ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊಸಪೇಟೆಯಲ್ಲಿ ನೂತನ ಇಎಸ್ಐ ಆಸ್ಪತ್ರೆ ಸ್ಥಾಪಿಸಿ; ಸಂಸದ ಈ. ತುಕಾರಾಂಗೆ ಮನವಿ

Vijayanagara News: ಹೊಸಪೇಟೆಗೆ ನೂತನ ಇಎಸ್ಐ (ESI) ಆಸ್ಪತ್ರೆ ಸ್ಥಾಪಿಸಲು ಸಂಸದ ಈ. ತುಕಾರಾಂ ಅವರಿಗೆ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಹೊಸಪೇಟೆಯಲ್ಲಿ ನೂತನ ಇಎಸ್ಐ ಆಸ್ಪತ್ರೆ ಸ್ಥಾಪಿಸಲು ಮನವಿ

ಹೊಸಪೇಟೆಯಲ್ಲಿ ನೂತನ ಇಎಸ್ಐ ಆಸ್ಪತ್ರೆ ಸ್ಥಾಪನೆಗೆ ಸಂಸದ ಈ. ತುಕಾರಾಂಗೆ ಮನವಿ. -

Profile
Siddalinga Swamy Jun 16, 2026 8:06 PM

ಹೊಸಪೇಟೆ, ಜೂ.16: ಹೊಸಪೇಟೆಯಲ್ಲಿ ನೂತನ ಇಎಸ್ಐ (ESI) ಆಸ್ಪತ್ರೆ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸದ ಈ. ತುಕಾರಾಂ ಅವರಿಗೆ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಈಗಾಗಲೇ ಸ್ಥಳೀಯ ಕಾರಿಗನೂರು ಪ್ರದೇಶದಲ್ಲಿರುವ 4-5 ದಶಕಗಳ ಹಳೆಯ ಆಸ್ಪತ್ರೆ ಶಿಥಿಲಗೊಂಡಿದೆ. ಅದೇ ಜಾಗದಲ್ಲಿ ಸುಸಜ್ಜಿತ ನೂತನ ಆಸ್ಪತ್ರೆಯನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಸಂಸದರ ಅನುದಾನದಲ್ಲಿ ನಿರ್ಮಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ಹೊಸಪೇಟೆ ಭೌಗೋಳಿಕವಾಗಿ ಮಧ್ಯೆ ಇರುವುದರಿಂದ ಅನೇಕ ಸುತ್ತಮುತ್ತಲಿನ ವ್ಯಾಪಾರ, ವ್ಯವಹಾರ ಮತ್ತು ಕಾರ್ಖಾನೆಯ ಸಿಬ್ಬಂದಿಗೆ ಬಹಳ ಅನುಕೂಲ ಆಗಲಿದೆ. ಇದಲ್ಲದೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಬಹಳಷ್ಟು ಜನರಿಗೆ ಪ್ರಾಯೋಜನವಾಗಲಿದೆ ಎಂದು ಪದಾಧಿಕಾರಿಗಳು ವಿವರಿಸಿದ್ದಾರೆ. ಇದಕ್ಕೆ ಸಂಸದ ಈ. ತುಕಾರಾಂ ಅವರು, ಆದಷ್ಟು ಶೀಘ್ರವಾಗಿ ಈ ಬಗ್ಗೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.‌

ದೋಹಾದಲ್ಲಿ 'ಸಂಭ್ರಮ 2026' ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ಗಾಯಕ ರಾಜೇಶ್ ಕೃಷ್ಣನ್

ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಅಶ್ವಿನ್ ಕೊತಂಬ್ರಿ, ಕಾರ್ಯದರ್ಶಿ ಕೆ. ರಾಜೇಂದ್ರ, ಕಾರ್ಯಕಾರಣಿ ಸಮಿತಿ ಸದಸ್ಯರಾದ ರಮೇಶ್ ಗುಪ್ತ, ಅಬ್ದುಲ್ ಹಕ್ ಸೈಟ್ ಮತ್ತು ಹುಡಾ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ ಉಪಸ್ಥಿತರಿದ್ದರು.