ವಿಶ್ವೇಶ್ವರ ಭಟ್ ಕೃತಿಗಳೆಂದರೆ ಅವು ಅಮೂಲ್ಯ ಜ್ಞಾನ ಭಂಡಾರ: ವಸಂತ್ ಗಿಳಿಯಾರ್
Vishweshwar Bhat: ಅತ್ಯಂತ ವೇಗವಾಗಿ ವಿಶ್ವವನ್ನು ಸುತ್ತ ಬಲ್ಲ, ಅಷ್ಟೇ ವೇಗವಾಗಿ ಬರೆಯಬಲ್ಲ ಪರ್ತಕರ್ತರು ವಿಶ್ವೇಶ್ವರ ಭಟ್. ಅವರಂಥವರು ಇನ್ನೊಬ್ಬರಿಲ್ಲ ಎಂದು ಚಿಂತಕ, ಸಂಘಟಕ ವಸಂತ್ ಗಿಳಿಯಾರ್ ಹೇಳಿದರು. ಕುಮಟಾದಲ್ಲಿ ಆಯೋಜಿಸಲಾಗಿದ್ದ ಸಾಧನಾ ಸೌರಭ ಕಾರ್ಯಕ್ರಮದಲ್ಲಿ ಅವರು ವಿಶ್ವೇಶ್ವರ ಭಟ್ ಅವರ ಬರಹದ ಕುರಿತಾಗಿ ಮಾತನಾಡಿದರು.
ವಸಂತ್ ಗಿಳಿಯಾರ್ -
ಕುಮಟಾ: ಇವತ್ತಿನ ಕಾಲದಲ್ಲಿ ಅತ್ಯಂತ ವೇಗವಾಗಿ ವಿಶ್ವವನ್ನು ಸುತ್ತ ಬಲ್ಲ ಮತ್ತು ಅಷ್ಟೇ ವೇಗವಾಗಿ ಬರೆಯಬಲ್ಲ ಪರ್ತಕರ್ತರು ವಿಶ್ವೇಶ್ವರ ಭಟ್ (Journalist Vishweshwar Bhat). ಅವರಂಥವರು ಇನ್ನೊಬ್ಬರು ಇರಲು ಸಾಧ್ಯವಿಲ್ಲ ಎಂದು ಚಿಂತಕ, ಸಂಘಟಕ ವಸಂತ್ ಗಿಳಿಯಾರ್ (Vasant Gilliyar) ಹೇಳಿದರು. ವಿಶ್ವೇಶ್ವರ ಭಟ್ ಅವರ ಬರಹದ ಕುರಿತಾಗಿ ಮಾತನಾಡಿದ ಅವರು, ವಿಶ್ವೇಶ್ವರ ಭಟ್ ಕುಮುಟಾದವರು (Kumuta). ಕುಮುಟಾದವರು ಎಂದರೆ ಆಳವಾಗಿ ಅಧ್ಯಯನ ಮಾಡಿದವರು, ಅವರ ಕೃತಿಗಳೆಂದರೆ ಅದು ಅಮೂಲ್ಯ ಜ್ಞಾನ ಭಂಡಾರ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಆಯೋಜಿಸಲಾಗಿದ್ದ ಸಾಧನಾ ಸೌರಭ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ವಸಂತ್ ಗಿಳಿಯಾರ್, ವಿಶ್ವೇಶ್ವರ ಭಟ್ ಅವರ ಕೃತಿಗಳನ್ನು ಅತ್ಯಂತ ಆಳವಾಗಿ ನಾನು ಅಧ್ಯಯನ ಮಾಡಿಲ್ಲ. ಆದರೆ ಅವರು ಹೊಸ ಜಮಾನದ ಪತ್ರಕರ್ತರು. ಪತ್ರಿಕೋದ್ಯಮದ ಪಲ್ಲವಿಯನ್ನು ಬದಲಿಸಿದವರು ಎಂದು ಹೇಳಿದರು.
Vishweshwar Bhat: ಸಂಕೇಶ್ವರರಿಗೆ ಕೊಟ್ಟ ಆ ಪುಸ್ತಕ ನನ್ನ ಹಣೆಬರಹ ಬದಲಿಸಿತು: ವಿಶ್ವೇಶ್ವರ ಭಟ್
ವಕ್ರತುಂಡೋಕ್ತಿಯ ನಾಲ್ಕು ಸಾಲನ್ನು 20 ಪುಟ ಬರೆಯುವಷ್ಟು ಸಾಮರ್ಥ್ಯ ಉಳ್ಳ ಭಟ್ಟರು ಜಗತ್ತನ್ನು ಅಗೆದು, ಬಗೆದು ನಮ್ಮ ಮುಂದೆ ಪುಸ್ತಕಗಳ ಮೂಲಕ ಹರಿಯ ಬಿಟ್ಟಿದ್ದಾರೆ. 10- 15 ಲಕ್ಷ ಖರ್ಚು ಮಾಡಿ ಅವರು ಬರೆಯುವ ಪ್ರವಾಸ ಕಥನ ಅತ್ಯದ್ಭುತ. ಯಾಕೆಂದರೆ ಇದು ನಮಗೆ ಕೇವಲ 400 ರೂ. ಗೆ ಸಿಗುತ್ತದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರ ಅಂತರಂಗವನ್ನು ಅರ್ಥ ಮಾಡಿಸಿಕೊಟ್ಟಿದ್ದು ವಿಶ್ವೇಶ್ವರ ಭಟ್ ಅವರ ಅಜಾತಶತ್ರು ಪುಸ್ತಕ. ಆ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಅವರು ಇರಲಿಲ್ಲ. ಆಗ ಅವರು ಬ್ರಿಟನ್ ಗೆ ಹೋಗಿದ್ದರು. ಅವರ ಈ ಪುಸ್ತಕ ಓದಿದ ಮೇಲೆಯೇ ನಾನು ಅಟಲ್ ಅವರ ದೊಡ್ಡ ಚಿತ್ರವನ್ನು ಮನೆಯಲ್ಲಿ ತೂಗುಹಾಕಿದೆ. ಹಿರಿಯರು ದೇಶ ಸುತ್ತಬೇಕು ಅಥವಾ ಕೋಶ ಓದಬೇಕು ಎನ್ನುತ್ತಾರೆ. ಆದರೆ ಭಟ್ಟರು ಕೋಶವನ್ನು ಓದುತ್ತಾರೆ, ದೇಶವನ್ನು ಸುತ್ತುತ್ತಾರೆ ಎಂದು ಹೇಳಿದರು.
ಇಷ್ಟು ವೇಗವಾಗಿ ವಿಶ್ವವನ್ನು ಸುತ್ತ ಬಲ್ಲ, ಅಷ್ಟೇ ವೇಗವಾಗಿ ಬರೆಯಬಲ್ಲ ಪರ್ತಕರ್ತ ಇನ್ನೊಬ್ಬನಿಲ್ಲ. ಯಾವತ್ತೂ ಕೂಡ ಸುಮ್ಮನೆ ಖಾಲಿಯಾಗಿ ಕುಳಿತುಕೊಳ್ಳುವವರು ಅವರಲ್ಲ. ಪರಿಪೂರ್ಣತೆಯ ಕಾರಣದಿಂದ ಅವರು ಈಗಾಗಲೇ ೧೦೮ ಕೃತಿಗಳನ್ನು ಬರೆದರು. ಯಾವುದೇ ಪುಸ್ತಕವನ್ನು ಕೈಗೆತ್ತಿಕೊಂಡರೂ ಕೂಡ ಅಲ್ಲಿ ಅಪೂರ್ವವಾದದ್ದನ್ನು ನಾವು ಓದಲು ಸಾಧ್ಯವಿದೆ ಎಂದು ತಿಳಿಸಿದರು.
ಓಶೋ ರಜನೀಶ್ ಬಗ್ಗೆ ನಾವು ಆಸಕ್ತಿಯಿಂದ ಗಮನಿಸುವಂತೆ ಮಾಡಿದ್ದು ವಿಶ್ವೇಶ್ವರ ಭಟ್. ಶಿವರಾಮ ಕಾರಂತರು ಮತ್ತು ಭಟ್ಟರ ನಡುವೆ ಸಾಕಷ್ಟು ಹೋಲಿಕೆ ಇದೆ. ಕಾರಂತರು ಆಗೀನ ಕಾಲದಲ್ಲಿ ಸೀಮಿತ ಅವಕಾಶಗಳನ್ನು ಬಳಸಿಕೊಂಡು ಸಾಕಷ್ಟು ಸುತ್ತಾಡಿದ್ದರು ಎಂದರು.
ರವಿ ಬೆಳೆಗೆರೆ ಪತ್ರಿಕೆ ಲೋಕದ ಪಾತಕಿ: ಪ್ರತಾಪ್ ಸಿಂಹ ಆಕ್ರೋಶ
ವಿಶ್ವೇಶ್ವರ ಭಟ್ ಅವರನ್ನು ಕಾಲಂಗಳ ಬ್ರಹ್ಮ ಎಂದು ಕೂಡ ಇವರನ್ನು ಕರೆಯಬಹುದು. ಅವರಷ್ಟು ಕಾಲಂಗಳನ್ನು ಯಾರೂ ಬರೆದಿಲ್ಲ. ಪತ್ರಕರ್ತರಾಗಲಿ, ಸಾಹಿತಿಗಳಾಗಲಿ ನಾವು ಅಪ್ಡೇಟ್ ಆಗಬೇಕು. ಅದು ಎಷ್ಟು ವೇಗವಾಗಿ ಎಂಬುದನ್ನು ವಿಶ್ವೇಶ್ವರ ಭಟ್ ತೋರಿಸಿಕೊಡುತ್ತಾರೆ. ಅವರಷ್ಟು ವೇಗವಾಗಿ ಬರೆಯುವುದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ. ಅವರ ಬಹುದೊಡ್ಡ ಶಕ್ತಿ ಎಂದರೆ ಅವರು ಎಲ್ಲರಲ್ಲೂ ಸಕಾರಾತ್ಮಕತೆಯನ್ನೇ ಕಾಣುತ್ತಾರೆ. ಪ್ರತಿಭಾನಿತ್ವರನ್ನು ಕಂಡರೆ ಅವರನ್ನು ಬೆಳೆಸುತ್ತಾರೆ ಎಂದು ತಿಳಿಸಿದರು.