ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Tumkur news: ನಾಪತ್ತೆಯಾಗಿದ್ದ ಮಹಿಳೆಯ ತಲೆಬುರುಡೆ ಪತ್ತೆ, ಸಿಸಿಟಿವಿಯಲ್ಲಿ ಸಿಕ್ಕಿತು ಕೊಲೆ ಸುಳಿವು

ಮೃತ ಯುಮುನಾ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಾ.19ರಂದು ಬರ್ತಡೇ ಆಚರಿಸಿಕೊಂಡಿದ್ದರು. ನಂತರ ಮಾ.21ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಅಂದು ಸಂಜೆ ಕೆಲಸ ಬಿಟ್ಟಾಗ ಅನೈತಿಕ ಸಂಬಂಧ ಹೊಂದಿದ್ದ ರಾಘವೇಂದ್ರನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಾಪತ್ತೆಯಾದ ಮಹಿಳೆಯ ತಲೆಬುರುಡೆ ಪತ್ತೆ, ಸಿಸಿಟಿವಿ ನೀಡಿತು ಕೊಲೆ ಸುಳಿವು

ಮೃತ ಯಮುನಾ -

ಹರೀಶ್‌ ಕೇರ
ಹರೀಶ್‌ ಕೇರ Apr 17, 2026 11:06 AM

ದಾಬಸ್‍ಪೇಟೆ, ಏ.17: ನಾಪತ್ತೆಯಾಗಿದ್ದ (missing case) ಮಹಿಳೆಯೊಬ್ಬರ (woman) ತಲೆಬುರುಡೆ ಸೇರಿದಂತೆ ದೇಹಭಾಗಗಳು ಪತ್ತೆಯಾಗಿರುವ (body found) ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುಮಕೂರು (Tumkur news) ಜಿಲ್ಲೆಯ ಕ್ಯಾತ್ಸಂದ್ರದ ಬಸವೇಶ್ವರ ಬಡಾವಣೆಯಲ್ಲಿ ವಾಸವಿದ್ದ ಯಮುನಾ (38) ಮೃತಪಟ್ಟ ಮಹಿಳೆ. ಇವರ ತಲೆಬುರುಡೆ, ಬ್ಯಾಗ್, ಬಟ್ಟೆಯು ಸೋಂಪುರ ಹೋಬಳಿಯ ಹಳೆನಿಜಗಲ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ- 48ರ ರಸ್ತೆ ಪಕ್ಕದ ಜಮೀನಿನಲ್ಲಿ ಪತ್ತೆಯಾಗಿದೆ.

ಹಳೆನಿಜಗಲ್ ಬಳಿಯಿರುವ ರಿಲಯನ್ಸ್ ಕಂಪನಿಯಲ್ಲಿ ಕಳೆದ ಆರೇಳು ತಿಂಗಳುಗಳಿಂದ ಇವರು ಕೆಲಸ ಮಾಡುತ್ತಿದ್ದರು. ಮಹಿಳೆ ಮಲ್ಲಿಕಾರ್ಜುನ್ ಎಂಬವರ ಜೊತೆ 19 ವರ್ಷದ ಹಿಂದೆ ವಿವಾಹವಾಗಿದ್ದರು. ಈಕೆಗೆ ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಮೃತ ಯಮುನಾ ಕಳೆದ ಮಾ.21ರಂದು ಕೆಲಸಕ್ಕೆ ಬಂದಿದ್ದು, ನಂತರ ಮನೆಗೆ ವಾಪಸು ಹೋಗದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಮೃತಳ ಪತಿ ಮಲ್ಲಿಕಾರ್ಜುನ್ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ನಂದಿಹಳ್ಳಿ ಗ್ರಾಮದ ಉಮೇಶ್ ಎಂಬವರು ತಮ್ಮ ಜಮೀನಿನಲ್ಲಿ ದೇವರ ಕಲ್ಲುಗಳಿದ್ದು, ಅದನ್ನು ಪೂಜಿಸಲು ಬಂದಾಗ ತಲೆಬುರುಡೆ ಬಿದ್ದಿರುವುದನ್ನು ಕಂಡಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದಾಬಸ್‍ಪೇಟೆ ಹಾಗೂ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಘಟನಾ ಸ್ಥಳದಲ್ಲಿ ತಲೆಬುರುಡೆ, ಕಾಲಿನ ಮೂಳೆಗಳು, ಬ್ಯಾಗ್, ವಾಟರ್ ಬಾಟಲ್, ಕಂಪನಿ ಐಡಿ ಕಾರ್ಡ್, ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಪರಿಶೀಲನೆ ನಡೆಸಿದಾಗ ಮಹಿಳೆಯ ಗುರುತು ಪತ್ತೆಯಾಗಿದೆ.

ಛೇ ಇದೆಂಥಾ ಅಸಹ್ಯ: ಸ್ಟಾರ್‌ಬಕ್ಸ್ ಕ್ಯಾನ್‌ನಲ್ಲಿ ಪತ್ತೆಯಾಯ್ತು ಸತ್ತ ಇಲಿ! ವಿಡಿಯೋ ನೋಡಿ

ಅನೈತಿಕ ಸಂಬಂಧದ ಶಂಕೆ

ಮೃತಳಿಗೆ ಗಂಡನ ತವರೂರಾದ ದೊಡ್ಡಬಳ್ಳಾಪುರ ತಾಲೂಕಿನ ಕೊಡಿಗೇಹಳ್ಳಿ ಗ್ರಾಮದಲ್ಲಿ ರಾಘವೇಂದ್ರ ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು. ಆತನ ಜೊತೆ ಆರೇಳು ವರ್ಷ ಸಂಸಾರ ನಡೆಸಿ ನಂತರ ಗಂಡನ ಮನೆಗೆ ವಾಪಾಸ್ಸು ಬಂದಿದ್ದರು. ಆದಾದ ಮೇಲೂ ರಾಘವೇಂದ್ರ ಈಕೆಗೆ ಮತ್ತೆ ನನ್ನ ಜೊತೆ ಬಂದು ಸಂಸಾರ ನಡೆಸುವಂತೆ ಕಿರುಕುಳ ಕೊಡುವುದಲ್ಲದೆ ನನ್ನ ಜೊತೆ ಬಾರದಿದ್ದರೆ ನಿನ್ನ ಗಂಡ, ಮಕ್ಕಳು ಸೇರಿದಂತೆ ನಿನ್ನನ್ನು ಸಾಯಿಸುತ್ತೇನೆಂದು ಜೀವ ಬೆದರಿಕೆ ಕೂಡ ಹಾಕಿರುವ ಬಗ್ಗೆ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಯುಮುನಾ ತನ್ನ ಗಂಡ ಹಾಗೂ ಮಕ್ಕಳೊಂದಿಗೆ ಮಾ.19ರಂದು ಬರ್ತಡೇ ಆಚರಿಸಿಕೊಂಡಿದ್ದರು. ನಂತರ ಮಾ.21ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದಾರೆ. ಅಂದು ಸಂಜೆ ಕೆಲಸ ಬಿಟ್ಟಾಗ ಅನೈತಿಕ ಸಂಬಂಧ ಹೊಂದಿದ್ದ ರಾಘವೇಂದ್ರನ ಜೊತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆರೋಗ್ಯ ತಪಾಸಣೆಗೆ ಹೋದವರಲ್ಲಿ ದೀರ್ಘಕಾಲದಿಂದಿದ್ದ ಕಾಯಿಲೆ ಪತ್ತೆ

ರಸ್ತೆ ಪಕ್ಕದಲ್ಲೇ ಇರುವ ಜಮೀನಿಗೆ ಇಬ್ಬರೂ ಹೋಗಿದ್ದು ಅಲ್ಲಿ ಮೃತ ಯುಮುನಾ ಹಾಗೂ ರಾಘವೇಂದ್ರನ ನಡುವೆ ಜಗಳವಾಗಿದ್ದು, ಮಾತಿಗೆ ಮಾತು ಬೆಳೆದು ರಾಘವೇಂದ್ರ ಆಕೆಯನ್ನು ಕೊಲೆ ಮಾಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ನಾಪತ್ತೆಯಾಗಿರುವ ರಾಘವೇಂದ್ರನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ಜಗದೀಶ್, ಇನ್ಸ್ ಪೆಕ್ಟರ್‌ಗಳಾದ ಭರತ್ ಗೌಡ, ಗಿರೀಶ್, ನರೇಂದ್ರಬಾಬು, ಸಬ್ ಇನ್ಸ್ ಪೆಕ್ಟರ್ ಗಳಾದ ಸಿದ್ದಪ್ಪ, ದಿವ್ಯ, ವಿಧಿವಿಜ್ಞಾನ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.