ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

LIC All-India Sports : ಬೆಂಗಳೂರಿನಲ್ಲಿ ಎಲ್‌ಐಸಿ ಅಖಿಲ ಭಾರತ ಕ್ರೀಡಾಕೂಟಕ್ಕೆ ಚಾಲನೆ

ಎಲ್‌ಐಸಿಯ ವಾರ್ಷಿಕ ಕ್ರೀಡಾಕೂಟವಾಗಿರುವ ಈ ನಾಲ್ಕು ದಿನಗಳ ಕ್ರೀಡಾ ಕಾರ್ಯಕ್ರಮದಲ್ಲಿ ಕ್ಯಾರಂ, ಚೆಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಸೇರಿದಂತೆ ಆರು ಕ್ರೀಡಾ ವಿಭಾಗ ಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲ್‌ಐಸಿಯ ಎಂಟು ವಲಯಗಳನ್ನು ಪ್ರತಿನಿಧಿಸುವ ಸುಮಾರು 376 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಎಲ್‌ಐಸಿ ಅಖಿಲ ಭಾರತ ಕ್ರೀಡಾಕೂಟಕ್ಕೆ ಚಾಲನೆ

-

Profile
Ashok Nayak Oct 5, 2026 10:56 PM

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ದೊರೈಸ್ವಾಮಿ ಅವರು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ(Kantheerava Stadium)ದಲ್ಲಿ ಎಲ್‌ಐಸಿ ಅಖಿಲ ಭಾರತ ಕ್ರೀಡಾಕೂಟ 2026–27ಕ್ಕೆ ಚಾಲನೆ ನೀಡಿದರು.

ಎಲ್‌ಐಸಿಯ ವಾರ್ಷಿಕ ಕ್ರೀಡಾಕೂಟವಾಗಿರುವ ಈ ನಾಲ್ಕು ದಿನಗಳ ಕ್ರೀಡಾ ಕಾರ್ಯಕ್ರಮದಲ್ಲಿ ಕ್ಯಾರಂ, ಚೆಸ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಸೇರಿದಂತೆ ಆರು ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಎಲ್‌ಐಸಿಯ ಎಂಟು ವಲಯಗಳನ್ನು ಪ್ರತಿನಿಧಿ ಸುವ ಸುಮಾರು 376 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.

ಭಾಗವಹಿಸಿದ ಕ್ರೀಡಾಪಟುಗಳ ಪಥಸಂಚಲನದೊಂದಿಗೆ ಉದ್ಘಾಟನಾ ಸಮಾರಂಭ ಆರಂಭ ವಾಯಿತು. ಬಳಿಕ ಎಲ್‌ಐಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ದೊರೈಸ್ವಾಮಿ ಅವರು ನಿಗಮದ ಧ್ವಜಾರೋಹಣ ನೆರವೇರಿಸಿ, ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು.

ಇದನ್ನೂ ಓದಿ: Sree Kanteerava: ಕ್ರಿಕೆಟ್‌ ಬಳಿಕ ಫುಟ್ಬಾಲ್‌ ಪಂದ್ಯವೂ ಬೆಂಗಳೂರಿನಿಂದ ಶಿಫ್ಟ್‌

ಕ್ರೀಡಾಪಟುಗಳನ್ನುದ್ದೇಶಿಸಿ ಮಾತನಾಡಿದ ಆರ್.ದೊರೈಸ್ವಾಮಿ ಅವರು, ಕ್ರೀಡೆಗಳು ಕೇವಲ ಸ್ಪರ್ಧೆಗೆ ಸೀಮಿತವಾಗಿರದೆ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಕ್ರೀಡಾಪಟುಗಳು ಉತ್ಸಾಹ ಹಾಗೂ ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸುವುದರ ಜೊತೆಗೆ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವಂತೆ ಅವರು ಕರೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕಿ (ಎಚ್‌ಆರ್‌ಡಿ ಮತ್ತು ತರಬೇತಿ) ಶ್ರೀಮತಿ ಎಸ್. ಗಿರಿಜಾ, ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಪೊರೇಟ್ ಕಮ್ಯುನಿಕೇಷನ್) ಪ್ರದೀಪ್ ಪಿ. ಶೆಣೈ, ಕಾರ್ಯನಿರ್ವಾಹಕ ನಿರ್ದೇಶಕಿ (ಪರ್ಸನಲ್) ಶ್ರೀಮತಿ ಲತಾ ಮಡಂಪತ್, ದಕ್ಷಿಣ ಕೇಂದ್ರ ವಲಯದ ವಲಯ ವ್ಯವಸ್ಥಾಪಕ ಸರವಣ ರಮೇಶ್ ಎಸ್. ಹಾಗೂ ಬೆಂಗಳೂರು ವಿಭಾಗ–1ರ ಹಿರಿಯ ವಿಭಾಗೀಯ ವ್ಯವಸ್ಥಾಪಕ ಆರ್. ಕೆ. ಯಾದವ್ ಉಪಸ್ಥಿತರಿದ್ದರು.

ಎಲ್‌ಐಸಿ ಅಖಿಲ ಭಾರತ ಕ್ರೀಡಾಕೂಟ ಅ.8ರಂದು ಮುಕ್ತಾಯಗೊಳ್ಳಲಿದೆ. ಸಮಾರೋಪ ಸಮಾರಂಭವು ಎಲ್‌ಐಸಿಯ ವ್ಯವಸ್ಥಾಪಕ ನಿರ್ದೇಶಕ ಆರ್. ಚಂದರ್ ಅವರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.