ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಾಧನೆಗೆ ವಯಸ್ಸು ಅಡ್ಡಿಯಲ್ಲ; 76ನೇ ವರ್ಷದಲ್ಲಿ LLMನಲ್ಲಿ 4ನೇ ರ‍್ಯಾಂಕ್ ಪಡೆದ ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ

Tumkur News: ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ 76ನೇ ವಯಸ್ಸಿನಲ್ಲಿ ಕಾನೂನು ವಿಭಾಗದ ಎಲ್‌ಎಲ್‌ಎಂ ಕೋರ್ಸ್‌ನಲ್ಲಿ ನಾಲ್ಕನೇ ರ‍್ಯಾಂಕ್ ಪಡೆಯುವ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ಅವರು ಪ್ರಮಾಣ ಪತ್ರ ಸ್ವೀಕರಿಸಿದರು.

76ನೇ ವಯಸ್ಸಿನಲ್ಲಿ  4ನೇ ರ‍್ಯಾಂಕ್ ಪಡೆದ ವಿ. ತಿಪ್ಪೇಸ್ವಾಮಿ

ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ (ಸಂಗ್ರಹ ಚಿತ್ರ) -

Profile
Siddalinga Swamy Jun 4, 2026 6:04 PM

ತುಮಕೂರು, ಜೂ. 4: ನಿವೃತ್ತ ಅಧಿಕಾರಿ ವಿ. ತಿಪ್ಪೇಸ್ವಾಮಿ 76ನೇ ವಯಸ್ಸಿನಲ್ಲಿ ಕಾನೂನು ವಿಭಾಗದ ಎಲ್‌ಎಲ್‌ಎಂ ಕೋರ್ಸ್‌ನಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ನಾಲ್ಕನೇ ರ‍್ಯಾಂಕ್ ಪಡೆಯುವ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದ ವಿ. ತಿಪ್ಪೇಸ್ವಾಮಿ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಉಪ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ, 2011ರಲ್ಲಿ ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಾರೆ.

ನಿವೃತ್ತಿಯ ನಂತರ ತುಮಕೂರು ವಿಶ್ವವಿದ್ಯಾಲಯದ ಅಕಾಡೆಮಿಕ್ ವಿಭಾಗದಲ್ಲಿ ಸತತ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿ, ಆ ಅವಧಿಯಲ್ಲಿಯೇ ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ತಮ್ಮ ಕಾನೂನು ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಆನಂತರ ಬೆಂಗಳೂರಿನ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರ‍್ಯಾಂಕ್ ಸಾಧನೆಯ ಹಾದಿ

ತುಮಕೂರು ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ಸ್ನಾತಕೋತ್ತರ ಕಾನೂನು ವಿಭಾಗ ಆರಂಭವಾದಾಗ ವಿ. ತಿಪ್ಪೇಸ್ವಾಮಿ ದಾಖಲಾತಿ ಪಡೆದು ಉತ್ತಮ ಅಭ್ಯಾಸ ನಡೆಸಿ ಅಂತಿಮವಾಗಿ 19ನೇ ಘಟಿಕೋತ್ಸವ ಸಮಾರಂಭದಲ್ಲಿ ಸ್ನಾತಕೋತ್ತರ ಕಾನೂನು ವಿಭಾಗದ ಹಿರಿಯ ವಿದ್ಯಾರ್ಥಿಯಾಗಿ ಅಧಿಕೃತವಾಗಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದಾಗ ಇಡೀ ಸಭಾಂಗಣವೇ ಹರ್ಷ ವ್ಯಕ್ತಪಡಿಸಿತು. ಒಟ್ಟು 28 ವಿದ್ಯಾರ್ಥಿಗಳಿದ್ದು, ಅವರ ನಡುವೆ ಸ್ಪರ್ಧಿಸಿ ಇವರು 4ನೇ ರ‍್ಯಾಂಕ್ ಮುಡಿಗೇರಿಸಿಕೊಂಡಿದ್ದಾರೆ.

ಡಿಜಿಟಲ್ ಆರ್ಥಿಕತೆಯಲ್ಲಿ ವಿಶ್ವದಲ್ಲೇ 5ನೇ ಸ್ಥಾನಕ್ಕೆ ಜಿಗಿದ ಭಾರತ

ʼʼನ್ಯಾಯಾಲಯದಲ್ಲಿ ನಡೆಯುತ್ತಿರುವ ವಿವಿಧ ಪ್ರಕರಣಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ದಿನೇ ದಿನೆ ದೇಶದಲ್ಲಿ ಮೊಕದ್ದಮೆಗಳ ಸಂಖ್ಯೆಯೂ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಜ್ಞಾನ ಮತ್ತು ಕಾನೂನಿನ ಆಳವಾದ ತಿಳಿವಳಿಕೆಯನ್ನು ಪಡೆಯುವ ಮುಖ್ಯ ಉದ್ದೇಶದಿಂದ ನಾನು ಮತ್ತೆ ಕಾಲೇಜು ಸೇರಿ ಓದಲು ನಿರ್ಧರಿಸಿದೆ. ಕಷ್ಟಪಟ್ಟು ಮತ್ತು ಶ್ರದ್ಧೆಯಿಂದ ಓದಿದರೆ ಜೀವನದಲ್ಲಿ ಎಲ್ಲವೂ ಸಾಧ್ಯವಾಗುತ್ತದೆ. ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನಮ್ಮ ಇಡೀ ಜೀವನದಲ್ಲಿ ವಿದ್ಯಾರ್ಥಿ ಜೀವನ ಎಂಬುದು ತುಂಬಾ ಮುಖ್ಯವಾದದ್ದುʼʼ ಎಂದು ತಿಪ್ಪೇಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.