ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೈಸೂರು ದಸರಾದಲ್ಲಿ ತುಮಕೂರು ಜಿಲ್ಲೆಯ ಸ್ತಬ್ಧಚಿತ್ರ ತಿರಸ್ಕಾರಕ್ಕೆ ಖಂಡನೆ

ಕಲ್ಪತರು ನಾಡಿಗೆ ಅವಮಾನ: ಅಕ್ಷರ ಮತ್ತು ಅನ್ನ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಕ್ಷೇತ್ರ, ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಗಳ ಸೇವಾ ಸಾಧನೆ ಹಾಗೂ ಸಾಹಿತ್ಯ-ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವ ರಾಜ್ಯದ ಎರಡನೇ ದೊಡ್ಡ ಜಿಲ್ಲೆಯ ಹೆಮ್ಮೆಯನ್ನು ತಳ್ಳಿಹಾಕಿರುವುದು ದಸರಾ ಆಯ್ಕೆ ಸಮಿತಿಯ ತಾತ್ಸಾರ ಧೋರಣೆಯನ್ನು ತೋರಿಸುತ್ತದೆ ಎಂದು ಡಾ. ಧನಿಯಾಕುಮಾರ್ ಟೀಕಿಸಿದ್ದಾರೆ.

ಮೈಸೂರು ದಸರಾದಲ್ಲಿ ತುಮಕೂರು ಜಿಲ್ಲೆಯ ಸ್ತಬ್ಧಚಿತ್ರ ತಿರಸ್ಕಾರಕ್ಕೆ  ಖಂಡನೆ

-

Profile
Ashok Nayak Sep 27, 2026 1:20 PM

​ತುಮಕೂರು: ಈ ಬಾರಿಯ ಮೈಸೂರು ದಸರಾ ಉತ್ಸವದಲ್ಲಿ ಜಿಲ್ಲೆಯ ಸಂಸ್ಕೃತಿ, ಪರಂಪರೆ ಮತ್ತು ಕಲೆ ಬಿಂಬಿಸುವ ಸ್ತಬ್ಧಚಿತ್ರವನ್ನು ಆಯ್ಕೆ ಸಮಿತಿಯು ತಿರಸ್ಕರಿಸಿರುವುದಕ್ಕೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಡಾ. ಧನಿಯಾಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

​ತುಮಕೂರಿನ ಹಿರಿಯ 60ಕ್ಕೂ ಹೆಚ್ಚು ಕಲಾವಿದರ ತಂಡ ದಸರಾ ಉತ್ಸವಕ್ಕಾಗಿಯೇ 'ಕಲ್ಪತರು ನಾಡಿನ ಪರಂಪರೆ' ಸಾರುವ ಸುಂದರ ಸ್ತಬ್ಧಚಿತ್ರವನ್ನು ಸಿದ್ಧಪಡಿಸಿತ್ತು. ಆದರೆ ಸಮಿತಿಯು ಇದನ್ನು ತಿರಸ್ಕರಿಸಿರುವುದು ಜಿಲ್ಲೆಗೆ ಹಾಗೂ ಕಲಾವಿದರಿಗೆ ಮಾಡಿರುವ ಅವಮಾನ ಎಂದು ಆಕ್ಷೇಪಿಸಿದ್ದಾರೆ.

ಇದನ್ನೂ ಓದಿ: Tumkur News: ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಸಿಕ್ಕಿಬಿದ್ದ ಪೊಲೀಸ್ ಸಿಬ್ಬಂದಿಯ ಪುತ್ರ!

​ಪ್ರಮುಖ ಆಕ್ಷೇಪಗಳು ಹಾಗೂ ಮುಖ್ಯಾಂಶಗಳು: ​

ಕಲ್ಪತರು ನಾಡಿಗೆ ಅವಮಾನ: ಅಕ್ಷರ ಮತ್ತು ಅನ್ನ ದಾಸೋಹಕ್ಕೆ ಹೆಸರಾದ ಸಿದ್ಧಗಂಗಾ ಕ್ಷೇತ್ರ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಗಳ ಸೇವಾ ಸಾಧನೆ ಹಾಗೂ ಸಾಹಿತ್ಯ-ಶೈಕ್ಷಣಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿರುವ ರಾಜ್ಯದ ಎರಡನೇ ದೊಡ್ಡ ಜಿಲ್ಲೆಯ ಹೆಮ್ಮೆಯನ್ನು ತಳ್ಳಿ ಹಾಕಿರುವುದು ದಸರಾ ಆಯ್ಕೆ ಸಮಿತಿಯ ತಾತ್ಸಾರ ಧೋರಣೆಯನ್ನು ತೋರಿಸುತ್ತದೆ ಎಂದು ಡಾ.ಧನಿಯಾ ಕುಮಾರ್ ಟೀಕಿಸಿದ್ದಾರೆ.

​ರಾಜಕೀಯ ಹಸ್ತಕ್ಷೇಪ ಶಂಕೆ: ಕಲಾವಿದರ ಹೆಸರಿನಲ್ಲಿ ಕೆಲ ರಾಜಕೀಯ ವ್ಯಕ್ತಿಗಳ ಶಿಫಾರಸು ಮತ್ತು ಅಧಿಕಾರಿಗಳ ಬೆಂಬಲದಿಂದ ಕಾನೂನು-ನಿಯಮ ಮೀರಿ ಹಣ ಮಾಡುವ ದುರ್ಉದ್ದೇಶ ಹಾಗೂ ದೊಡ್ಡ ಲಬಿಯ ಕುತಂತ್ರಗಳು ಇದರ ಹಿಂದೆ ನಡೆಯುತ್ತಿವೆಯೇ ಎಂಬ ಅನುಮಾನ ಮೂಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

​ಮರುಪರಿಶೀಲನೆಗೆ ಆಗ್ರಹ: ಕೂಡಲೇ ದಸರಾ ಆಯ್ಕೆ ಸಮಿತಿಯು ಈ ನಿರ್ಧಾರವನ್ನು ಮರು ಪರಿಶೀಲಿಸಿ, ತುಮಕೂರು ಜಿಲ್ಲೆಯ ಸ್ತಬ್ಧಚಿತ್ರವು ದಸರಾದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.