ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Indi News: ಗ್ರಾಪಂ ಗಳಿಗೆ ಬಾರದ 15ನೇ ಹಣಕಾಸು ಯೋಜನೆ ಅನುದಾನ: ಬಹುತೇಕ ಗ್ರಾಪಂಗಳಿಗೆ ಅರ್ಥಿಕ ಸಂಕಷ್ಟ

ಅಭಿವೃದ್ದಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಅಕ್ಷರಶಃ ಹೈರಾಣಾಗುತ್ತಿದ್ದಾರೆ. ವೇತನ ಪಾವತಿ, ನಿರ್ವಹಣೆಗೆ ತಾಲೂಕಿ ನಲ್ಲಿರುವ 38 ಗ್ರಾಪಂಗಳು ಸಾರ್ವಜನಿಕರಿಂದ ಸಂಗ್ರಹವಾಗುವ ತೆರಿಗೆ ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗ ನೀಡುವ ಅನುದಾನ ಅವಲಂಬಿಸಿವೆ. ಆದರೆ 15ನೇಯ ಹಣಕಾಸು ಆಯೋಗದ ಅನುದಾನ ವನ್ನು ನಾಲ್ಕು ವರ್ಷದವರೆಗೆ ನಾನಾ ಕಂತುಗಳಲ್ಲಿ ನೀಡುತ್ತ ಬಂದಿದ್ದ ಕೇಂದ್ರ ಐದನೇ ವರ್ಷದ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ

ಗ್ರಾಪಂ ಗಳಿಗೆ ಬಾರದ 15ನೇ ಹಣಕಾಸು ಯೋಜನೆ ಅನುದಾನ

-

Profile
Ashok Nayak Apr 22, 2026 11:07 PM

ಗ್ರಾಪಂ ಗಳಿಗೆ ಬಾರದ 15ನೇ ಹಣಕಾಸು ಯೋಜನೆ ಅನುದಾನ: ಬಹುತೇಕ ಗ್ರಾಪಂಗಳಿಗೆ ಅರ್ಥಿಕ ಸಂಕಷ್ಟ

ಇಂಡಿ: ಗ್ರಾಮಗಳ ಸರ್ವತೋಮುಖ ಅಭಿವೃದ್ದಿಯ ಬೆನ್ನೆಲುಬಾಗಿದ್ದ 15ನೇ ಹಣಕಾಸು ಯೋಜನೆ ಯ ಅನುದಾನವು ಸಕಾಲಕ್ಕೆ ಬಿಡುಗಡೆಯಾಗದ ಕಾರಣ ಇಂಡಿ ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿಗಳು ಅರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬೇಸಿಕೆಯ ಬಿಸಿ ಏರುತ್ತಿದ್ದಂತೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಅಭಿವೃದ್ದಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಅಕ್ಷರಶಃ ಹೈರಾಣಾಗುತ್ತಿದ್ದಾರೆ. ವೇತನ ಪಾವತಿ, ನಿರ್ವಹಣೆಗೆ ತಾಲೂಕಿ ನಲ್ಲಿರುವ 38 ಗ್ರಾಪಂಗಳು ಸಾರ್ವಜನಿಕರಿಂದ ಸಂಗ್ರಹವಾಗುವ ತೆರಿಗೆ ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗ ನೀಡುವ ಅನುದಾನ ಅವಲಂಬಿಸಿವೆ. ಆದರೆ 15ನೇಯ ಹಣಕಾಸು ಆಯೋಗದ ಅನುದಾನವನ್ನು ನಾಲ್ಕು ವರ್ಷದವರೆಗೆ ನಾನಾ ಕಂತುಗಳಲ್ಲಿ ನೀಡುತ್ತ ಬಂದಿದ್ದ ಕೇಂದ್ರ ಐದನೇ ವರ್ಷದ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ. ವರ್ಷದಿಂದ ಅನುದಾನ ಬಿಡುಗಡೆಯಾಗದ ಕಾರಣ 20 ಕೋಟಿ ರೂ ಹೆಚ್ಚು ಅನುದಾನ ಬರಬೇಕಾಗಿದೆ. ಅನುದಾನ ಬಾರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಮೋಟಾರು ರಿಪೇರಿ ಪೈಪ ಲೈನ್ ಅಳವಡಿಕೆ ಮತ್ತು ಬೀದಿ ದೀಪಗಳ ನಿರ್ವಹಣೆಗೆ ತೊಡಕುಂಟಾಗಿದೆ.

ಇದನ್ನೂ ಓದಿ: Vijayapura news: ಪಿಎಸ್‌ಐಯಿಂದ ಭ್ರಷ್ಟಾಚಾರದ ಒತ್ತಡ, ದಯಾಮರಣ ಕೋರಿದ ಠಾಣೆ ಸಿಬ್ಬಂದಿ

ಪ್ರತಿ ವರ್ಷ ಮಾರ್ಚ ಮತ್ತು ಏಪ್ರೀಲ ಮೇ ತಿಂಗಳಲ್ಲಿ ಹಳ್ಳಿಗಳಲ್ಲಿ ಬೋರವೆಲ್ ರಿಪೇರಿ, ಪೈಪ ಲೈನ್ ಅಳವಡಿಕೆ ಮತ್ತು ಟ್ಯಾಂಕರ ಮೂಲಕ ನೀರು ಸರಬರಾಜು ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಆದರೆ ಕೇಂದ್ರ ಸರಕಾರದಿಂದ ಬರಬೇಕಾದ 15ನೇ ಹಣಕಾಸು ಯೋಜನೆಯ ಕಂತುಗಳು ವಿಳಂಬವಾಗಿರುವದರಿAದ ಸಣ್ಣ ಪುಟ್ಟ ದುರಸ್ತಿ ಕಾರ್ಯಗಳಲ್ಲೂ ಹಣವಿಲ್ಲ ದಂತಾಗಿದೆ.

ಒಂದೆಡೆ 15ನೇ ಹಣಕಾಸು ಯೋಜನೆಯ ಅನುದಾನ ಬಿಡುಗಡೆಯಾಗದೆ ಬಾಕಿ ಉಳಿದಿದ್ದರೆ ಇನ್ನೊಂದೆಡೆ ಸ್ಥಳೀಯವಾಗಿ ತೆರಿಗೆ ವಸೂಲಿ ಕುಂಠಿತಗೊಂಡಿರುವದು ಪಂಚಾಯತಿ ಅಧಿಕಾರಿ ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ದೊಡ್ಡ ಗ್ರಾಪಂ ದಲ್ಲಿ ತೆರಿಗೆ ಪಡೆದು ಸ್ವಲ್ಪ ಕೆಲಸಗಳು ನಡೆದಿವೆ ಆದರೆ ಬಹುತೇಕ ಸಣ್ಣ ಗ್ರಾಪಂನಲ್ಲಿ ಸಮರ್ಪಕ ತೆರಿಗೆ ಬಾರದ ಕಾರಣ ಅಧಿಕಾರಿಗಳು ಸಂಕಷ್ಟಕ್ಕೆ ಸುಲಿಕಿದ್ದಾರೆ. ಹಲವೆಡೆ ಬಿಲ್ ಪಾವತಿಸುವಂತೆ ಏಜನ್ಸಿಗಳು ತೀರ್ವ ಒತ್ತಡ ಹಾಗೂ ಬೆದರಿಕೆ ಹಾಕುತ್ತಿರುವದರಿಂದ ಅಧಿಕಾರಿಗಳ ಮಾನಸಿಕ ನೆಮ್ಮದಿ ಹಾಳಾಗಿದೆ. ಭಯದ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ತಾಲೂಕಿನ ಗ್ರಾಮ ಪಂಚಾಯತಿಗಳು ಕಳೆದ ಒಂದು ವರ್ಷದಿಂದ ಲಕ್ಷಾಂತರ ಬಾಕಿ ಬಿಲ್ ಹೊಂದಿದೆ.

ಸಾರ್ವಜನಿಕ ಹಿತದೃಷ್ಟಿಯಿಂದ ಪಿಡಿಒ ಅವರ ಸ್ಥಳಿಯ ಏಜನ್ಸಿಗಳಿಂದ ಸಾಲದ ರೂಪದಲ್ಲಿ ಸಾಮಗ್ರಿ ಪಡೆದು ಸೇವೆ ನೀಡಿದ್ದಾರೆ. ಆದರೆ ಈಗ ಹಳೆಯ ಬಾಕಿ ಪಾವತಿಯಾಗದ ಕಾರಣ ಯಾವುದೇ ಸರಬರಾಜು ಏಜನ್ಸಿಗಳು ಹೊಸ ಸಾಮಗ್ರಿ ನೀಡುತ್ತಿಲ್ಲ. ಹಳ್ಳಿಗಳಲ್ಲಿ ಮೂಲ ಸೌಕರ್ಯಗಳ ನಿರ್ವಹಣೆಗೆ ದೊಡ್ಡ ಅಡ್ಡಿಯಾಗಿದೆ ಎಂಬುದು ಪಿಡಿಒ ಅವರ ವಾದವಾಗಿದೆ.

ಒಂದೆಡೆ ಸರಕಾರದ ಗುರಿಗಳನ್ನು ತಲುಪುವ ಒತ್ತಡ ಇನ್ನೊಂದೆಡೆ ಅನುದಾನವಿಲ್ಲದೆ ಸಾರ್ವ ಜನಿಕರ ಪ್ರಶ್ನೆಗಳಿಗೆ ಉತ್ತರಿಸಲಾಗದ ಇಕ್ಕಟ್ಟಿನಲ್ಲಿ ಪಿಡಿಒಗಳು ಸಿಲುಕಿದ್ದಾರೆ. ಅನುದಾನವಿಲ್ಲ ದಿದ್ದರೂ ಆನ್ ಲೈನ್ ಪೋರ್ಟಾಲಗಳಲ್ಲಿ ಪ್ರಗತಿ ವರದಿಯನ್ನು ಅಪ್ಡೆಟ ಮಾಡುವದು ಮತ್ತು ನಿರಂತರ ಸಭೆಗಳಿಗೆ ಹಾಜರಾಗುವದು ಅಧಿಕಾರಿಗಳ ನಿದ್ದೆಗೆಡಿಸಿದೆ. ಅನೇಕ ಪಂಚಾಯತಿಗಳಲ್ಲಿ ಸಿಬ್ಬಂದಿ ವೇತನ ಪಾವತಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

image

ರಾಜ್ಯದಲ್ಲಿ ಕಾಂಗ್ರೆಸ ಸರಕಾರ ಇರುವದರಿಂದ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ಅನು ದಾನ ನೀಡಲು ವಿಳಂಬ ಮಾಡುತ್ತಿದೆ. ಕೇಂದ್ರ ಸರಕಾರ ತಕ್ಷಣವೇ 15ನೇ ಹಣಕಾಸು ಯೋಜನೆಯ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು.

ಪ್ರಶಾಂತ ಕಾಳೆ ಗ್ಯಾರಂಟಿ ಯೋಜನೆ ತಾಲೂಕಾ ಅಧ್ಯಕ್ಷರು ಇಂಡಿ
image

15ನೇ ಹಣಕಾಸು ಯೋಜನೆ ಅನುದಾನ ಬಾರದೆ ಇರುವದರಿಂದ ಸಮಸ್ಯೆ ಹೆಚ್ಚಾಗಿದೆ. ಸ್ಥಳೀಯ ವಾಗಿ ಸಂಪನ್ಮೂಲವನ್ನು ಸಂಗ್ರಹ ಮಾಡಿಕೊಂಡು ಕೆಲಸ ಮಾಡಲಾಗುತ್ತಿದೆ. ಹೆಚ್ಚು ಜನರು ತೆರಿಗೆ ಕಟ್ಟಬೇಕು. ಏಪ್ರಿಲ್‌ ಮತ್ತು ಮೇ ಎರಡು ತಿಂಗಳಿಂದ ಒಮ್ಮೆ ತೆರಿಗೆ ಕಟ್ಟಿದರೆ ಶೇ.5 ತೆರಿಗೆ ಕಡಿಮೆ ಮಾಡುತ್ತೇವೆ.

ಭೀಮಾಶಂಕರ ಕನ್ನೂರ ತಾಪಂ ಇಒ ಇಂಡಿ