ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli News: ಒಳ ಮೀಸಲಾತಿ ಸಮೀಕ್ಷೆ ಕಾಲಾವಕಾಶ ಹೆಚ್ಚಿಸಿ : ಛಲವಾದಿ ಮಹಾಸಭಾ ಒತ್ತಾಯ

ತಾಲ್ಲೂಕಿನಲ್ಲಿ ಪರಿಪೂರ್ಣವಾಗಿ ಸಮೀಕ್ಷೆ ನಡೆಯುತ್ತಿಲ್ಲ. ಆದರೆ ಮೇ.17ವರೆಗೆ ಕಾಲಾವಕಾಶ ವನ್ನು ನೀಡಲಾಗಿದೆ. ಪರಿಶಿಷ್ಟ ಜಾತಿಗಳ ಯಾವ ಬೀದಿಗೆ ಯಾವ ಗಣತಿದಾರರನ್ನು ಹಾಕಿದ್ದಾರೆ, ನೋಡಲ್ ಅಧಿಕಾರಿ ಯಾರು? ಎಂಬ ಮಾಹಿತಿ ಸರಿಯಾಗಿ ಜನರಿಗೆ ಲಭ್ಯವಿಲ್ಲ ಇನ್ನು ಉಳಿದ ದಿನದಲ್ಲಿ ಸಮೀಕ್ಷೆ ಯನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಲು ಸಾಧ್ಯವಿಲ್ಲ

ಒಳ ಮೀಸಲಾತಿ ಸಮೀಕ್ಷೆ ಕಾಲಾವಕಾಶ ಹೆಚ್ಚಿಸಿ : ಛಲವಾದಿ ಮಹಾಸಭಾ ಒತ್ತಾಯ

Profile Ashok Nayak May 16, 2025 1:29 PM

ಚಿಕ್ಕನಾಯಕನಹಳ್ಳಿ : ಪರಿಶಿಷ್ಟರಲ್ಲಿ ಒಳ ಮೀಸಲಾತಿ ನೀಡುವ ಸಂಬಂಧ ಆರಂಭಿಸಿರುವ ಸಮೀಕ್ಷೆಯು ಹಲವು ಗೊಂದಲಗಳೊಂದಿಗೆ, ಸ್ಪಷ್ಟತೆಯಿಲ್ಲದೆ ನಿಧಾನವಾಗಿ ಮುಂದುವರೆಯು ತ್ತಿರುವುದರಿಂದ ಜಾತಿಗಣತಿಗೆ ಕಾಲಾವಕಾಶವನ್ನು ವಿಸ್ತರಣೆ ಮಾಡಬೇಕು ಎಂದು ಛಲವಾದಿ ಮಹಾಸಭಾ ಅಧ್ಯಕ್ಷ ಯಳ್ಳೇನಹಳ್ಳಿ ನಿರಂಜನ್ ಒತ್ತಾಯಿಸಿದ್ದಾರೆ. ತಾಲ್ಲೂಕಿನಲ್ಲಿ ಪರಿಪೂರ್ಣವಾಗಿ ಸಮೀಕ್ಷೆ ನಡೆಯುತ್ತಿಲ್ಲ. ಆದರೆ ಮೇ.17ವರೆಗೆ ಕಾಲಾವಕಾಶ ವನ್ನು ನೀಡಲಾಗಿದೆ. ಪರಿಶಿಷ್ಟ ಜಾತಿಗಳ ಯಾವ ಬೀದಿಗೆ ಯಾವ ಗಣತಿದಾರರನ್ನು ಹಾಕಿದ್ದಾರೆ, ನೋಡಲ್ ಅಧಿಕಾರಿ ಯಾರು? ಎಂಬ ಮಾಹಿತಿ ಸರಿಯಾಗಿ ಜನರಿಗೆ ಲಭ್ಯವಿಲ್ಲ ಇನ್ನು ಉಳಿದ ದಿನದಲ್ಲಿ ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಸರಕಾರ ಸಮೀಕ್ಷೆಗೆ ಕಾಲಾವಕಾಶ ವನ್ನು ವಿಸ್ತರಣೆ ಮಾಡಬೇಕು ಎಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಒತ್ತಾಯಿಸಿದರು.

ಒಳ ಮೀಸಲಾತಿ ಜಿಲ್ಲಾ ಕಮಿಟಿ ಸದಸ್ಯ ಆಶ್ರೀಹಾಲ್ ಆನಂದ್ ಮಾತನಾಡಿ ಗಣತಿದಾರರು ಹೆಚ್ಚಾಗಿ ಮುಂದುವರೆದ ಸಮುದಾಯಗಳ ಮನೆಗೆ ತೆರಳಿ ಜಾತಿ ಗಣತಿ ಮಾಡುತ್ತಿದ್ದಾರೆ. ಸಮೀಕ್ಷೆಗೆ ರೂಪಿಸಿರುವ ಪ್ರಶ್ನಾವಳಿಯಲ್ಲಿ ಗೊಂದಲವಿದೆ. ಸರ್ವರ್ ಸಮಸ್ಯೆಯಿಂದ ದಿನಕ್ಕೆ ನಾಲ್ಕೆöÊದು ಮನೆಗಳನ್ನು ಮಾತ್ರ ಮುಗಿಸಲಾಗುತ್ತಿದೆ. ತರಾತುರಿಯಲ್ಲಿ ಮಾಡಿದರೆ ಸಮೀಕ್ಷೆ ಅಪೂರ್ಣವಾಗು ವುದು. ಇದರಿಂದ ಉಪಜಾತಿಗಳ ದತ್ತಾಂಶ ಸಂಗ್ರಹಣೆಗೆ ಹಿನ್ನಡೆಯಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Tumkur (Chikkanayakanahalli) News: ನೂರು ಕೋಟಿ ವೆಚ್ಚದಲ್ಲಿ ಗುಣಮಟ್ಟದ ಸಿಸಿ ರಸ್ತೆ ನಿರ್ಮಾಣ: ಶಾಸಕ ಸಿ.ಬಿ.ಸುರೇಶ್ ಬಾಬು

ಮಹಾಸಭಾದ ಕಾರ್ಯದರ್ಶಿ ಗೋ.ನಿ.ವಸಂತಕುಮಾರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ತೊಂದರೆ, ಸರ್ವರ್ ಸಮಸ್ಯೆ ಕಾಡುತ್ತಿದೆ. ಒಂದು ಕುಟುಂಬದ ಸಮೀಕ್ಷೆ ಮಾಡಲು 40 ನಿಮಿಷ ತೆಗೆದುಕೊಳ್ಳುತ್ತಿತ್ತು. ಜನಸಂಖ್ಯೆ ಹೆಚ್ಚಿರುವ ಕಡೆ ಒಬ್ಬ ಗಣತಿದಾರರಿಗೆ ಕೊಟ್ಟಿರುವ ಸಮಯ ದಲ್ಲಿ ಪೂರ್ಣಗೊಳಿಸಲು ಕಷ್ಟವಿದೆ. ರೇಷನ್ ಕಾರ್ಡ್ ಇಲ್ಲದವರನ್ನು ಸಮೀಕ್ಷೆಯಿಂದ ಕೈಬಿಡಲಾಗುತ್ತಿದೆ. ಇದು ಅಪೂರ್ಣಗೊಳ್ಳಲಿದೆ. ಗಣತಿದಾರರಿಗೆ ಅನುಭವದ ಕೊರತೆ ಇದ್ದು ಸಮೀಕ್ಷೆ ಮಾಡಲು ಇಷ್ಟು ಸಮಯ ಸಾಕಾಗುತ್ತದೆಯೇ ಇದನ್ನು ಆಯೋಗವೇ ತಿಳಿಸಬೇಕಿದೆ ಎಂದರು.

ತಹಸೀಲ್ದಾರ್, ಸಮಾಜ ಕಲ್ಯಾಣಾಧಿಕಾರಿ ವಿಫಲ

ಪರಿಶಿಷ್ಟ ಜಾತಿ ಜನಗಣತಿಯನ್ನು ಸೂಕ್ತ ರೀತಿಯಲ್ಲಿ ನಡೆಸಲು ತಹಸೀಲ್ದಾರ್ ಪುರಂದರ್ ಹಾಗು ಸಮಾಜ ಕಲ್ಯಾಣಾಧಿಕಾರಿ ಶ್ರೀಧರ್ ಮೂರ್ತಿ ವಿಫಲರಾಗಿದ್ದಾರೆ. ಗÀಣತಿದಾರರಿಗೆ ಸೂಕ್ತ ಮಾರ್ಗದರ್ಶನ, ಸಮೀಕ್ಷೆ ಸ್ಥಳಗಳಿಗೆ ಭೇಟಿ ನೀಡಲು ಕ್ರಮ ವಹಿಸಿಲ್ಲ. ದಲಿತ ಮುಖಂಡರೊAದಿಗೆ ಚರ್ಚಿಸದೆ, ಸಮುದಾಯಕ್ಕೆ ತಿಳುವಳಿಕೆ ಕೊರತೆ ಮಾಡಿ ಸಮೀಕ್ಷೆಯನ್ನು ಧಿಕ್ಕುತಪ್ಪಿಸುವ ಹುನ್ನಾರ ಕೈಗೊಂಡಿದ್ದಾರೆ ಎಂದು ಮಹಾಸಭಾದ ಮುಖಂಡರು ದೂರಿದರು. ಸಂಚಾಲಕರಾದ ರಘು, ಭರತ್, ಮಧುಸೂಧನ್, ಗೋಡೆಕೆರೆ ನರಸಿಂಹಮೂರ್ತಿ ಹಾಜರಿದ್ದರು.