ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತುಮಕೂರಿನ ಲಕ್ಕೇನಹಳ್ಳಿಯಲ್ಲಿ ಅಪರೂಪದ 'ಚಿಪ್ಪು ಹಂದಿ' ರಕ್ಷಣೆ

Tumkur News: ತುಮಕೂರು ತಾಲೂಕಿನ ನಾಗವಲ್ಲಿ ಸಮೀಪದ ಲಕ್ಕೇನಹಳ್ಳಿಯಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ 'ಚಿಪ್ಪು ಹಂದಿ' ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ತುಮಕೂರಿನ ಲಕ್ಕೇನಹಳ್ಳಿಯಲ್ಲಿ ಅಪರೂಪದ 'ಚಿಪ್ಪು ಹಂದಿ' ರಕ್ಷಣೆ

-

Profile
Siddalinga Swamy Oct 5, 2026 3:22 PM

ತುಮಕೂರು, ಅ.05: ತುಮಕೂರು ತಾಲೂಕಿನ (Tumkur News) ನಾಗವಲ್ಲಿ ಸಮೀಪದ ಲಕ್ಕೇನಹಳ್ಳಿಯಲ್ಲಿ ಅಳಿವಿನಂಚಿನಲ್ಲಿರುವ ಅಪರೂಪದ ವನ್ಯಜೀವಿ 'ಚಿಪ್ಪು ಹಂದಿ' ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಲಕ್ಕೇನಹಳ್ಳಿಯ ನಿವಾಸಿ ಮಮತಾ ಯೋಗೀಶ್ ಅವರ ದನದ ಕೊಟ್ಟಿಗೆಯಲ್ಲಿ ಈ ಅಪರೂಪದ ಪ್ರಾಣಿ ಕಾಣಿಸಿಕೊಂಡಿದೆ. ಕೊಟ್ಟಿಗೆಯಲ್ಲಿ ವಿಚಿತ್ರ ಪ್ರಾಣಿಯನ್ನು ಗಮನಿಸಿದ ಯೋಗೀಶ್ ಅವರು, ಯಾವುದೇ ಆತಂಕಕ್ಕೆ ಒಳಗಾಗದೆ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ವನ್ಯಜೀವಿ ರಕ್ಷಕರು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಆರ್‌ಎಫ್‌ಒ ಬಸವರಾಜು ಗೋಗೇರಿ ಅವರ ನೇತೃತ್ವದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.

ವಾರಂಗಲ್ ವನ್ಯಜೀವಿ ಹಾಗೂ ಉರಗ ರಕ್ಷಣೆ ಸಂಸ್ಥೆಯ ದಿಲೀಪ್ ಅವರು ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಾಣಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆಹಿಡಿದು, ನಂತರ ಅದನ್ನು ದೇವರಾಯನದುರ್ಗದ ಅರಣ್ಯ ಪ್ರದೇಶದಲ್ಲಿ ಬಿಡುಗಡೆ ಮಾಡಲಾಯಿತು.‌

ದಕ್ಷಿಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಾಜೇಂದ್ರ ಬಿ. ಸಿರಸಿಕರ್; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆ

ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಚಿಪ್ಪು ಹಂದಿಗಳು ಕಾಣಿಸಿಕೊಳ್ಳುವುದು ತೀರಾ ಅಪರೂಪವಾಗಿದೆ. ಅರಣ್ಯದಿಂದ ದಾರಿ ತಪ್ಪಿ ಆಹಾರ ಹುಡುಕುತ್ತಾ ಇದು ನಾಡಿನತ್ತ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸ್ಥಳೀಯ ನಿವಾಸಿ ಯೋಗೀಶ್ ಅವರ ಸಮಯಪ್ರಜ್ಞೆಯಿಂದಾಗಿ ಅಪರೂಪದ ವನ್ಯಜೀವಿಯೊಂದು ಪ್ರಾಣಾಪಾಯದಿಂದ ಪಾರಾದಂತಾಗಿದೆ.