ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bhatkal News: ಮುಸ್ಲಿಂ ಧ್ವಜ ತೆರವು: ಉದ್ರಿಕ್ತ ಪರಿಸ್ಥಿತಿ ನಿರ್ಮಾಣ

ಬಂದರ ರಸ್ತೆ ನ್ಯೂ ಇಂಗ್ಲೀಷ್ ಶಾಲೆಯ ಎದುರು ರಮ್ಜಾನ್ ಹಬ್ಬದ ಅಂಗವಾಗಿ ಸ್ಥಾಪಿಸಲಾದ ಮುಸ್ಲಿಂ ಧ್ವಜವನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆ ಯಲ್ಲಿ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಧ್ವಜ ತೆರವುಗೊಳಿಸಿದ ಕ್ರಮ ವಿರೋಧಿಸಿ ಮುಸ್ಲಿಂ ಸಮುದಾಯದ ಹಲವರು ಸ್ಥಳದಲ್ಲಿ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಪರಿಸ್ಥಿತಿ ತೀವ್ರ ಗೊಂಡು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಮುಸ್ಲಿಂ ಧ್ವಜ ತೆರವು: ಉದ್ರಿಕ್ತ ಪರಿಸ್ಥಿತಿ ನಿರ್ಮಾಣ

-

Profile
Ashok Nayak Mar 28, 2026 1:51 PM

ಭಟ್ಕಳ: ಬಂದರ ರಸ್ತೆ ನ್ಯೂ ಇಂಗ್ಲೀಷ್ ಶಾಲೆಯ ಎದುರು ರಮ್ಜಾನ್ ಹಬ್ಬದ ಅಂಗವಾಗಿ ಸ್ಥಾಪಿಸಲಾದ ಮುಸ್ಲಿಂ ಧ್ವಜವನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದ ಹಿನ್ನೆಲೆ ಯಲ್ಲಿ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ.

ಧ್ವಜ ತೆರವುಗೊಳಿಸಿದ ಕ್ರಮ ವಿರೋಧಿಸಿ ಮುಸ್ಲಿಂ ಸಮುದಾಯದ ಹಲವರು ಸ್ಥಳದಲ್ಲಿ ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಪರಿಸ್ಥಿತಿ ತೀವ್ರ ಗೊಂಡು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಇದನ್ನೂ ಓದಿ: Bhatkal Hindu Sangama: ಹಿಂದೂಗಳ ಒಗ್ಗಟ್ಟನ್ನು ಒಡೆಯಲು ಅನ್ಯ ಧರ್ಮದವರ ಯತ್ನ: ಅನಂತ ಕುಮಾರ ಹೆಗಡೆ

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಡಿ.ವೈ.ಎಸ್.ಪಿ ಗಿರೀಶ್ ಬಿ, ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ ಹಾಗೂ ಪಿ.ಎಸ್.ಐ ನವೀನ್ ನಾಯ್ಕ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು.

ಅಧಿಕಾರಿಗಳು ಸ್ಥಳದಲ್ಲಿದ್ದ ಜನರೊಂದಿಗೆ ಮಾತುಕತೆ ನಡೆಸಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.