Koratagere News: ಕೊರಟಗೆರೆಯಲ್ಲಿ ಮೀನಿನ ಬಲೆಗೆ ಸಿಲುಕಿ ಮಾನಸಿಕ ಅಸ್ವಸ್ಥ ಸಾವು
Koratagere News: ಮೀನಿನ ಬಲೆಗೆ ಸಿಲುಕಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿಯ ದೇವರಹಳ್ಳಿ ಹೊಸಕೆರೆ ಬಳಿ ಜರುಗಿದೆ. ಹುಲಿಕುಂಟೆ ಗ್ರಾಮದ ರಾಮಣ್ಣ (62) ಎನ್ನುವ ವ್ಯಕ್ತಿಯೇ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಸಾಂದರ್ಭಿಕ ಚಿತ್ರ. -

ಕೊರಟಗೆರೆ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಮೀನಿನ ಬಲೆಗೆ ಸಿಲುಕಿ ಮೃತಪಟ್ಟಿರುವ ಘಟನೆ ಕೊರಟಗೆರೆ ತಾಲೂಕಿನ (Koratagere News) ಕಸಬಾ ಹೋಬಳಿಯ ದೇವರಹಳ್ಳಿ ಹೊಸಕೆರೆ ಬಳಿ ಜರುಗಿದೆ. ಹುಲಿಕುಂಟೆ ಗ್ರಾಮದ ರಾಮಣ್ಣ (62) ಎನ್ನುವ ವ್ಯಕ್ತಿಯೇ ಮೃತಪಟ್ಟ ದುರ್ದೈವಿ. ಮೀನು ಹಿಡಿಯಲು ಬಿಟ್ಟಿದ್ದ ಬಲೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತನು ಕೆಲವು ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ ಎರಡು ದಿನಗಳಿಂದ ದೇವರಹಳ್ಳಿ ಕೆರೆಯ ಅಕ್ಕಪಕ್ಕದಲ್ಲಿ ರಾಮಣ್ಣ ಓಡಾಡುತ್ತಿದ್ದನ್ನು ಸ್ಥಳೀಯರು ಗಮನಿಸಿ ಹುಲಿಕುಂಟೆ ಗ್ರಾಮಕ್ಕೆ ಬಿಟ್ಟಿದ್ದಾರೆ ಎನ್ನಲಾಗಿದೆ. ಮೀನು ಹಿಡಿಯುವ ಬಲೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಅಗ್ನಿಶಾಮಕ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹ ಹೊರತೆಗೆದಿದ್ದಾರೆ.
ಎರಡು ಅಮಾನುಷ ಘಟನೆ; ಹೆತ್ತ ತಾಯಿಯನ್ನೇ ಕತ್ತು ಸೀಳಿ ಕೊಂದ ಇಬ್ಬರು ಪುತ್ರರು!
ಬೆಂಗಳೂರು: ರಾಮನಗರ (Ramanagara) ಹಾಗೂ ಬಾಗಲಕೋಟೆಯಲ್ಲಿ (bagalakote) ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ, ಇಬ್ಬರು ಗಂಡುಮಕ್ಕಳು ತಮ್ಮ ತಾಯಿಯ ಕತ್ತನ್ನೇ ಕತ್ತರಿಸಿ ಕೊಲೆ (Murder case) ಮಾಡಿದ್ದಾರೆ. ಜಮೀನು ಮಾರಾಟ ಮಾಡಿ ಬಂದ ಹಣ ಕೊಡಲಿಲ್ಲ ಎಂದು ಮಗ ತಾಯಿಯ ಕತ್ತು ಕೊಯ್ದ ಘಟನೆ ರಾಮನಗರದಲ್ಲಿ ನಡೆದಿದ್ದರೆ, ಕುಡಿಯಲು ಹಣ ಕೊಡಲಿಲ್ಲ ಎಂದು ಬಾಗಲಕೋಟೆಯಲ್ಲಿ ಮಗ ತಾಯಿಯ ಕುತ್ತಿಗೆ ನರ ಕತ್ತರಿಸಿದ್ದಾನೆ. ಇಬ್ಬರೂ ಪಾಪಿಗಳನ್ನು ಬಂಧಿಸಲಾಗಿದೆ.
ಜಮೀನು ಮಾರಿದ ಹಣಕ್ಕೆ ತಗಾದೆ
ಬೆಂಗಳೂರಿನಲ್ಲಿ (Bengaluru crime news) ಮತ್ತೊಂದು ಭೀಕರ ಹತ್ಯೆ (murder case) ನಡೆದಿದ್ದು, ಮಗನೊಬ್ಬ ತನ್ನ ಹೆತ್ತ ತಾಯಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಜಾಲಮಂಗಲದಲ್ಲಿ ಸ್ವಂತ ಮಗನೇ ತಾಯಿಯನ್ನು ಕೊಲೆ ಮಾಡಿದ್ದಾನೆ. ಕೊಲೆಯಾದ ಮಹಿಳೆಯನ್ನು ಸರೋಜಮ್ಮ (60) ಎಂದು ಗುರುತಿಸಲಾಗಿದೆ. ಅನಿಲ್ (36) ತಾಯಿಯನ್ನೇ ಕೊಂದ ಮಗ.
ಈ ಸುದ್ದಿಯನ್ನೂ ಓದಿ | Bribery case: 5 ಕೋಟಿ ರೂ. ನಗದು, ಐಷಾರಾಮಿ ಕೈಗಡಿಯಾರ, ವಾಹನಗಳು.. ಸಿಬಿಐ ಬಲೆಗೆ ಬಿದ್ದ ಐಪಿಎಸ್ ಅಧಿಕಾರಿ
ಜಮೀನು ಮಾರಾಟ ಮಾಡಿ ಬಂದ ಹಣ ಕೊಡಲಿಲ್ಲ ಎಂದು ತಾಯಿಯಾದ ಸರೋಜಮ್ಮಳ ಕತ್ತು ಕೊಯ್ದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ಸರೋಜಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.