MLA S.R.Srinivas: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಆರ್.ಶ್ರೀನಿವಾಸ್ ರಿಂದ ಭೂಮಿ ಪೂಜೆ
ತಾಲೂಕಿನ ನಾನಾ ಭಾಗಗಳಾದ ವಡ್ಡರಹಟ್ಟಿ, ಕಾಳೇನಹಳ್ಳಿ, ಕೆಜಿ ಟೆಂಪಲ್, ದೊಡ್ಡ ಕಟ್ಟಿ ಗೇನಹಳ್ಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ಇಲಾಖೆ, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 2.95 ಕೋಟಿ ವೆಚ್ಚದ ಸಿ.ಸಿ. ರಸ್ತೆ ಅಭಿವೃದ್ಧಿ ಹಾಗೂ ಉಪ ಆರೋಗ್ಯ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಮುಗಿದಿದ್ದು ಈಗ ಕೇಂದ್ರ ಸರ್ಕಾರ ಎಲ್ಲಾ ವಸ್ತುಗಳ ದರವನ್ನು ಹೆಚ್ಚಿಗೆ ಮಾಡುತ್ತದೆ.
-
ಗುಬ್ಬಿ: ಮೋದಿ ಹೇಳಿದ್ದನ್ನ ಈ ದೇಶದ ಜನ ಮಾಡುತ್ತಾರೆ, ಹಿಂದೆ ಗಂಗಳ ಬಡಿಯಿರಿ, ದೀಪಾ ಹಚ್ಚಿ, ಚಪ್ಪಾಳೆ ಹೊಡೆಯಿರಿ ಎಂದು ಹೇಳಿದ್ದರು, ಎಲ್ಲರೂ ಅದನ್ನು ಮಾಡಿದರು ಈಗ ಚಿನ್ನ ಕರೆದಿಸಬೇಡಿ, ಪೆಟ್ರೋಲ್ ಬಳಕೆ ಕಡಿಮೆ ಮಾಡಿ ಎಂದಿದ್ದಾರೆ ಅವರ ಮಾತು ಕೇಳುವ ಜನರಿದ್ದಾರೆ ಎಂದು ಕೆಎಸ್ಆರ್ಟಿಸಿ(KSRTC) ನಿಗಮ ಮಂಡಳಿ ಅಧ್ಯಕ್ಷ ಶಾಸಕ ಎಸ್ಆರ್ ಶ್ರೀನಿವಾಸ್(MLA SR Srinivas)ತಿಳಿಸಿದರು.
ತಾಲೂಕಿನ ನಾನಾ ಭಾಗಗಳಾದ ವಡ್ಡರಹಟ್ಟಿ, ಕಾಳೇನಹಳ್ಳಿ, ಕೆಜಿ ಟೆಂಪಲ್, ದೊಡ್ಡ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ಪಂಚಾಯತ್ ರಾಜ್ ಮತ್ತು ಇಂಜಿನಿಯರಿಂಗ್ ಇಲಾಖೆ, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿ ಯಿಂದ ಸುಮಾರು 2.95 ಕೋಟಿ ವೆಚ್ಚದ ಸಿ.ಸಿ. ರಸ್ತೆ ಅಭಿವೃದ್ಧಿ ಹಾಗೂ ಉಪ ಆರೋಗ್ಯ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾ ವಣೆ ಮುಗಿದಿದ್ದು ಈಗ ಕೇಂದ್ರ ಸರ್ಕಾರ ಎಲ್ಲಾ ವಸ್ತುಗಳ ದರವನ್ನು ಹೆಚ್ಚಿಗೆ ಮಾಡುತ್ತದೆ. ಯುದ್ದ ನಡೆಯುತ್ತಿರುವುದರಿಂದ ಎಲ್ಲಾ ಪೆಟ್ರೋಲ್, ಗ್ಯಾಸ್ ದರಗಳು ಹೆಚ್ಚಾಗಿದ್ದು ಇನ್ನೂ ಪ್ರಮುಖ ಕೆಲವು ವಸ್ತುಗಳ ದರವು ಹೆಚ್ಚಾಗಿರುವುದರಿಂದ ನಮ್ಮ ಗುತ್ತಿಗೆದಾರರು ಡಂಬರ್ ರಸ್ತೆ ಪ್ರಾರಂಭಿಸಿ ಡಂಬರ್ ದರ ಹೆಚ್ಚಾಗಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: Gubbi News: ತ್ವರಿತವಾಗಿ ಜನರಿಗೆ ಜಾಗೃತಿ ಮೂಡಿಸಲು ಸುಲಭ ಸಂವಹನ ಸಾಧನ ಡಿಜಿಟಲ್ ಮಾಧ್ಯಮ
ಗುಬ್ಬಿ ಪಟ್ಟಣದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಸರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತದೆ. ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯಬೇಕಾದರೆ ಸಾರ್ವಜನಿಕರ ತೊಂದರೆ ಉಂಟಾಗುವುದು ಸಹಜ ಆದ್ದರಿಂದ ಅದನ್ನ ಸಹಿಸಿಕೊಂಡು ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಆರ್. ವೆಂಕಟೇಶ್, ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ದಿವಾಕರ್, ಶಿವಣ್ಣ, ಶ್ರೀನಿವಾಸ್, ಎಲ್.ಪಿ ರಾಜಣ್ಣ, ಎಲ್.ಬಿ.ಕಾಳಪ್ಪ, ಆರಿಫ್ ಅಹಮದ್, ಮುಖಂಡರಾದ ಪಾಂಡುರಂಗ ಯ್ಯ, ಶ್ರೀನಿವಾಸ್, ಉಪೇಂದ್ರ, ಸಿದ್ದಯ್ಯ, ವೆಂಕಟೆಗೌಡ, ಲಿಂಗಮ್ಮನಹಳ್ಳಿ ಹೇಮಂತ್, ಚೇತನ್, ರಾಮಣ್ಣ, ಜಯಶಂಕರ್, ಶಿವಣ್ಣ, ಶ್ರೀನಿವಾಸ್, ಗಂಗಾಧರ್, ವೆಂಕಟೇಗೌಡ, ರಾಜಣ್ಣ, ಸಿದ್ದಲಿಂಗಪ್ಪ, ರಮೇಶ್, ವೆಂಕಟೇಶ್, ಟಿಹೆಚ್ಒ ಡಾ.ಬಿಂದು ಮಾಧವ, ಡಾ.ಸುಪ್ರತಿಕ್ ಸಹ, ಪಿಹೆಚ್ಒ ರೇಣುಕ, ಮಂಜುಳ, ಪಿಡಿಒ ಮಂಜುಳಾ ಪಾಟೀಲ್, ಮಂಜಮ್ಮ, ಕವಿತ, ಗುತ್ತಿಗೆದಾರರಾದ ರಾಘವೇಂದ್ರ, ಚಿದಂಬರ್ ದೀಕ್ಷಿತ್, ಸಿಎಸ್.ಪುರ ಎಸ್.ಸುನಿಲ್ ಕುಮಾರ್, ಎಇಇ ಚಂದ್ರಶೇಖರ್, ಇಂಜಿನಿಯರ್ ನಂದ ಮತ್ತಿತರರು ಇದ್ದರು.