ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muralidhar Halappa: ​ಪತ್ರಕರ್ತರ ಪ್ರಶ್ನೆಗೆ ಹಾಲಪ್ಪ ಸ್ಪಷ್ಟನೆ; ಜ. 4ಕ್ಕೆ ಬೃಹತ್ ‘ಜನಧ್ವನಿ’ ಪ್ರತಿಭಟನೆ

ರಾಜ್ಯ ಸರ್ಕಾರವೇ ಅರಣ್ಯ ನಿಯಮ ಉಲ್ಲಂಘಿಸಿರುವುದು ಮತ್ತು ಭೈರಗೊಂಡ್ಲು ಜಲಾಶಯ ನಿರ್ಮಿ ಸಲು ರೈತರ ಮನ ವೊಲಿಸುವಲ್ಲಿ ವಿಫಲವಾಗಿರುವುದು ವಿಳಂಬಕ್ಕೆ ಕಾರಣವಲ್ಲವೇ?" ಎಂದು ಪ್ರಶ್ನಿಸಿ ದರು. ಇದಕ್ಕೆ ಉತ್ತರಿಸಿದ ಹಾಲಪ್ಪ, "ಬೃಹತ್ ಯೋಜನೆಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ಬದಲಾವಣೆ ಸಹಜ. ಅರಣ್ಯ ನಿಯಮ ಉಲ್ಲಂಘನೆ ಎಂಬುದು ಕೇಂದ್ರದ ನೆಪವಷ್ಟೇ. ಈಗಾಗಲೇ 111 ಹೆಕ್ಟೇರ್ ಅರಣ್ಯ ಭೂಮಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲಾಗಿದೆ

ಎತ್ತಿನಹೊಳೆ ಯೋಜನೆಗೆ ಕೇಂದ್ರದ ಅಡ್ಡಿ: ಮುರಳೀಧರ ಹಾಲಪ್ಪ ಆಕ್ರೋಶ

-

Ashok Nayak
Ashok Nayak Dec 31, 2025 9:28 PM

​ಚಿಕ್ಕನಾಯಕನಹಳ್ಳಿ: "ದಶಕಗಳ ಕನಸಿನ ಎತ್ತಿನಹೊಳೆ ಯೋಜನೆ(Yettinahole Project) ಪೂರ್ಣಗೊಳ್ಳುವ ಹಂತ ದಲ್ಲಿದ್ದಾಗ, ಕೇಂದ್ರ ಸರ್ಕಾರವು ಅಸೂಯೆಯಿಂದ ತಾಂತ್ರಿಕ ಕ್ಯಾತೆ ಗಳನ್ನು ತೆಗೆದು ಅಡ್ಡಿಪಡಿಸುತ್ತಿದೆ," ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ(KPCC Vice President Muralidhar Halappa) ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಯ ಸುತ್ತ ನಡೆಯುತ್ತಿರುವ ರಾಜಕೀಯ ಮೇಲಾಟಗಳ ಬಗ್ಗೆ ಕೇಂದ್ರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

​ಪತ್ರಕರ್ತರ ಪ್ರಶ್ನೆ - ವಾಗ್ವಾದ: ಗೋಷ್ಠಿಯಲ್ಲಿ ಪತ್ರಕರ್ತರು, "ರಾಜ್ಯ ಸರ್ಕಾರವೇ ಅರಣ್ಯ ನಿಯಮ ಉಲ್ಲಂಘಿಸಿರುವುದು ಮತ್ತು ಭೈರಗೊಂಡ್ಲು ಜಲಾಶಯ ನಿರ್ಮಿಸಲು ರೈತರ ಮನ ವೊಲಿಸುವಲ್ಲಿ ವಿಫಲವಾಗಿರುವುದು ವಿಳಂಬಕ್ಕೆ ಕಾರಣವಲ್ಲವೇ?" ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಹಾಲಪ್ಪ, "ಬೃಹತ್ ಯೋಜನೆಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ಬದಲಾವಣೆ ಸಹಜ. ಅರಣ್ಯ ನಿಯಮ ಉಲ್ಲಂಘನೆ ಎಂಬುದು ಕೇಂದ್ರದ ನೆಪವಷ್ಟೇ. ಈಗಾಗಲೇ 111 ಹೆಕ್ಟೇರ್ ಅರಣ್ಯ ಭೂಮಿಗೆ ಸಂಬಂಧಿಸಿದ ದಾಖಲೆ ಸಲ್ಲಿಸಲಾಗಿದೆ. ಭೈರಗೊಂಡ್ಲು ಸಂತ್ರಸ್ತ ರೈತರೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಆದರೆ ಕೇಂದ್ರದ ಕಿರುಕುಳದಿಂದ ಯೋಜನೆಗೆ ಹಿನ್ನಡೆಯಾಗುತ್ತಿದೆ," ಎಂದು ಪ್ರತ್ಯಾರೋಪ ಮಾಡಿದರು.

ಇದನ್ನೂ ಓದಿ: Chikkanayakanahalli News: ಅಂಬೇಡ್ಕರ್ ಸೇವಾ ಸಮಿತಿ ‘ಲೆಟರ್ ಹೆಡ್‌’ಗೆ ಸೀಮಿತವಲ್ಲ; ಮೂಲ ಆಶಯದಂತೆ ಸಕ್ರಿಯ ಹೋರಾಟ: ಯಗಚೀಹಳ್ಳಿ ರಾಘವೇಂದ್ರ

ಕುಮಾರಸ್ವಾಮಿ ವಿರುದ್ಧ ಕಿಡಿ: ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ. ಚಿಕ್ಕಣ್ಣ ಮಾತ ನಾಡಿ, "23 ಸಾವಿರ ಕೋಟಿ ರೂ. ವಿನಿಯೋಗಿಸಿ ಕಾಮಗಾರಿ ಮುಗಿಸುವ ಹಂತಕ್ಕೆ ಬಂದಾಗ ಕೇಂದ್ರ ಅಸೂಯೆ ಪಡುತ್ತಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ದೆಹಲಿಯಲ್ಲಿ ಮೌನವಾಗಿರುವುದು ರಾಜ್ಯದ ಹಿತಾಸಕ್ತಿಗೆ ಬಗೆದ ದ್ರೋಹ," ಎಂದು ದೂರಿದರು.​

ಜ. 4ಕ್ಕೆ ‘ಜನಧ್ವನಿ’ ಪ್ರತಿಭಟನೆಯ ಎಚ್ಚರಿಕೆ

ಕೇಂದ್ರದ ಧೋರಣೆ ಖಂಡಿಸಿ ಜನವರಿ 4 ರಂದು ಕೆ.ಬಿ. ಕ್ರಾಸ್ ಬಳಿ ಬೃಹತ್ ‘ಜನಧ್ವನಿ’ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದೆ. ಗುಬ್ಬಿ, ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮುರಳೀಧರ ಹಾಲಪ್ಪ ಕರೆ ನೀಡಿದರು. ಕೇಂದ್ರ ಪಟ್ಟು ಸಡಿಲಿಸದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು: ಮಾಜಿ ಶಾಸಕ ಲಕ್ಕಪ್ಪ, ಚಿ.ನಾ.ಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಕೆಪಿಸಿಸಿ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ಬಗರ್ ಹುಕುಂ ಕಮಿಟಿ ಸದಸ್ಯ ಬೇವಿನಹಳ್ಳಿ ಚನ್ನಬಸವಯ್ಯ, ರೈತ ಮುಖಂಡರಾದ ಷಡಕ್ಷರಿ, ಆಟೋ ಮಂಜುನಾಥ್, ಪ್ರಸನ್ನಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.