ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಮರ್ಷಿಯಲ್ ಶೆಡ್ಡುಗಳ ನಿರ್ಮಾಣ ಕಣ್ಮುಚ್ಚಿ ಕುಳಿತ ನಗರಸಭೆ, ಸಾರ್ವಜನಿಕರ ಆಕ್ರೋಶ: ಜನವಸತಿ ಪ್ರದೇಶಗಳಲ್ಲಿ ಅನಧಿಕೃತ ಕಮರ್ಷಿಯಲ್ ಶೆಡ್ಡುಗಳು!

ನಗರ ಪ್ರದೇಶದಲ್ಲಿ ಕೆಲ ಸೈಟಿನ ಮಾಲೀಕರು ಹಣ ಮಾಡುವ ಆಸೆಯಿಂದಾಗಿ ಶೆಡ್ಡು ಗಳನ್ನು ನಿರ್ಮಿಸಿ ಬಾಡಿಗೆಗೆ ಅಥವಾ ಜಾಗವನ್ನು ಭೋಗ್ಯಕ್ಕೆ ಕೊಡುತ್ತಿದ್ದಾರೆ. ಅಂತಹ ಶೆಡ್ಡುಗಳ ಬಾಡಿಗೆದಾರರು ಯಾವ ರೀತಿಯಲ್ಲಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ, ಇದರಿಂದ ಅಕ್ಕಪಕ್ಕ ದವರಿಗೆ ತೊಂದರೆಯಾಗುತ್ತಿದೆಯೇ ಎಂಬುದನ್ನು ಅರಿಯಬೇಕಿದೆ.

Tiptur News: ಜನವಸತಿ ಪ್ರದೇಶಗಳಲ್ಲಿ ಅನಧಿಕೃತ ಕಮರ್ಷಿಯಲ್ ಶೆಡ್ಡುಗಳು!

-

Profile
Ashok Nayak Jun 3, 2026 9:09 AM

ತಿಪಟೂರು: ಕೆಲವು ವರ್ಷಗಳಿಂದ ಜನವಸತಿ ಪ್ರದೇಶಗಳಲ್ಲಿ ಅನಧಿಕೃತ ಕಮರ್ಷಿಯಲ್ ಶೆಡ್ಡುಗಳ ನಿರ್ಮಾಣದಿಂದಾಗಿ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ.

ನಗರ ಪ್ರದೇಶದಲ್ಲಿ ಕೆಲ ಸೈಟಿನ ಮಾಲೀಕರು ಹಣ ಮಾಡುವ ಆಸೆಯಿಂದಾಗಿ ಶೆಡ್ಡು ಗಳನ್ನು ನಿರ್ಮಿಸಿ ಬಾಡಿಗೆಗೆ ಅಥವಾ ಜಾಗವನ್ನು ಭೋಗ್ಯಕ್ಕೆ ಕೊಡುತ್ತಿದ್ದಾರೆ. ಅಂತಹ ಶೆಡ್ಡುಗಳ ಬಾಡಿಗೆದಾರರು ಯಾವ ರೀತಿಯಲ್ಲಿ ಅದನ್ನು ಬಳಸಿಕೊಳ್ಳುತ್ತಿದ್ದಾರೆ, ಇದರಿಂದ ಅಕ್ಕಪಕ್ಕದವರಿಗೆ ತೊಂದರೆಯಾಗುತ್ತಿದೆಯೇ ಎಂಬುದನ್ನು ಅರಿಯಬೇಕಿದೆ.

ಇದನ್ನೂ ಓದಿ: Tiptur Rain: ಕೊಬ್ಬರಿ ನಾಡಿನಲ್ಲಿ ಬಿರುಗಾಳಿ ಸಹಿತ ವರುಣಾರ್ಭಟ; ಧರೆಗೆ ಉರುಳಿದ ನೂರಾರು ಕಲ್ಪವೃಕ್ಷ, ಶೆಡ್‌ ಶೀಟ್‌ ಬಿದ್ದು ಬಾಲಕನಿಗೆ ಗಂಭೀರ ಗಾಯ

ಸಾಮಾನ್ಯವಾಗಿ ವಸತಿ ಪ್ರದೇಶಗಳಲ್ಲಿ ಜನಸಾಮಾನ್ಯರ ದಿನಬಳಕೆ ವಸ್ತುಗಳನ್ನು ಪುಟ್ಟ ಶೆಡ್ಡುಗಳನ್ನು ಮಾಡಿ ಅಂಗಡಿ ರೂಪದಲ್ಲಿ ವ್ಯಾಪಾರ ಮಾಡುವುದು ಸಾರ್ವಜನಿಕರ ಅನುಕೂಲಕ್ಕಿರುವುದು ಒಳ್ಳೆಯದೇ. ಕೆಲ ಶೆಡ್ಡುಗಳು ಸಿಮೆಂಟ್ ಗೋಡನ್,2 ಮತ್ತು 4 ವೀಲರ್ ಪಾರ್ಕಿಂಗ್ ಮಾಡಲು, ಡ್ರಗ್( ಔಷಧಿ ) ಗೋಡನ್, ಇನ್ನು ಹಲವಾರು ವಸ್ತುಗಳ ಶೇಖರಣೆ ಮತ್ತು ಮಾರಾಟ ಮಾಡಲು ಉಪಯೋಗಿಸುತ್ತಾರೆ.

ಇನ್ನು ಕೆಲವಷ್ಟು ಪ್ರಭಾವಿ ವ್ಯಕ್ತಿಗಳು ಫೈನಾನ್ಸ್ ವ್ಯವಹಾರಗಳನ್ನು ಮಾಡುತ್ತಾ ಹಣ ಕೊಡದೇ ಇದ್ದಾಗ ಅವರ ವಾಹನಗಳನ್ನು ಸೀಜ್ ಶೆಡ್ಡುಗಳಲ್ಲಿ ನಿಲ್ಲಿಸುತ್ತಾರೆ. ಮತ್ತೆ ಕೆಲ ಜನ ನಮ್ಮದೇ ಸೈಟು ಅಲ್ಲವೇ ಯಾರು ಕೇಳುತ್ತಾರೆ ಎಂದು ಶೆಡ್ ಗಳನ್ನು ನಿರ್ಮಿಸಿ ಅದರಲ್ಲಿಯೇ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಾರೆ ಎಂಬ ಆರೋಪವೂ ಕೂಡ ಕೇಳಿ ಬರುತ್ತಿವೆ.

Tiptur 2

ನಗರದ ಕೆಲ ಅಫಿಶಿಯಲ್ ಲೇಔಟ್ ಗಳಲ್ಲಿ ಶೆಡ್ಡುಗಳ ದುರ್ಬಳಕೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರ ಅಭಿಪ್ರಾಯ. ಅಫಿಶಿಯಲ್ ಏರಿಯಾಗಳನ್ನು ಆಯ್ಕೆ ಮಾಡುವುದರ ಉದ್ದೇಶ ಜನಸಂದಣಿ ಕಮ್ಮಿ ಇರುತ್ತದೆ ಅವರ ಪಾಡಿಗೆ ಅವರು ಇರುತ್ತಾರೆ,ಮತ್ತೆ ಯಾರು ಪ್ರಶ್ನಿಸುವುದಿಲ್ಲ ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡಿದರೆ ಸಾಕು ಸುಮ್ಮನಾಗಿ ಬಿಡುತ್ತಾರೆ ಎಂಬ ಮನಸ್ಥಿತಿ ಅವರದ್ದಾಗಿರುತ್ತದೆ.

ಇದೀಗ ಹಾಸನ ರಸ್ತೆಯ ಶಿವ ನಗರದಲ್ಲಿರುವ ಕಮರ್ಷಿಯಲ್ ಶೆಡ್ ಒಂದು ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.ಈ ಶೆಡ್ಡಿಗೆ ಅಂತರ್ ರಾಜ್ಯ ನೊಂದಣಿ ವಾಹನಗಳು ಆಹಾರ ಪದಾರ್ಥಗಳನ್ನು ತುಂಬಿಕೊಂಡು ಬರುತ್ತವೆ. ಆದರೆ ಈ ಎಲ್ಲಾ ಆಹಾರ ಪದಾರ್ಥ ಗಳು ಅವಧಿ ಮೀರಿದ್ದು ಜೊತೆಗೆ ಆಹಾರ ಉತ್ಪಾದನೆಗೆ ಬಳಸುವ ಒಂದಷ್ಟು ರಾಸಾಯನಿಕ ಕೆಮಿಕಲ್ ಗಳು ಶೆಡ್ಡಿನ ಅಕ್ಕಪಕ್ಕ ಬಿದ್ದಿದ್ದು ಅವಧಿ ಮೀರಿದ ಆಹಾರ ಪದಾರ್ಥಗಳಿಂದ ಬರುವ ದುರ್ವಾಸನೆಯಿಂದ ಕಿರಿಕಿರಿ ಅನುಭವಿಸುತ್ತಿದ್ದು, ಈ ಶೆಡ್ಡಿಗೆ ಬರುವ ಆಹಾರ ಪದಾರ್ಥಗಳ ಎಲ್ಲಿಂದ ಆಮದು ಆಗುತ್ತಿವೆ ಮತ್ತೆ ಇವುಗಳನ್ನು ಮತ್ತೆ ಹೊಸ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರ ? ಹಾಗೇನಾದರೂ ಇದ್ದಲ್ಲಿ ಅಂತಹ ಆಹಾರ ಪದಾರ್ಥಗಳನ್ನು ತಿಂದಂಥವರ ಗತಿ ಏನು?ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ.

ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸಿ ಜನವಸತಿ ಬಡಾ ವಣೆಗಳಲ್ಲಿ ಅನಧಿಕೃತ ಕಮರ್ಷಿಯಲ್ ಶೆಡ್ಡುಗಳ ನಿರ್ಮಾಣಕ್ಕೆ ಕಡಿವಾಣ ಹಾಕುವುದರ ಜೊತೆಗೆ ತಪಾಸಣೆ ನಡೆಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.