Gubbi News: ವಿಜೃಂಭಣೆಯಿಂದ ಜರುಗಿದ ಸಿಡಿಲು ಬಸವಣ್ಣ ಪರೇವು ಜಾತ್ರೆ
ಪ್ರತಿ ವರ್ಷದಂತೆ ಶ್ರಾವಣ ಮಾಸದ ಕಡೇ ಸೋಮವಾರ ನಡೆಯುವ ಪರೇವು ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ರುದ್ರಾಭಿಷೇಕ ಮೂಲಕ ಪೂಜಾ ವಿಧಿವತ್ತಾಗಿ ನಡೆದು ನಂತರ ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಿತು. ಈ ಜಾತ್ರೆಯ ವಿಶೇಷ ಮಹಾ ದಾಸೋಹ ಅಚ್ಚುಕಟ್ಟಾಗಿ ಸಾವಿರಾರು ಭಕ್ತರಿಗೆ ಸಮಿತಿಯ ಮೂಲಕ ಹಂಚಲಾಯಿತು.
-
ಗುಬ್ಬಿ: ಇತಿಹಾಸ ಪ್ರಸಿದ್ಧ ಗುಬ್ಬಿಯ ಶ್ರೀ ಸಿಡಿಲು ಬಸವೇಶ್ವರಸ್ವಾಮಿ ಪರೇವು ಜಾತ್ರಾ ಮಹೋತ್ಸವ ಶ್ರಾವಣ ಮಾಸದ ಕಡೇ ಸೋಮವಾರ ಧಾರ್ಮಿಕ ವಿಧಿವತ್ತಾಗಿ ಜರುಗಿತು.
ಪ್ರತಿ ವರ್ಷದಂತೆ ಶ್ರಾವಣ ಮಾಸದ ಕಡೇ ಸೋಮವಾರ ನಡೆಯುವ ಪರೇವು ಜಾತ್ರೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ರುದ್ರಾಭಿಷೇಕ ಮೂಲಕ ಪೂಜಾ ವಿಧಿವತ್ತಾಗಿ ನಡೆದು ನಂತರ ವಿಶೇಷ ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಿತು. ಈ ಜಾತ್ರೆಯ ವಿಶೇಷ ಮಹಾದಾಸೋಹ ಅಚ್ಚುಕಟ್ಟಾಗಿ ಸಾವಿರಾರು ಭಕ್ತರಿಗೆ ಸಮಿತಿಯ ಮೂಲಕ ಹಂಚಲಾಯಿತು.
ಇದನ್ನೂ ಓದಿ: Gubbi News: ವ್ಯಕ್ತಿತ್ವ ವಿಕಸನಕ್ಕೆ ಧರ್ಮಸ್ಥಳ ಸಂಸ್ಥೆ : ಭಾರತಿ ಶ್ರೀನಿವಾಸ್
ಅಮಾವಾಸ್ಯೆ, ಪೌರ್ಣಮಿ ಪೂಜೆ ವರ್ಷವಿಡೀ ವಿಶೇಷವಾಗಿ ನಡೆದು ಬಂದ ಈ ಬಸವಣ್ಣ ಶಕ್ತಿಸ್ಥಳ ಎನ್ನಲಾಗಿದೆ. ಸುಮಾರು ನಾಲ್ಕು ದಶಕಗಳ ಇತಿಹಾಸ ಹೊಂದಿ ಶರಣರ ಪೂಜಾ ವಿಧಿಗೆ ಒಳಪಟ್ಟ ಬಸವಣ್ಣ ವಿಗ್ರಹ ಬಯಲಿನಲ್ಲಿದೆ. ಸಿಡಿಲು ಬಡಿದು ಇಬ್ಭಾಗವಾದ ಬಸವಣ್ಣನ ವಿಗ್ರಹ ಭಿನ್ನವಾದ ಬಳಿಕ ಮಹಾಶಕ್ತಿ ಹೊಂದಿದೆ. ಈ ಹಿನ್ನಲೆ ಅನೇಕ ಜಾತಿ ಧರ್ಮದ ಭಕ್ತರು ಹರಕೆ ಪೂಜೆ ಸಲ್ಲಿಸು ತ್ತಾರೆ ಎಂಬುದು ಮತ್ತೊಂದು ವಿಶೇಷ.
ಪರೇವು ಜಾತ್ರೆಯ ವಿಶೇಷ ಅನ್ನದಾಸೋಹ. ಭಕ್ತರ ದೇಣಿಗೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಪರೇವು ಜಾತ್ರೆ ಮಹಾ ದಾಸೋಹಕ್ಕೆ ಅನುವು ಮಾಡಲು ಸಮುದಾಯ ಭವನ ಕಟ್ಟಲು ಟ್ರಸ್ಟ್ ನಿರಂತರ ಪ್ರಯತ್ನಪಟ್ಟು ಭಕ್ತರ ದೇಣಿಗೆ ಮೂಲಕ ಭವನ ನಿರ್ಮಾಣ ಮಾಡಿದ್ದಾರೆ. ಈ ಜಾತ್ರೆಯ ಸಂದರ್ಭದಲ್ಲೇ ತೊರೆಮಠ ಶ್ರೀ ಅಟವಿ ಚನ್ನಬಸವ ಸ್ವಾಮೀಜಿ ಹಾಗೂ ಚಿಕ್ಕತೊಟ್ಲ ಕೆರೆ ಶ್ರೀ ಅಟವಿ ಮಲ್ಲಿಕಾರ್ಜುನ ಸ್ವಾಮೀಜಿ ಇವರು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಸಮುದಾಯಭವನ ಲೋಕಾರ್ಪಣೆ ಮಾಡಿದರು.
ಈ ಜಾತ್ರೆಗೆ ಮೈತ್ರಿ ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಜಿ.ಎನ್.ಬೆಟ್ಟ ಸ್ವಾಮಿ, ಪಪಂ ಮಾಜಿ ಸದಸ್ಯರಾದ ಜಿ.ಆರ್.ಶಿವಕುಮಾರ್, ಜಿ.ಎನ್.ಅಣ್ಣಪ್ಪಸ್ವಾಮಿ ಸೇರಿದಂತೆ ಶ್ರೀ ಸಿಡಿಲು ಬಸವೇಶ್ವರಸ್ವಾಮಿ ಜಾತ್ರಾ ಸಮಿತಿಯ ಅಧ್ಯಕ್ಷರಾದಿ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.