ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

S R Srinivas: ವಿದ್ಯುತ್ ಸಮಸ್ಯೆ ಆಗದಂತೆ  ವಿದ್ಯುತ್ ಸರಬರಾಜು ಉಪಸ್ಥಾವರ ಸ್ಥಾಪನೆ

ವಿದ್ಯುತ್ ಕೊರತೆ ಪರಿಹರಿಸಲು 150 ಕೋಟಿ ವೆಚ್ಚದಲ್ಲಿ ರಿಸೀವಿಂಗ್ ಸೆಂಟರ್ ಸ್ಥಾಪನೆ ಮಾಡಲಾಗು ತ್ತದೆ. ಜೊತೆಗೆ 9 ಕಡೆ ವಿದ್ಯುತ್ ಉಪಕೇಂದ್ರಗಳನ್ನು ತೆರೆದು ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಲಾಗುತ್ತದೆ  ಎಂದು ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್ಆರ್ ಶ್ರೀನಿವಾಸ್(S R Srinivas) ತಿಳಿಸಿದರು

ವಿದ್ಯುತ್ ಸಮಸ್ಯೆ ಆಗದಂತೆ  ವಿದ್ಯುತ್ ಸರಬರಾಜು ಉಪಸ್ಥಾವರ ಸ್ಥಾಪನೆ

-

Profile
Ashok Nayak Jul 28, 2026 7:32 PM

ಗುಬ್ಬಿ: ವಿದ್ಯುತ್ ಕೊರತೆ ಪರಿಹರಿಸಲು 150 ಕೋಟಿ ವೆಚ್ಚದಲ್ಲಿ ರಿಸೀವಿಂಗ್ ಸೆಂಟರ್ ಸ್ಥಾಪನೆ ಮಾಡಲಾಗುತ್ತದೆ. ಜೊತೆಗೆ 9 ಕಡೆ ವಿದ್ಯುತ್ ಉಪಕೇಂದ್ರಗಳನ್ನು ತೆರೆದು ಗ್ರಾಮೀಣ ಭಾಗದ ರೈತರಿಗೆ ಅನುಕೂಲ ಮಾಡಲಾಗುತ್ತದೆ  ಎಂದು ಕೆಎಸ್ಆರ್ಟಿಸಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್ಆರ್ ಶ್ರೀನಿವಾಸ್(S R Srinivas) ತಿಳಿಸಿದರು.

ತಾಲ್ಲೂಕಿನ ಕೋಡಿನಾಗೇನಹಳ್ಳಿ, ಅದಲಗೆರೆಯಲ್ಲಿ ಹಮ್ಮಿಕೊಂಡಿದ್ದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮ ಜತೆಯಲ್ಲಿ ನಮ್ಮ ಪಕ್ಷದಲ್ಲಿ ಮಾದರಿಯಾಗಿದ್ದಾರೆ.

ಇದನ್ನೂ ಓದಿ: Gubbi News: ದುಡಿಮೆಯ ಒಂದಂಶ ಬಡ ಮಕ್ಕಳ ಶಿಕ್ಷಣಕ್ಕೆ : ಕಳ್ಳಿಪಾಳ್ಯ ಲೋಕೇಶ್

ಸಿಎಂ ಆಗಿದಾಗ ಉತ್ತಮ ಆಡಳಿತವನ್ನು ಜನಸಾಮಾನ್ಯರಿಗೆ ನೀಡಿದಾರೆ. ನಮ್ಮ ಪಕ್ಷದಲ್ಲಿ ಸಿದ್ದರಾಮಣ್ಣ ಅವರು ಇರ್ತಾರೆ ಮುಂಬಾರುವ ಚುನಾವಣೆಗಳು ಅವರ ಮಾರ್ಗದರ್ಶನದಲ್ಲಿ ನಡೆಯುತ್ತದೆ ಎಂದ ಅವರು, ತಾಲ್ಲೂಕಿನಲ್ಲಿ ವೈಧ್ಯಧಿಕಾರಿಗಳ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿ, ಶೀಘ್ರದಲ್ಲಿ ವೈದ್ಯಾಧಿಕಾರಿ ಗಳನ್ನು ನೇಮಕ ಮಾಡುತ್ತೇವೆ.

ಎಂ ಎನ್ ಕೋಟೆ ಆಸ್ಪತ್ರೆಗೆ ವೈಧ್ಯಾಧಿಕಾರಿಗಳು ತಕ್ಷಣ ನೇಮಕ ಮಾಡಲಾಗುತ್ತದೆ. ಎಂ.ಎನ್.ಕೋಟೆ ಆಸ್ಪತ್ರೆ ದೊಡ್ಡ ಆಸ್ಪತ್ರೆಯಾಗಿದೆ.ಅಲ್ಲಿಗೆ ಬೇಕಾದ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನುಕೂಲ ಮಾಡಲಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಮಾಲ ಸದಾಶಿವಯ್ಯ, ಮಂಜುನಾಥ್, ಓಂಕಾರ್, ಪರಮಣ್ಣ, ಭೈರಮ್ಮ ಈಶ್ವರಯ್ಯ, ವಕೀಲರಾದ ಪಾಂಡುರಂಗಯ್ಯ ,ಪಿಡಿಓ ರವಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.