ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಡಿ.25ರಂದು ನಿಸರ್ಗಮನೆ ಡಾ. ವೆಂಕಟರಮಣ ಹೆಗಡೆ ಅವರಿಗೆ ಗೌರವ ಸಮ್ಮಾನ

ಡಾ. ವೆಂಕಟರಮಣ ಹೆಗಡೆ ಅವರು ನಿಸರ್ಗ ಚಿಕಿತ್ಸೆ ಪದವಿ ಪಡೆದು ಹುಟ್ಟೂರಿನಲ್ಲೇ ಚಿಕಿತ್ಸಾ ಕೇಂದ್ರ ಆರಂಭಿಸಿ ಈ ಚಿಕಿತ್ಸಾ ವಿಧಾನದ ಮೂಲಕ ದೇಶದ ಗಮನ ಸೆಳೆಯುತ್ತಿದ್ದಾರೆ. ನಿತ್ಯ ವಿವಿಧ ಪತ್ರಿಕೆ ಗಳಲ್ಲಿ ಆರೋಗ್ಯ ಜಾಗೃತಿ ಅಂಕಣ ಕೂಡ ಬರೆಯುತ್ತಿದ್ದಾರೆ. ಅನೇಕ ಕೃತಿಗಳನ್ನು ರಚಿಸಿ ಲಕ್ಷಾಂತರ ಓದುಗರನ್ನು ತಲುಪಿದ್ದಾರೆ.

ಡಿ.25ರಂದು ಡಾ. ವೆಂಕಟರಮಣ ಹೆಗಡೆ ಅವರಿಗೆ ಗೌರವ ಸಮ್ಮಾನ

-

Ashok Nayak
Ashok Nayak Dec 25, 2025 12:03 AM

ಶಿರಸಿ: ಇಲ್ಲಿನ ಗಣೇಶ ನಗರದ ವೇದ ವೆಲ್ನೇಸ್ ಸೆಂಟರ್ ನಿಸರ್ಗ ಮನೆಯ ಮುಖ್ಯಸ್ಥ, ಮುಖ್ಯ ವೈದ್ಯಾಧಿಕಾರಿ, ವೈದ್ಯ ಬರಹಗಾರ ಡಾ.ವೆಂಕಟರಮಣ ಹೆಗಡೆ ಅವರಿಗೆ ಅಂತರಾಷ್ಟ್ರೀಯ ಮಟ್ಟದ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ಗೌರವ ಸನ್ಮಾನ ನಡೆಯಲಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಡಾ.ವೆಂಕಟರಮಣ ಹೆಗಡೆ ಅವರ ಜೊತೆಗೆ ಉಳಿದ ವೈದ್ಯಕೀಯ ಪದ್ಧತಿಗಳ ಸಾಧಕರಾದ ಡಾ. ಸಿ.ಎನ್.ಮಂಜುನಾಥ, ಡಾ. ಜಿ.ಸೆಂಥಿವಾಲ್, ಡಾ.ಬಿ.ಟಿ. ರುದ್ರೇಶ, ದೊರ್ಜಿ ರೊ್ತನ್ ನೆಶರ್, ಡಾ. ಮಂಜುಳಾ ಎಸ್. ಅವರನ್ನು ಗೌರವಿಸಲಾಗುತ್ತಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಡಿ.25ರಿಂದ 4 ದಿನಗಳ ಕಾಲ ನಡೆಯಲಿರುವ ಸಮ್ಮೇಳನದ ಉದ್ಘಾಟನಾ ಸಮಾರಂಭದ ಪ್ರಧಾನ ವೇದಿಕೆಯಲ್ಲಿ ಪ್ರಶಸ್ತಿ‌ ಪ್ರದಾನ ನಡೆಯಲಿದೆ.

ಇದನ್ನೂ ಓದಿ: Sirsi Marikamba Jatre 2026: ಫೆ. 24ರಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ

ಈ‌ ಸಭೆಯಲ್ಲಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ, ಡಾ. ಭಸ್ವತಿ ಭಟ್ಟಾಚಾರ್ಯ, ಡಾ. ಆರ್.ಗಣೇಶ, ಡಾ. ಗಿರಿಧರ ಕಜೆ ಸೇರಿದಂತೆ ಅನೇಕ ಗಣ್ಯರು ಇರಲಿದ್ದಾರೆ.

ಡಾ. ವೆಂಕಟರಮಣ ಹೆಗಡೆ ಅವರು ನಿಸರ್ಗ ಚಿಕಿತ್ಸೆ ಪದವಿ ಪಡೆದು ಹುಟ್ಟೂರಿನಲ್ಲೇ ಚಿಕಿತ್ಸಾ ಕೇಂದ್ರ ಆರಂಭಿಸಿ ಈ ಚಿಕಿತ್ಸಾ ವಿಧಾನದ ಮೂಲಕ ದೇಶದ ಗಮನ ಸೆಳೆಯುತ್ತಿದ್ದಾರೆ. ನಿತ್ಯ ವಿವಿಧ ಪತ್ರಿಕೆಗಳಲ್ಲಿ ಆರೋಗ್ಯ ಜಾಗೃತಿ ಅಂಕಣ ಕೂಡ ಬರೆಯುತ್ತಿದ್ದಾರೆ. ಅನೇಕ ಕೃತಿಗಳನ್ನು ರಚಿಸಿ ಲಕ್ಷಾಂತರ ಓದುಗರನ್ನು ತಲುಪಿದ್ದಾರೆ. ನಾಡಿನ ಅನೇಕ‌ ಕಡೆ ಆರೋಗ್ಯ ಜಾಗೃತಿ ಶಿಬಿರ ನಡೆಸುತ್ತಿದ್ದು, ಆರೋಗ್ಯಕ್ಕೆ ಆಹಾರವೇ ಔಷಧ ಎಂಬ ಅಭಿಯಾನ ನಿರಂತರವಾಗಿ ನಡೆಸುತ್ತಿದ್ದಾರೆ. ಅನೇಕ ರಾಜ್ಯ, ರಾಷ್ಟ್ರ ಪ್ರಶಸ್ತಿಗಳೂ ಇವರ ಕಾರ್ಯಕ್ಕೆ ಬೆನ್ನು ತಟ್ಟಿವೆ.