Hospet News: ವಿಶೇಷ ಚೇತನರೊಂದಿಗೆ ಯುವ ಮುಖಂಡ ಹಫೀಜ್ ಶೇಖ್ ರವರ ಹುಟ್ಟುಹಬ್ಬ ಆಚರಣೆ
ಸಮಾಜದಲ್ಲಿ ಲಕ್ಷಾಂತರು ರೂಪಾಯಿಗಳನ್ನ ಖರ್ಚು ಮಾಡಿ ಆಡಂಬರದ ಆಚರಣೆಗಳನ್ನು ಮಾಡಿ ಕೊಳ್ಳುವುದು ಪ್ರಸ್ತುತ ದಿನಮಾನಗಳಲ್ಲಿ ಸರ್ವೆಸಾಮಾನ್ಯವಾಗಿದೆ. ಇಂತಹ ದಿನಗಳಲ್ಲಿ 130ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳ ಮತ್ತು ಬುದ್ಧಿಮಾಂದ್ಯ ಮಕ್ಕಳ ಜೊತೆಗೆ ಆಚರಣೆ ಮಾಡಿಕೊಳ್ಳುವುದು ಸಮಾಜ ದಲ್ಲಿ ವಿಶೇಷವಾಗಿದೆ ಎಂದರು
-
ಹೊಸಪೇಟೆ: ವಿಜಯನಗರ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ವಿಜಯನಗರ ಜಿಲ್ಲಾ ಯುವ ಮುಖಂಡ ಹಾಗೂ ನೋಬೆಲ್ ಎಜುಕೇಶನ್ ಟ್ರಸ್ಟ್ (ರಿ) ಆಡಳಿತಾಧಿಕಾರಿ ಹಫೀಜ್ ಶೇಖ್ ರವರ ಹುಟ್ಟು ಹಬ್ಬವನ್ನು ನಗರದ ಸಾಧ್ಯ ಮಾನಸಿಕ ವಿಶೇಷ ಚೇತನರ, ವಿಶೇಷ ಶಾಲೆ ಮತ್ತು ವೃತ್ತಿ ತರಬೇತಿ ಕೇಂದ್ರ ಸಾದ್ಯ ಟ್ರಸ್ಟ್ ಫಾರ್ ಸೋಶಿಯಲ್ ಡೆವಲಪ್ಮೆಂಟ್ ಸಂಸ್ಥೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಮತ್ತು ವಿಶೇಷ ಚೇತನರ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುವುದರ ಮೂಲಕ ಆಚರಿಸಲಾಯಿತು.
ಇದನ್ನೂ ಓದಿ: Hospet News: ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಮಾಮ್ ನಿಯಾಜಿ ನೇಮಿಸಲು ಮನವಿ
ಈ ಸಂದರ್ಭದಲ್ಲಿ ಯುವ ಮುಖಂಡ ಭರತ್ ಕುಮಾರ್ ಸಿಆರ್ ಮಾತನಾಡಿ, ಸಮಾಜದಲ್ಲಿ ಲಕ್ಷಾಂತರು ರೂಪಾಯಿಗಳನ್ನ ಖರ್ಚು ಮಾಡಿ ಆಡಂಬರದ ಆಚರಣೆಗಳನ್ನು ಮಾಡಿಕೊಳ್ಳುವುದು ಪ್ರಸ್ತುತ ದಿನಮಾನಗಳಲ್ಲಿ ಸರ್ವೆಸಾಮಾನ್ಯವಾಗಿದೆ. ಇಂತಹ ದಿನಗಳಲ್ಲಿ 130ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳ ಮತ್ತು ಬುದ್ಧಿಮಾಂದ್ಯ ಮಕ್ಕಳ ಜೊತೆಗೆ ಆಚರಣೆ ಮಾಡಿಕೊಳ್ಳುವುದು ಸಮಾಜ ದಲ್ಲಿ ವಿಶೇಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಯುವ ಮುಖಂಡರಾದ ಶೇಕ್ ತಾಜುದ್ದೀನ್, ಅಲನ್ ಭಕ್ಷಿ, ಮೊಹಮ್ಮದ್ ಸುಹೇಲ್, ಚಿರಂಜೀವಿ, ಅಸಾದ್, ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಇದ್ದರು.