ. ಭೋಗಸಂದ್ರ, ಎಂಎಂಎ ಕಾವಲ್, ತೊರೆಹಳ್ಳಿ ಹೀಗೆ ಹಲವೆಡೆ ಕಾಮಗಾರಿ ಆರಂಭವಾಗಿದೆ. ಈ ಜೊತೆಗೆ ಗುಬ್ಬಿಯಲ್ಲಿ 220 ಕೆವಿ ಸ್ಟೇಷನ್ 130 ಕೋಟಿ ರೂಗಳಲ್ಲಿ ಕೆಲಸ ನಡೆದಿದೆ ಎಂದ ಅವರು ಶಾಸಕರಾದವರಿಗೆ ಮಂತ್ರಿಯಾಗುವ ಆಸೆ ಸಹಜವಾಗಿ ಇರುತ್ತದೆ. ಈ ಹಿನ್ನಲೆ ಕೆಲಸ ಶಾಸಕರು ದೆಹಲಿಯತ್ತ ಸಾಗಿದ್ದಾರೆ. ಇದರಲ್ಲಿ ವಿಶೇಷತೆ ಏನಿಲ್ಲ ಎಂದರು. 

ಈ ಸಂದರ್ಭದಲ್ಲಿ ಮುಖಂಡರಾದ ಗುರುರೇಣುಕಾರಾಧ್ಯ, ಸಣ್ಣರಂಗಯ್ಯ, ಪುಟ್ಟರಾಜು, ತಿಮ್ಲಿಪಾಳ್ಯ ಶಶಿಧರ್, ಎಂ.ಎನ್.ಕೋಟೆಯ ಗೋಪಾಲಶಟ್ಟಿ, ನಾಗರಾಜಗುಪ್ತ, ಮಾರುತಿ ಕುಮಾರ್, ಸಿದ್ದಲಿಂಗಪ್ಪ ,ಪಾಂಡುರಂಗಯ್ಯ, ಲಕ್ಷ್ಮೀಕಾಂತಯ್ಯ ದೇವರಾಜು, ಸತ್ಯಪ್ರಸಾದ್, ನಂಜರಾಜು ಗುಪ್ತ, ದಿಲೀಪ್ ಕುಮಾರ್, ಶಿವಪ್ಪ , ಸಿದ್ದರಾಮಣ್ಣ , ವಸಂತ್ ಕುಮಾರ್, ನಿಜಗುಣಮೂರ್ತಿ ಶೇಖರ್ ಇತರರು ಇದ್ದರು.