ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಯ ಹೇಳಿಕೆಗಳು ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ

ಮೋದಿಯವರು ಆರ್ ಎಸ್ ಎಸ್ ಬಗ್ಗೆ ಗೌರವಿಸಿ ಮಾತನಾಡುವುದು ತಪ್ಪು ಎನ್ನುವ ಸಿದ್ಧರಾಮಯ್ಯ ತಾವು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವುದು ಎಷ್ಟು ಸರಿ? ಮಾತು ಮಾತಿಗೆ ತಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಸಾಂವಿಧಾನಿಕ ಸಂಸ್ಥೆಗಳಿಗೆ, ನ್ಯಾಯಾಲಯದ ತೀರ್ಮಾನಗಳಿಗೆ ಗೌರವ ಕೊಡುವುದನ್ನು ಮೊದಲು ರೂಢಿಸಿಕೊಳ್ಳಲಿ

ದಿಕ್ಕು ತಪ್ಪಿಸುವ ಹೇಳಿಕೆ ನೀಡದೆ ಮೀನುಗಾರರ ರಕ್ಷಣೆಗೆ ಕ್ರಮ ಕೈಗೊಳ್ಳಲಿ

Ashok Nayak Ashok Nayak Aug 16, 2025 1:51 PM

ಶಿರಸಿ: ಕಾಂಗ್ರೆಸ್ ನಾಯಕರ ದ್ವಂದ್ವ ನೀತಿಯ ಹೇಳಿಕೆಗಳು ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ. ರಾಷ್ಟ್ರದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ರಾಷ್ಟ್ರ ಸೇವೆಯಲ್ಲಿ ಒಂದು ನೂರು ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ‌ಆರ್ ಎಸ್‌ಎಸ್‌ ಕುರಿತು ಶ್ಲಾಘಿಸಿರುವುದರ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಭಾರತೀಯ ಜನತಾ ಪಾರ್ಟಿ ಉತ್ತರ ಕನ್ನಡ ಜಿಲ್ಲೆಯ ವಕ್ತಾರ ಸದಾನಂದ ಭಟ್ ಹೇಳಿದ್ದಾರೆ.

ಅವರು, ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಮೋದಿ ಅವರ ಭಾಷಣದ ಕುರಿತು ಮಾತನಾಡುವ ಸಿದ್ದರಾಮಯ್ಯ ತಾವು ಸ್ವತಂತ್ರೋತ್ಸವ ಭಾಷಣದಲ್ಲಿ ರಾಷ್ಟ್ರದ ಅಧಿಕೃತ ಸಂವಿಧಾನಿಕ ಸಂಸ್ಥೆ ಗಳಾದ ಇಡಿ, ಸಿಬಿಐ, ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆ ಎಂದು ಆಪಾದಿಸುವುದು ಎಷ್ಟರಮಟ್ಟಿಗೆ ಸರಿ? ಇಡೀ ರಾಷ್ಟ್ರ ಒಪ್ಪುವ ಜಿಎಸ್​ಟಿ ತೆರಿಗೆ ಹಂಚಿಕೆ ಇರುವಾಗ ರಾಜ್ಯವು ಕೂಡ ಫೆಡರಲ್ ಸಿಸ್ಟಮ್ ನಲ್ಲಿ ಇದೆ ಎನ್ನುವುದನ್ನು ಕೂಡ ಮರೆಯುವಂತೆ ಕೇಂದ್ರ ಸರ್ಕಾರದ ಮೇಲೆ ತೆರಿಗೆ ಹಂಚಿಕೆ ಕುರಿತು ಆಪಾದನೆ ಮಾಡುವ ಸಿದ್ದರಾಮಯ್ಯನವರು ತಮ್ಮ ದ್ವಂದ್ವ ನಿಲುವು ಗಳನ್ನು ಬಿಡಲಿ. ಮೋದಿಯವರು ಆರ್ ಎಸ್ ಎಸ್ ಬಗ್ಗೆ ಗೌರವಿಸಿ ಮಾತನಾಡುವುದು ತಪ್ಪು ಎನ್ನುವ ಸಿದ್ಧರಾಮಯ್ಯ ತಾವು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವುದು ಎಷ್ಟು ಸರಿ? ಮಾತು ಮಾತಿಗೆ ತಾವು ಸಂವಿಧಾನ ರಕ್ಷಕರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ಸಿಗರು ಸಾಂವಿಧಾನಿಕ ಸಂಸ್ಥೆಗಳಿಗೆ, ನ್ಯಾಯಾಲಯದ ತೀರ್ಮಾನಗಳಿಗೆ ಗೌರವ ಕೊಡುವುದನ್ನು ಮೊದಲು ರೂಢಿಸಿಕೊಳ್ಳಲಿ.

ಇದನ್ನೂ ಓದಿ: Sirsi News: 19 ರಂದು ಧರ್ಮ ಯುದ್ದದಂತೆಯೇ ಹೋರಾಟ ನಡೆಸಲಿದ್ದೇವೆ

ಈ ಮೊದಲು ಈ ವಿಎಂ ಮಷೀನ್‌ಗಳ ಬಗ್ಗೆ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಈಗ ಹೊಸದಾಗಿ ಮತಗಳ್ಳತನ ಎನ್ನುವ ಹೊಸ ಅಜೆಂಡಾವನ್ನು ಕೈಗೆತ್ತಿಕೊಂಡಿದೆ . ಚುನಾವಣಾ ಆಯೋಗವು ಪ್ರತ್ಯಕ್ಷವಾಗಿ ಬಂದು ಅದರ ಬಗ್ಗೆ ಪ್ರಮಾಣ ಪತ್ರದೊಂದಿಗೆ ದೂರು ಸಲ್ಲಿಸಿ ಎಂದರೆ ಅದಕ್ಕೆ ಒಪ್ಪದೆ ಕೇವಲ ಸಾರ್ವಜನಿಕವಾಗಿ ಆರೋಪ ಮಾಡುವ ಕಾಂಗ್ರೆಸ್ ತನ್ನ ದ್ವಂದ್ವ ನೀತಿಯಿಂದ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದೆ.

ಗೇರುಸೊಪ್ಪದಲ್ಲಿ ಕೈಗೆತ್ತಿಕೊಳ್ಳಲು ಹೊರಟಿರುವ ಶರಾವತಿ ಪಂಪಡ ಸ್ಟೋರೇಜ್ ವಿದ್ಯುತ್ ಉತ್ಪಾದನಾ ಯೋಜನೆಗೆ ವಿರೋಧಿಸಿದ್ದೇನೆ ಎಂದು ಹೇಳುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರವರು ರಾಜ್ಯ ಸರ್ಕಾರದ ಮುಂದೆ ಕ್ಯಾಬಿನೆಟ್ ಒಳಗೆ ಇದನ್ನು ವಿರೋಧಿಸಿ ಮಾತನಾಡಲಿ. ಕೇಣಿ ಬಂದರು ಆಗದಿದ್ದರೆ ಜಿಲ್ಲೆಯ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳುವ ಜಿಲ್ಲಾ ಉಸ್ತುವಾರಿ ಸಚಿವರು ಒಂದು ಕಡೆಯಾದರೆ ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಅವರು ಈ ಬಂದರು ನಿರ್ಮಾಣದ ಕಾರ್ಯದ ಬಗ್ಗೆ ಬಹುಶಃ ಮುಖ್ಯಮಂತ್ರಿಗಳಿಗೆ ಗೊತ್ತಿಲ್ಲ ಮತ್ತು ಇದರ ನಿರ್ಮಾಣದ ಅಗತ್ಯವಿಲ್ಲ ಎನ್ನುವ ರೀತಿ ಮಾತನಾಡಿರುವುದು ಉತ್ತರ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ನಾಯಕರ ವೈರುಧ್ಯದ ಹೇಳಿಕೆಗಳಿಗೆ ಸಾಕ್ಷಿಯಾಗಿದೆ.

ಕೇವಲ ಜನತೆಯ ದಿಕ್ಕು ತಪ್ಪಿಸುವ ಹೇಳಿಕೆ ನೀಡದೆ ಸಾಂಪ್ರದಾಯಿಕ ಮೀನುಗಾರರ ರಕ್ಷಣೆಗೆ ಅಗತ್ಯ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿ.

ಇನ್ನು ರಾಷ್ಟ್ರರಾಧ್ಯಂತ ಕುತೂಹಲ ಕೆರಳಿಸಿರುವ ಅನಾಮಿಕ ವ್ಯಕ್ತಿಯ ದೂರಿನ ಮೇಲೆ ಎಸ್ಐಟಿ ರಚಿಸಿ ಧರ್ಮಸ್ಥಳದಲ್ಲಿ ಕಂಡ ಕಂಡ ಕಡೆ ಹೋಂಡಾ ತೋಡಿಸುತ್ತಿರುವ ರಾಜ್ಯ ಸರ್ಕಾರ ಹಿಂದೂ ದೇವಾಲಯಗಳ ಮತ್ತು ಇದರ ಪ್ರಮುಖರ ಗೌರವಕ್ಕೆ ಧಕ್ಕೆ ಆಗುತ್ತಿದ್ದರೂ ಕೂಡ ಅದನ್ನು ಪರಿಗಣಿಸದೆ ಏಕಮುಖ ತನಿಖೆ ನಡೆಸುತ್ತಿರುವುದು ಸಂಶಯಾಸ್ಪದವಾಗಿದೆ. ಅಂತರಾಷ್ಟ್ರೀಯ ಒತ್ತಡದ ಮೂಲಕ ನಗರ ನಕ್ಸಲ್ರನ್ನು ಮೆಚ್ಚಿಸಲು ಈ ತನಿಖೆಯನ್ನು ಮುಂದುವರೆಸುತ್ತಿದೆಯೋ ಹೇಗೆ ಎಂಬುದನ್ನು ತಿಳಿಸಲಿ. ಪ್ರತಿಪಕ್ಷ ಬಿಜೆಪಿ ವಿಧಾನಸಭೆಯಲ್ಲಿ ಈ ಕುರಿತು ಸಾಕಷ್ಟು ಅಗ್ರಹಗಳನ್ನು ಮಾಡಿದರು ಕೂಡ ವಿಧಾನಸಭೆಯಲ್ಲಿ ಸ್ಪಷ್ಟವಾದ ಉತ್ತರ ನೀಡದ ರಾಜ್ಯ ಸರ್ಕಾರ ಧರ್ಮಸ್ಥಳದ ಕುರಿತು ಆಗಿರುವ ಅಪಪ್ರಚಾರಗಳನ್ನು ತಡೆಯಲು ಯಾವ ಕ್ರಮ ಕೈಗೊಳ್ಳುತ್ತದೆ ಮತ್ತು ಸುಳ್ಳು ದೂರಿನ ಬಗ್ಗೆ ಯಾವ ಕ್ರಮ ಆಗುತ್ತದೆ ಎಂಬುದನ್ನು ತಕ್ಷಣ ಪ್ರಚುರ ಪಡಿಸಲಿ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಧ್ಯಮಗಳ ಮುಂದೆ ಧರ್ಮಸ್ಥಳದ ವಿರೋಧದ ಆರೋಪದಲ್ಲಿ ಷಡ್ಯಂತ್ರವಿದೆ ಎಂದು ಹೇಳುವವರು ಪ್ರಭಾವಿಗಳಿದ್ದು ತಕ್ಷಣದಲ್ಲಿ ಅನಾಮಿಕ ವ್ಯಕ್ತಿ ಮತ್ತು ಅವನ ಹಿಂದಿರುವ ಜಾಲವನ್ನು ಭೇದಿಸಿ ಜನತೆಯ ಮುಂದೆ ಸತ್ಯವನ್ನು ತೆರೆದಿಡುವ ಕೆಲಸ ಮಾಡಿಸಲಿ. ರಾಜ್ಯದಲ್ಲಿ ಈ ರೀತಿಯಲ್ಲಿ ಕಾಂಗ್ರೆಸ್ ನಾಯಕರುಗಳು ದ್ವಂದ್ವ ಹೇಳಿಕೆ ನೀಡುತ್ತಾ, ಜನರ ಮುಂದೆ ಹೇಳುವುದು ಒಂದು ಆಡಳಿತದಲ್ಲಿ ಕಾರ್ಯ ನಿರ್ವಹಿಸುವುದು ಒಂದು ಎಂಬ ರೀತಿಯಲ್ಲಿ ಜನ ವಿರೋಧಿಯಾಗಿ ಆಡಳಿತ ನಡೆಸುತ್ತಾ ದ್ವಂದ್ವದಿಂದ ಕೂಡಿದ ಹೇಳಿಕೆಗಳಿಂದ ಜನತೆಯ ದಿಕ್ಕು ತಪ್ಪಿಸುವ ಪ್ರಯತ್ನ ವಾಗುತ್ತಿದೆ ಇದನ್ನು ಕಾಂಗ್ರೆಸ್ ನಾಯಕರು ಪರಾಮರ್ಷಿಸಿಕೊಳ್ಳಲಿ ಎಂದಿದ್ದಾರೆ.