ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಹುಳಗೋಳ ಪ್ರಸಾದಗೆ ಲಂಡನ್ ನಲ್ಲಿ ಎಲ್ಎಲ್‌ಎಂ ಪದವಿ

ಹೆಗಡೆ ಅವರು ಭಾರತದ ಹಿರಿಯ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೂರ್ಯಪ್ರಕಾಶ ವಿ.ರಾಜು ಅವರೊಂದಿಗೆ‌ ಸುಫ್ರಿಂ ಕೋರ್ಟನಲ್ಲಿ ಭಾರತದ ತನಿಖಾ‌ ಸಂಸ್ಥೆಗಳ ಕೆಲವು ಪ್ರಕರಣದ ನ್ಯಾಯದಾನ ವಿಚಾರದಲ್ಲೂ ಕೆಲಸ ಮಾಡುತ್ತಿದ್ದಾರೆ. ಪ್ರಸಾದ ಹೆಗಡೆ ಎಳೆಯ ವಯಸ್ಸಿನಲ್ಲೇ ಸುಫ್ರೀಂ ಕೋರ್ಟನಲ್ಲಿ ವಕೀಲ ವೃತ್ತಿಯ ಆರಂಭದ ಜೊತೆಗೆ ಹಿರಿಯರ ಸಾಂಗತ್ಯ ಹಾಗೂ ಪ್ರಮುಖ ಪ್ರಕರಣಗಳ ಪರ ವಾದ‌ ಮಂಡನೆಗಳಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡಿದ್ದಾರೆ.

ಹುಳಗೋಳ ಪ್ರಸಾದಗೆ ಲಂಡನ್ ನಲ್ಲಿ ಎಲ್ಎಲ್‌ಎಂ ಪದವಿ

Ashok Nayak Ashok Nayak Aug 28, 2025 1:38 PM

ಶಿರಸಿ: ದೆಹಲಿಯ ಸುಫ್ರಿಂ ಕೋಟ್ ೯ ನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಯುವ ನ್ಯಾಯವಾದಿ ತಾಲೂಕಿನ ಹುಳಗೋಳದ ಪ್ರಸಾದ ಹೆಗಡೆ ಅವರು ಲಂಡನ್ ನ‌ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕೊನೊಮಿಕ್ಸ‌ ವಿದ್ಯಾ ಸಂಸ್ಥೆಯಲ್ಲಿ ಎಲ್‌ಎಲ್‌ಎಂ‌ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಗಳಿಸಿದ್ದಾರೆ.

ಹಿಂದೆ ಅಹಮದಾಬಾದ್ ನ ಗುಜರಾತ್‌‌ ನ್ಯಾಶನಲ್‌ ಲಾ ಸ್ಕೂಲಿನಲ್ಲಿ ಕಾನೂನು ಪದವಿ ಪಡೆದಿದ್ದ ಇವರು, ಸುಫ್ರೀಂ ಕೋರ್ಟನ ಪ್ರಸಿದ್ಧ, ಹಿರಿಯರ ನ್ಯಾಯಾಧೀಶ ಪಿ.ಎಸ್‌ ನರಸಿಂಹ ಅವರ ಜೊತೆಗೆ ಕೆಲಸ‌ ಮಾಡಿದ ಅನುಭವದ ಜೊತೆಗೆ ಹಿರಿಯ ನ್ಯಾಯವಾದಿ ಪರಮೇಶ್ವರ ಅವರ ಜೊತೆ ಕೆಲಸ ಮಾಡಿದ್ದರು.

ಇದನ್ನೂ ಓದಿ: Anchor Anushree: ಅನುಶ್ರೀ ಮದುವೆಗೆ ಯಾರೆಲ್ಲ ಬಂದಿದ್ರು ಗೊತ್ತಾ? ಫೋಟೋ ನೋಡಿ

ಇದೀಗ ಹೆಗಡೆ ಅವರು ಭಾರತದ ಹಿರಿಯ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಸೂರ್ಯ ಪ್ರಕಾಶ ವಿ.ರಾಜು ಅವರೊಂದಿಗೆ‌ ಸುಫ್ರಿಂ ಕೋರ್ಟನಲ್ಲಿ ಭಾರತದ ತನಿಖಾ‌ ಸಂಸ್ಥೆಗಳ ಕೆಲವು ಪ್ರಕರಣದ ನ್ಯಾಯದಾನ ವಿಚಾರದಲ್ಲೂ ಕೆಲಸ ಮಾಡುತ್ತಿದ್ದಾರೆ. ಪ್ರಸಾದ ಹೆಗಡೆ ಎಳೆಯ ವಯಸ್ಸಿನಲ್ಲೇ ಸುಫ್ರೀಂ ಕೋರ್ಟನಲ್ಲಿ ವಕೀಲ ವೃತ್ತಿಯ ಆರಂಭದ ಜೊತೆಗೆ ಹಿರಿಯರ ಸಾಂಗತ್ಯ ಹಾಗೂ ಪ್ರಮುಖ ಪ್ರಕರಣಗಳ ಪರ ವಾದ‌ ಮಂಡನೆಗಳಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡಿ ದ್ದಾರೆ.

ಪ್ರಸಾದ ಹೆಗಡೆ ಹಿರಿಯ ಕೃಷಿ ವಿಜ್ಞಾನಿ ಡಾ. ಸತೀಶ ಹೆಗಡೆ, ಆರತಿ ಹೆಗಡೆ‌ ಅವರ ಪುತ್ರ. ರಾಧಾ ಹಾಗೂ ಜಿ.ಎಂ.ಹೆಗಡೆ ಹುಳಗೋಳ‌ ಮೊಮ್ಮಗ ಎಂಬುದು ಉಲ್ಲೇಖನೀಯ.