Astrobase EVEREST ಅನಾವರಣ: ಭಾರತದ ಮೊದಲ ಖಾಸಗಿ ವಲಯದಲ್ಲಿ ನಿರ್ಮಿಸಲಾದ 800 kN Full-Flow Staged Combustion ರಾಕೆಟ್ ಎಂಜಿನ್
ಮುಂದಿನ ಹಂತವು ರಾಷ್ಟ್ರೀಯ ಆದ್ಯತೆಗಳು ಹಾಗೂ ವೇಗವಾಗಿ ವಿಸ್ತರಿಸುತ್ತಿರುವ ಜಾಗತಿಕ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ಬೇಕಾದ ಕೈಗಾರಿಕಾ ಸಿದ್ಧತೆ ಮತ್ತು ಹೆಚ್ಚಿನ ಉಡಾವಣಾ ಸಾಮರ್ಥ್ಯವನ್ನು ನಿರ್ಮಿಸುವುದಾಗಿದೆ. ಮುಂದಿನ ದಶಕದಲ್ಲಿ ಹತ್ತು ಸಾವಿರಾರು ಉಪಗ್ರಹಗಳನ್ನು ಉಡಾವಣೆ ಮಾಡುವ ನಿರೀಕ್ಷೆಯಿರುವುದರಿಂದ, ಸ್ವದೇಶಿ ಹೈ-ಥ್ರಸ್ಟ್ ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ವಿಸ್ತರಿಸಬಹುದಾದ ಉಡಾವಣಾ ಮೂಲಸೌಕರ್ಯಗಳು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ನಿರ್ಣಾಯಕವಾಗಲಿವೆ
-
ಭಾರತದ ಪ್ರಮುಖ ಸ್ಪೇಸ್-ಟೆಕ್ ಸಂಸ್ಥೆಯಾದ Astrobase Space Technologies, ಭಾರತದ ಮೊದಲ ಖಾಸಗಿ ವಲಯದಲ್ಲಿ ನಿರ್ಮಿಸಲಾದ 800 kN Full-Flow Staged Combustion (FFSC) LOX-Methane ರಾಕೆಟ್ ಎಂಜಿನ್ ‘EVEREST’ ಅನ್ನು ಇಂದು ಅನಾವರಣಗೊಳಿಸಿದೆ. ಈ ಮೂಲಕ ದೇಶದ ಸ್ವದೇಶಿ ಉಡಾವಣಾ ಮೂಲಸೌಕರ್ಯವನ್ನು ಬಲಪಡಿಸುವ ಹಾಗೂ ಪುನರ್ಬಳಕೆ ಮಾಡಬಹುದಾದ ಉಡಾವಣಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸಂಸ್ಥೆಯ ಪ್ರಯತ್ನಗಳಿಗೆ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ.
ಈ ಕಾರ್ಯಕ್ರಮಕ್ಕೆ IN-SPACeನ Distinguished Scientist ಹಾಗೂ Technical Directorate ನಿರ್ದೇಶಕರಾದ ಶ್ರೀ ರಾಜೀವ್ ಜ್ಯೋತಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ Astrobase Space Technologiesನ ಸಹ-ಸ್ಥಾಪಕರಾದ ನೀರಜ್ ಖಂಡೇಲ್ವಾಲ್ ಮತ್ತು ದೇವಕುಮಾರ್ ಟಿ., ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಹಾಗೂ Indian Space Associationನ Director General ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್ ಉಪಸ್ಥಿತರಿದ್ದರು.
EVEREST, ಪ್ರೊಪಲ್ಷನ್, ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಪರೀಕ್ಷೆ ಮತ್ತು ಕಕ್ಷೀಯ ಮೂಲ ಸೌಕರ್ಯವನ್ನು ಒಳಗೊಂಡ ಸಂಪೂರ್ಣವಾಗಿ ಸಮಗ್ರ ಉಡಾವಣಾ ಪರಿಸರ ವ್ಯವಸ್ಥೆ ನಿರ್ಮಿಸುವ Astrobaseನ ದೃಷ್ಟಿಕೋನದ ಪ್ರಮುಖ ಆರಂಭಿಕ ಹೆಜ್ಜೆಯಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ Astrobase Space Technologiesನ ಸಹ-ಸ್ಥಾಪಕ ಮತ್ತು CEO ನೀರಜ್ ಖಂಡೇಲ್ವಾಲ್ ಅವರು, “EVEREST ಕೇವಲ ಪ್ರತ್ಯೇಕ ತಂತ್ರಜ್ಞಾನ ಪ್ರದರ್ಶನವಲ್ಲ; ಮುಂದಿನ ವರ್ಷಗಳಲ್ಲಿ ಭಾರತಕ್ಕೆ ಅತ್ಯಂತ ಅಗತ್ಯವಾಗಲಿರುವ ಕೈಗಾರಿಕಾ ಸಾಮರ್ಥ್ಯಕ್ಕೆ ಇದು ಅಡಿಪಾಯವಾಗಿದೆ.
ಮುಂದಿನ ಹಂತವು ರಾಷ್ಟ್ರೀಯ ಆದ್ಯತೆಗಳು ಹಾಗೂ ವೇಗವಾಗಿ ವಿಸ್ತರಿಸುತ್ತಿರುವ ಜಾಗತಿಕ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸಲು ಬೇಕಾದ ಕೈಗಾರಿಕಾ ಸಿದ್ಧತೆ ಮತ್ತು ಹೆಚ್ಚಿನ ಉಡಾವಣಾ ಸಾಮರ್ಥ್ಯವನ್ನು ನಿರ್ಮಿಸುವುದಾಗಿದೆ. ಮುಂದಿನ ದಶಕದಲ್ಲಿ ಹತ್ತು ಸಾವಿರಾರು ಉಪಗ್ರಹಗಳನ್ನು ಉಡಾವಣೆ ಮಾಡುವ ನಿರೀಕ್ಷೆಯಿರುವುದರಿಂದ, ಸ್ವದೇಶಿ ಹೈ-ಥ್ರಸ್ಟ್ ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ವಿಸ್ತರಿಸಬಹುದಾದ ಉಡಾವಣಾ ಮೂಲಸೌಕರ್ಯಗಳು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸಲು ನಿರ್ಣಾಯಕವಾಗಲಿವೆ,” ಎಂದು ಹೇಳಿದರು.
EVEREST, ಹೆಚ್ಚಿನ ಥ್ರಸ್ಟ್ ಸಾಮರ್ಥ್ಯದ ರಾಕೆಟ್ ಎಂಜಿನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು, ಪರೀಕ್ಷಿಸಲು ಮತ್ತು ಅರ್ಹತೆ ಪಡೆಯಲು ಅಗತ್ಯವಿರುವ ಕೈಗಾರಿಕಾ ಸಾಮರ್ಥ್ಯ ನಿರ್ಮಿಸುವ Astrobaseನ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
ಕಂಪನಿಯು ವರ್ಷಕ್ಕೆ 50 EVEREST ಎಂಜಿನ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದುವಂತೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಮೊದಲ ಹಂತದಲ್ಲಿ, ವಾರ್ಷಿಕ ಸುಮಾರು 100 ಟನ್‌ಗಳ ಉಡಾವಣಾ ಸಾಮರ್ಥ್ಯ ಸಾಧಿಸುವ ಗುರಿ ಹೊಂದಿದ್ದು, ಇದು Low Earth Orbit (LEO)ನಲ್ಲಿ ಸುಮಾರು 500–700 ಉಪಗ್ರಹಗಳ ಸಮೂಹವನ್ನು ನಿರ್ವಹಿಸಲು ನೆರವಾಗಲಿದೆ. ಎರಡನೇ ಹಂತದಲ್ಲಿ ವೇಗದ ಉಡಾವಣಾ ಸರಣಿಯ ಮೂಲಕ ವಾರ್ಷಿಕ 1,000 ಟನ್‌ಗಳಿಗಿಂತ ಹೆಚ್ಚಿನ ಉಡಾವಣಾ ಸಾಮರ್ಥ್ಯ ಸಾಧಿಸುವ ಗುರಿಯನ್ನು ಹೊಂದಿದೆ.
ಸಂಪೂರ್ಣ ಸಾಮರ್ಥ್ಯಕ್ಕೆ ತಲುಪಿದ ಬಳಿಕ, Astrobaseನ ಸೌಲಭ್ಯಗಳು ಪ್ರತಿ ವಾರಕ್ಕೆ ಸರಾಸರಿ ಒಂದು ಹೈ-ಥ್ರಸ್ಟ್ ಎಂಜಿನ್‌ನ್ನು ತಯಾರಿಸಿ, ಹಾಟ್-ಫೈರ್ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದುವಂತೆ ವಿನ್ಯಾಸಗೊಳಿಸಲಾಗುತ್ತಿದೆ.
ಈ ಮಹತ್ವದ ಮೈಲಿಗಲ್ಲಿನ ಕುರಿತು ಮಾತನಾಡಿದ IN-SPACeನ Distinguished Scientist ಹಾಗೂ Technical Directorate ನಿರ್ದೇಶಕ ಶ್ರೀ ರಾಜೀವ್ ಜ್ಯೋತಿ ಅವರು, “Astrobase, ತನ್ನ 800 kN Full-Flow Staged Combustion ಎಂಜಿನ್ ಅಭಿವೃದ್ಧಿಗೆ ಬೆಂಬಲ ನೀಡುತ್ತಿರುವ IN-SPACeನ Technology Adoption Fund (TAF)ನ ಫಲಾನುಭವಿಗಳಲ್ಲಿ ಒಂದಾಗಿದೆ.
ಇಂತಹ ನವೀನ ಹಾಗೂ ತಾಂತ್ರಿಕವಾಗಿ ಸವಾಲಿನ ಯೋಜನೆಗಳನ್ನು ಖಾಸಗಿ ವಲಯ ಕೈಗೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದಲೇ TAF ಸ್ಥಾಪಿಸಲಾಗಿದೆ. ಎಂಜಿನ್‌ನ ಅಭಿವೃದ್ಧಿ ಮತ್ತು ಪರೀಕ್ಷೆ ಮುಂದುವರಿದಂತೆ, ಇದು ಬಾಹ್ಯಾಕಾಶಕ್ಕೆ ವಿಶ್ವಾಸಾರ್ಹ ಪ್ರವೇಶವನ್ನು ಒದಗಿಸುವ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಮತ್ತು ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ,” ಎಂದು ಹೇಳಿದರು.
EVERESTನ ಪ್ರಮುಖ ವೈಶಿಷ್ಟ್ಯಗಳು
ಭಾರತದ ಮೊದಲ ಖಾಸಗಿ ವಲಯದಲ್ಲಿ ನಿರ್ಮಿಸಲಾದ 800 kN Full-Flow Staged Combustion (FFSC) ರಾಕೆಟ್ ಎಂಜಿನ್
ಹೆಚ್ಚು ಸ್ವಚ್ಛ ಹಾಗೂ ಮುಂದಿನ ಪೀಳಿಗೆಯ ಉಡಾವಣಾ ವ್ಯವಸ್ಥೆಗಳಿಗಾಗಿ LOX-Methane ಪ್ರೊಪಲ್ಷನ್
ಪುನರ್ಬಳಕೆ ಮಾಡಬಹುದಾದ ಉಡಾವಣಾ ವ್ಯವಸ್ಥೆಗಳಿಗಾಗಿ ವಿನ್ಯಾಸ
800 kN ಥ್ರಸ್ಟ್, ಜೊತೆಗೆ ನಿಖರವಾದ ಮಿಷನ್ ನಿಯಂತ್ರಣಕ್ಕಾಗಿ 50%–110% ಥ್ರಾಟಲ್ ಸಾಮರ್ಥ್ಯ
ಸುಮಾರು 340 ಸೆಕೆಂಡ್‌ಗಳ Specific Impulse, ಹೆಚ್ಚಿನ ಪ್ರೊಪಲ್ಷನ್ ದಕ್ಷತೆ
Astrobaseನ ಇನ್-ಹೌಸ್ ಎಂಜಿನಿಯರಿಂಗ್ ತಂಡದಿಂದ ಸಂಪೂರ್ಣವಾಗಿ ವಿನ್ಯಾಸ ಮತ್ತು ಅಭಿವೃದ್ಧಿ
ಭಾರತದ ಅತಿದೊಡ್ಡ ಕೈಗಾರಿಕಾ 3D ಪ್ರಿಂಟರ್ ಸೇರಿದಂತೆ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನದ ಬಳಕೆ
ವಾಣಿಜ್ಯ ಹಾಗೂ ತಂತ್ರತಂತ್ರದ ಕಾರ್ಯಾಚರಣೆಗಳಿಗಾಗಿ ಮಧ್ಯಮ-ಭಾರ ಸಾಮರ್ಥ್ಯದ ಉಡಾವಣಾ ವಾಹನಗಳಿಗೆ ಬೆಂಬಲ
ಮೊದಲ ಕಕ್ಷೀಯ ಉಡಾವಣೆಗೆ ಮುನ್ನ ಸುಮಾರು 20 ಎಂಜಿನ್‌ಗಳನ್ನು ತಯಾರಿಸಿ ಪರೀಕ್ಷಿಸಲು Astrobase ಯೋಜಿಸಿದೆ. ಕಂಪನಿಯು ‘Launch-on-Demand’ ಸಾಮರ್ಥ್ಯದ ಮೇಲೆ ಕೇಂದ್ರೀ ಕರಿಸಿದ್ದು, ತುರ್ತು ರಾಷ್ಟ್ರೀಯ ಅಗತ್ಯ ಎದುರಾದ ಸಂದರ್ಭದಲ್ಲಿ ನಿರ್ದಿಷ್ಟ ಮಿಷನ್‌ನ್ನು ಸಿದ್ಧಪಡಿಸಿ 15 ದಿನಗಳೊಳಗೆ ಉಡಾವಣೆ ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ.
ದ್ರವ ಆಮ್ಲಜನಕ (Liquid Oxygen) ಮತ್ತು Methane ಇಂಧನವನ್ನು ಬಳಸುವ EVEREST, ಜಾಗತಿಕವಾಗಿ ಅತ್ಯಾಧುನಿಕ ರಾಕೆಟ್ ಎಂಜಿನ್ ವಿನ್ಯಾಸಗಳಲ್ಲಿ ಒಂದಾದ Full-Flow Staged Combustion cycle ತಂತ್ರಜ್ಞಾನವನ್ನು ಬಳಸುತ್ತದೆ.
800 kN ಥ್ರಸ್ಟ್, 340 ಸೆಕೆಂಡ್‌ಗಳ Specific Impulse ಮತ್ತು 50%–110% ಥ್ರಾಟಲ್ ವ್ಯಾಪ್ತಿಯೊಂದಿಗೆ, ಪುನರ್ಬಳಕೆ ಮಾಡಬಹುದಾದ ಮಧ್ಯಮ-ಭಾರ ಸಾಮರ್ಥ್ಯದ ಉಡಾವಣಾ ವಾಹನಗಳಿಗಾಗಿ ಎಂಜಿನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ನಿಖರವಾದ ನಿಯಂತ್ರಣ, ವೇಗದ ಮರುಸಿದ್ಧತೆ ಹಾಗೂ ಸುಧಾರಿತ ಉಡಾವಣಾ ಆರ್ಥಿಕತೆಗೆ ನೆರವಾಗುವ ಉದ್ದೇಶ ಹೊಂದಿದೆ.
ಎಂಜಿನ್ ಅನ್ನು Astrobaseನ ಇನ್-ಹೌಸ್ ಎಂಜಿನಿಯರಿಂಗ್ ತಂಡ ವಿನ್ಯಾಸಗೊಳಿಸಿದೆ. ಭಾರತದ ಅತಿದೊಡ್ಡ ಕೈಗಾರಿಕಾ 3D ಪ್ರಿಂಟರ್ ಸೇರಿದಂತೆ ಅತ್ಯಾಧುನಿಕ ಉತ್ಪಾದನಾ ಸಾಮರ್ಥ್ಯಗಳು ಸಂಕೀರ್ಣ ಎಂಜಿನ್ ಘಟಕಗಳ ವೇಗವಾದ ಉತ್ಪಾದನೆ ಮತ್ತು ವಿನ್ಯಾಸದ ಮರುಪರಿಶೀಲನೆಗೆ ನೆರವಾಗುವ ನಿರೀಕ್ಷೆಯಿದೆ.
ಉಡಾವಣಾ ಎಂಜಿನ್ ತಯಾರಿಕೆ ಮತ್ತು ಹೆಚ್ಚಿನ ಹರಿವಿನ ಪರೀಕ್ಷೆಯಿಂದ ಹಿಡಿದು ಸ್ಟೇಜ್ ಇಂಟಿಗ್ರೇಷನ್, ವಾಹನ ಅರ್ಹತಾ ಪರೀಕ್ಷೆ ಹಾಗೂ ಉಡಾವಣಾ ಕಾರ್ಯಾಚರಣೆಗಳವರೆಗೆ ಸಂಪೂರ್ಣ ಕೈಗಾರಿಕಾ ಸರಪಳಿಯನ್ನು Astrobase ಭಾರತದಲ್ಲೇ ನಿರ್ಮಿಸುತ್ತಿದೆ.
ಎಲ್ಲಾ ಪ್ರಮುಖ ಪ್ರೊಪಲ್ಷನ್ ವಿನ್ಯಾಸ ನಿಯಂತ್ರಣ, ಸಿಸ್ಟಮ್ ಎಂಜಿನಿಯರಿಂಗ್, ಉತ್ಪಾದನಾ ಜ್ಞಾನ, ಸಾಫ್ಟ್‌ವೇರ್, ಪರೀಕ್ಷಾ ಡೇಟಾ ಮತ್ತು ಮಿಷನ್ ಕಾನ್ಫಿಗರೇಷನ್ ಭಾರತೀಯ ನಿಯಂತ್ರಣದಲ್ಲೇ ಉಳಿಯಲಿದೆ ಎಂದು ಕಂಪನಿ ತಿಳಿಸಿದೆ.
ಈ ಕಾರ್ಯಕ್ರಮದ ಮುಂದಿನ ಪ್ರಮುಖ ಮೈಲಿಗಲ್ಲು ಸಂಪೂರ್ಣ ಎಂಜಿನ್ Hot-Fire ಪರೀಕ್ಷೆ ಆಗಿದ್ದು, ನಂತರ ವಾಹನ ಏಕೀಕರಣ ಮತ್ತು ಕಕ್ಷೀಯ ಉಡಾವಣಾ ಅಭಿವೃದ್ಧಿ ನಡೆಯಲಿದೆ.
ಉಪಗ್ರಹ ಉಡಾವಣೆಯ ಜಾಗತಿಕ ಬೇಡಿಕೆ ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲು ಇನ್ನೂ 2%ಕ್ಕಿಂತ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಸ್ವದೇಶಿ ಪ್ರೊಪಲ್ಷನ್ ವ್ಯವಸ್ಥೆಗಳು ಮತ್ತು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬಹುದಾದ ಉತ್ಪಾದನಾ ಸಾಮರ್ಥ್ಯಗಳು ಜಾಗತಿಕ ಉಡಾವಣಾ ಮಾರುಕಟ್ಟೆಯಲ್ಲಿ ಭಾರತದ ಪಾತ್ರವನ್ನು ವಿಸ್ತರಿಸಲು ನಿರ್ಣಾಯಕವಾಗಲಿವೆ ಎಂದು Astrobase ಅಭಿಪ್ರಾಯಪಟ್ಟಿದೆ.
ಭಾರತದಲ್ಲೇ ಅತ್ಯಾಧುನಿಕ ಪ್ರೊಪಲ್ಷನ್ ತಂತ್ರಜ್ಞಾನ ಮತ್ತು ಉಡಾವಣಾ ಮೂಲಸೌಕರ್ಯವನ್ನು ನಿರ್ಮಿಸುವ ಮೂಲಕ ಸ್ವಾವಲಂಬಿ ಉಡಾವಣಾ ಸಾಮರ್ಥ್ಯವನ್ನು ಬಲಪಡಿಸುವುದು, ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ವಾಣಿಜ್ಯ, ತಂತ್ರ ತಂತ್ರದ ಹಾಗೂ ರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಕಕ್ಷೆಗೆ ವಿಶ್ವಾಸಾರ್ಹ ಪ್ರವೇಶ ಒದಗಿಸುವ ದೃಢವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು Astrobaseನ ಪ್ರಮುಖ ಗುರಿಯಾಗಿದೆ.