ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಧುಗಿರಿಯಲ್ಲಿ ಮೌನ ಮೆರವಣಿಗೆ

Madhugiri News: ಇತ್ತೀಚೆಗೆ ಆದಿಶಂಕರಾಚಾರ್ಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಭದ್ರ ಹಿತಾಸಕ್ತಿಯುಳ್ಳವರು ಅವಹೇಳನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದು. ಸ್ಮಾರ್ತ ಹಾಗು ಮಾಧ್ವ ವಿಪ್ರರನ್ನು ಬೇರ್ಪಡಿಸುವ ಹುನ್ನಾರದಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಆದಿಶಂಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಧುಗಿರಿಯ ಬ್ರಾಹ್ಮಣ ಸಮುದಾಯ ಆಗ್ರಹಿಸಿದೆ.

ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನ; ಕ್ರಮಕ್ಕೆ ಆಗ್ರಹಿಸಿ ಮೌನ ಮೆರವಣಿಗೆ

ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವವರ ವಿರುದ್ದ ಕ್ರಮಕ್ಕೆ ಆಗ್ರಹಿಸಿ, ಮಧುಗಿರಿ ತಾಲೂಕು ಬ್ರಾಹ್ಮಣ ಸಮುದಾಯದವರು ಮನವಿ ಸಲ್ಲಿಸಿದರು. -

Profile
Siddalinga Swamy Jul 30, 2026 8:11 PM

ಮಧುಗಿರಿ, ಜು.30: ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಧುಗಿರಿ ತಾಲೂಕು (Madhugiri News) ಬ್ರಾಹ್ಮಣ ಸಮುದಾಯದವರು ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಿ, ಉಪವಿಭಾಧಿಕಾರಿ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದರು.

ಶಂಕರ ಸೇವಾ ಸಮಿತಿಯ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ಮಾತನಾಡಿ, ನಮ್ಮ ದೇಶದಲ್ಲಿ ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು, ಕೇವಲ 32 ವರ್ಷಗಳ ಕಾಲ ಜೀವಿಸಿದ್ದ ಶಂಕರಾಚಾರ್ಯರು, ಈ ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ ಗೀತಾಚಾರ್ಯ ಶ್ರೀಕೃಷ್ಣನ ಸಿದ್ಧಾಂತವಾದ ಅದ್ವೈತ ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ತಿಳಿಸಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು, ಶೈವ, ವೃಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗು ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು ಎಂದು ತಿಳಿಸಿದರು.

ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದು ಮೊದಲ ಆಚಾರ್ಯರಾದರು, ಮುಂದೆ ಆದಿ ಶಂಕರಾಚಾರ್ಯರಾಗಿ ಸನಾತನ ಹಿಂದೂ ಧರ್ಮವನ್ನು ಜಗತ್ತಿನಾದ್ಯಂತ ಪಸರಿಸಿದರು. ಆದರೆ, ಇತ್ತೀಚೆಗೆ ಆದಿಶಂಕರಾಚಾರ್ಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಭದ್ರ ಹಿತಾಸಕ್ತಿಯುಳ್ಳವರು ಅವಹೇಳನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದು. ಸ್ಮಾರ್ತ ಹಾಗು ಮಾಧ್ವ ವಿಪ್ರರನ್ನು ಬೇರ್ಪಡಿಸುವ ಹುನ್ನಾರದಲ್ಲಿ ತಲ್ಲೀನರಾಗಿರುತ್ತಾರೆ ಎಂದು ಆರೋಪಿಸಿದರು.

ಆದಿ ಶಂಕರಾಚಾರ್ಯರ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇನ್ನು ಮುಂದೆ ಯಾವ ವ್ಯಕ್ತಿಯು ಯಾವ ಗುರುಗಳ ಬಗ್ಗೆ ಮಾತನಾಡಬಾರದೆಂದು ಹೊಸ ಕಾನೂನು ರಚಿಸಿಲು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನಂತರ ವೇದ ಬ್ರಹ್ಮಶ್ರೀ ನಾಗರಾಜ ಶಾಸ್ತ್ರಿಗಳು ಮಾತನಾಡಿದರು. ‌

Madhugiri News: ಯುವಜನತೆಯನ್ನು ಮಾದಕ ವ್ಯಸನದಿಂದ ರಕ್ಷಿಸಲು ಅಗತ್ಯ ಕಠಿಣ ಕ್ರಮ: ಕೆ.ಎನ್. ರಾಜಣ್ಣ

ಈ ಸಂದರ್ಭದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಗೌರವಾಧ್ಯಕ್ಷ ಸೂರ್ಯನಾರಾಯಣರಾವ್, ಕಾರ್ಯದರ್ಶಿ ಶಕುಂತಲಾ ಗುಂಡೂರಾವ್, ಪದಾಧಿಕಾರಿಗಳಾದ ಕೆ.ನಾರಾಯಣ್, ಹೆಚ್.ಟಿ.ಸಂಜೀವ ಮೂರ್ತಿ, ಎಂ.ಎನ್. ನಾಗಭೂಷಣ್, ಎಂ.ಎಸ್. ಬದ್ರಿನಾಥ್, ಜಿ.ಎನ್. ರಾಘವೇಂದ್ರ, ಭೀಮೇಶ್, ಕೆ. ನಾಗರಾಜ್, ಶ್ರೀನಿವಾಸ್ ಶಾಸ್ತ್ರಿ, ನಿವೃತ್ತ ಚುನಾವಣಾ ಸಿರಸ್ತೆದಾರ್ ರಂಗನಾಥ್, ಎಚ್.ವಿ. ಮಂಜುನಾಥ್, ಪಿ.ವಿ. ಬಾಲಕೃಷ್ಣ, ಜಿ. ವೆಂಕಟೇಶ್, ಸತೀಶ್ ಎಂ.ಪಿ., ನಟರಾಜ್ ದೀಕ್ಷಿತ್, ಲಕ್ಷ್ಮಿಕಾಂತರಾವ್, ಸುನಿಲ್, ರಮ್ಯಾ ಸರಸ್ವತಿ, ಸಂಧ್ಯಾ, ಶೋಭಾ, ಪದ್ಮ, ಮುರಳಿ, ಶಾರದಮ್ಮ, ಜೋಡಿದಾರ್ ಮುರುಳಿಧರ್, ನಾರಾಯಣ ಚಾರ್ಲು, ಲಕ್ಷ್ಮಿಕಾಂತ್, ಉಷಾದೇವಿ ರಮೇಶ್ ಹಾಜರಾದ್ದರು.

ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

Madhugiri News (5)

ಮಧುಗಿರಿ: ಕರ್ನಾಟಕ ರಾಜ್ಯ ಯಾದವ ಸಂಘದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗದ ಘಟಕದ ಅಧ್ಯಕ್ಷರು ಹಾಗೂ ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮಧುಗಿರಿ ತಾಲೂಕು ಯಾದವ್ ಮುಖಂಡ ಮೂಡ್ಲಿ ಗಿರೀಶ್ ಆಗ್ರಹಿಸಿದರು.

ಗುರುವಾರ ಮಧುಗಿರಿಯ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಹಾಗೂ ಯುವಕರ ಸಬಲೀಕರಣ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಅಪಾರ ಅನುಭವವುಳ್ಳ ಡಿಟಿ ಶ್ರೀನಿವಾಸ್ ರವರು ಕಾಂಗ್ರೆಸ್ ಪಕ್ಷ ದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷ ಕಟ್ಟುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಾರೆ. ಇವರ ಅನುಭವ ಮತ್ತು ಜನಪರ ಕಾಳಜಿ ಹಾಗೂ ಸಂಘಟನಾ ಶಕ್ತಿಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಸಚಿವ ಸಂಪುಟದಲ್ಲಿ ಎಂಎಲ್ಸಿ ಡಿ.ಟಿ. ಶ್ರೀನಿವಾಸ್ ರವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಿರಂಜನ್ ದಾಸ್ ರಾಜ್ಯ ಅಲೆಮಾರಿ ಒಕ್ಕೂಟದ ಉಪಾಧ್ಯಕ್ಷರಾದ ಮಧುಮಲ್ಲಘಟ್ಟ ಮಧುಗಿರಿ ತಾಲೂಕ ಅಧ್ಯಕ್ಷರಾದ ಶಿವಕುಮಾರ್, ರಂಗಾರೆಡ್ಡಿ, ನಾರಾಯಣಪ್ಪ, ರಂಗಯ್ಯ, ರಾಘವೇಂದ್ರ, ರಂಗನಾಥ್, ತಿಪ್ಪೇಸ್ವಾಮಿ, ದೇವರಾಜು, ಶಿವಣ್ಣ, ತಮ್ಮಣ್ಣ, ರಂಗಣ್ಣ, ಇತರರು ಹಾಜರಿದ್ದರು.