ಜಿಲ್ಲೆಯಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ದಯಾಸಾಗರ ಪಾಟೀಲ ಇವರಿಗೆ ಜಿಲ್ಲೆಯಿಂದ ಹೊರ ಹಾಕಲು ಆಗ್ರಹ: ಮಲ್ಲು ಲೋಣಿ
ಶಾಸಕ ಯಶವಂತರಾಯಗೌಡ ಪಾಟೀಲ ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸ ಗಳಿಸಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದಂತೆ ಎಲ್ಲರನ್ನು ಸಮಾನವಾಗಿ ಕಂಡಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲರ ವಿರುದ್ಧ ದಯಾಸಾಗರ ಪಾಟೀಲ ಮಾಡಿರುವ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಇದು ರಾಜಕೀಯ ಷೆಡ್ಯಂತರ ಶಾಸಕ ಹೆಸರು ಕೆಡಿಸುವ ಹುನ್ನಾರ, ಕಳೆದ ೮ ವರ್ಷಗಳ ಹಿಂದೆ ೨ ಬಾರಿ ಯಶವಂತರಾಯಗೌಡ ಪಾಟೀಲ ಶಾಸಕರಾಗಿ ಜನಮನ ಗೆದ್ದಿದ್ದಾರೆ.
ಗಾಣಿಗ ಹಾಗೂ ಹಾಲುಮತ ಸಮುದಾಯದ ಮುಖಂಡರು ಜಂಟಿಯಾಗಿ ಬಿಜೆಪಿ ಮುಖಂಡ ದಯಾಸಾಗರ ಪಾಟೀಲರ ವಿರುಧ್ಧ ಪತ್ರಿಕಾಗೋಷ್ಠಿ ನಡೆಸುತ್ತಿರುವುದು. -
Ashok Nayak
Oct 30, 2025 9:43 PM
ಇಂಡಿ: ಶಾಸಕ ಯಶವಂತರಾಯಗೌಡ ಪಾಟೀಲ ಅಭಿವೃದ್ದಿಯಿಂದ ನನಗೆ ಮತಕ್ಷೇತ್ರದ ಜನತೆ ಆರ್ಶೀವಾದ ಮಾಡಿದ್ದಾರೆ ಎಂದು ಯಾವುದೇ ಜಾತಿ, ಧರ್ಮ ಆಧಾರದಲ್ಲಿ ಮಾತನಾಡದೆ ಸರ್ವ ಜನಾಂಗದ ಮನಸ್ಸು ಗೆದ್ದ ಜನನಾಯಕ ತಾಲೂಕು ಜಿಲ್ಲೆಯಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ಬಿಜೆಪಿ ನಾಯಕ ದಯಾಸಾಗರ ಪಾಟೀಲ ಇವರಿಗೆ ಜಿಲ್ಲೆಯಿಂದಲೇ ಹೊರ ಹಾಕಬೇಕು ಎಂದು ಉಪವಿಭಾಗಾಧಿಕಾರಿಗಳ ಮೂಲಕ ಇಂದು ಸರಕಾರಕ್ಕೆ ಆಗ್ರಹಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಗಾಣಿಗ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲು ಲೋಣಿ ಆಗ್ರಹಿಸಿದ್ದಾರೆ.
ಗಾಣಿಗ ಸಮುದಾಯದ ಹಾಗೂ ಹಾಲುಮತ ಸಮುದಾಯದ ಮುಖಂಡರು ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಯಶವಂತರಾಯಗೌಡ ಪಾಟೀಲ ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸಗಳಿಸಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದಂತೆ ಎಲ್ಲರನ್ನು ಸಮಾನವಾಗಿ ಕಂಡಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲರ ವಿರುದ್ಧ ದಯಾಸಾಗರ ಪಾಟೀಲ ಮಾಡಿರುವ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಇದು ರಾಜಕೀಯ ಷೆಡ್ಯಂತರ ಶಾಸಕ ಹೆಸರು ಕೆಡಿಸುವ ಹುನ್ನಾರ, ಕಳೆದ ೮ ವರ್ಷಗಳ ಹಿಂದೆ ೨ ಬಾರಿ ಯಶವಂತರಾಯಗೌಡ ಪಾಟೀಲ ಶಾಸಕರಾಗಿ ಜನಮನ ಗೆದ್ದಿದ್ದಾರೆ.
ಇದನ್ನೂ ಓದಿ: Indi News: ಜನಹಿತ ಕಾಪಾಡುವ ಜಿಎಸ್ಟಿ ಸರಳೀಕರಣ: ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ
ಹಾಲುಮತ, ಗಾಣಿಗ ಸಮುದಾಯದ ಜಿ.ಪಂ ತಾ.ಪಂ ಅಧಿಕಾರ ನೀಡಿದ್ದಾರೆ ಸಮಾಜದ ಬಗ್ಗೆ ಮತ್ಸರ ಇದ್ದರೆ ಇಂದು ಇಂಡಿ ಬ್ಲಾಕ್ ಅಧ್ಯಕ್ಷ ಶಿವಯೋಗೇಪ್ಪ ಚನಗೊಂಡ, ಕೆ.ಎಂ.ಎಫ್ ಅಧ್ಯಕ್ಷರಾಗಿ ಗಡ್ಡದ ಸಹೋದರಿಗೆ, ಸಕ್ಕರೆ ಕಾರ್ಖಾನೆಗೆ ಸಿದ್ದಣ್ಣಾ ಸಾಹುಕಾರ ನಿರ್ದೇಶಕ ಸ್ಥಾನ, ರಾಯಗೊಂಡಪ್ಪಗೌಡ ಇವರಿಗೆ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಸ್ಥಾನ ನೀಡಿ ಗಾಣಿಗ ಸಮುದಾಯ ಕ್ಕೆ ಮೇರುಪಂಕ್ತಿಗೆ ಸಾಗಿಸಿದ್ದಾರೆ. ೮ ವರ್ಷಗಳ ಹಿಂದೆ ಆಗಿರುವ ಘಟನೆ ಇಂದು ಶಾಸಕರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು ಯಾವ ಪುರುಷಾರ್ಥಕ್ಕೆ ಇದು ಸಾಮಾನ್ಯ ಜನರಿಗೆ ಅರಿವಾಗಿದೆ. ಕೂಡಲೆ ಕೈಬಿಡಬೇಕು ಇದನ್ನೇ ಮುಂದುವರೆಸಿದರೆ, ದಯಾಸಾಗರ ಪಾಟೀಲ ಇವರ ವಿರುದ್ಧ ಉಗ್ರಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ದಯಾಸಾಗರ ಪಾಟೀಲ ನಿಮಗೆ ಮತಕ್ಷೇತ್ರದಲ್ಲಿ ಒಳ್ಳೇಯ ಗೌರವ ಇತ್ತು ನಿಮಗೆ ಮುಗ್ದರು ಶಾಸಕರ ನಂತರ ನಿಮಗೆ ಜನ ಗೌರವಿಸುತ್ತಿದ್ದರು ಆದರೆ ಶಾಸಕ ಯಶವಂತರಾಯಗೌಡ ಪಾಟೀಲರ ವಿರುಧ್ಧ ಅಪಪ್ರಚಾರ ಮಾಡಿರುವುದು ಶೋಭ್ಯೆಯಲ್ಲ, ನೀವು ಗಾಣಿಗ ಸಮುದಾಯದ ಬಗ್ಗೆ ಆರೋಪ ಮಾಡುವಾಗ ಹಾಲುಮತ ಸಮುದಾಯ ಸೇರಿಸಿಕೊಂಡು ಮಾತನಾಡುವುದು ಯಾಕೆ ? ಶಾಸಕರು ಹಾಲುಮತ ಸಮಾಜ ಬಗ್ಗೆ ಶಾಸಕರು ಎಂದಿಗೂ ಕೆಟ್ಟದಾಗಿ ಮಾತನಾಡಿಲ್ಲ ಈ ಹಿಂದೆ ಅವರ ಸಮುದಾಯದ ವ್ಯಕ್ತಿ ನಿಂತಿದ್ದಾರೆ ಅವರು ನಿಂತರೂ ಸಹಿತ ಅನೇಕ ಹಾಲುಮತ ಸಮಾಜದವರು ನನಗೆ ಮತ ಹಾಕಿದ್ದಾರೆ. ಈ ಹಿಂದೆ ನಾನು 2013ರಲ್ಲಿ ಶಾಸಕರಾಗಲು ಹಾಲುಮತ ಸಮಾಜವೇ ಪ್ರಮುಖ ಕಾರಣ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪದೆ ಪದೆ ಹೇಳುತ್ತಾರೆ. ಹಾಲುಮತ ಸಮಾಜಕ್ಕೆ ಯಾವಾಗಲೂ ಗೌರವಿಸಿದ್ದಾರೆ ದಯಾಸಾಗರ ಪಾಟೀಲ ಇನ್ನು ಮುಂದೆ ಶಾಸಕರ ವಿರುಧ್ಧ ಆರೋಪ ಮಾಡುವುದು ಕೈ ಬೀಡಬೇಕು ಒಂದು ವೇಳೆ ಮುಂದುವರೆಸಿದರೆ ನಿಮ್ಮ ವಿರುಧ್ಧ ಹಾಲುಮತ ಸಮುದಾಯ ಉಗ್ರಹೋರಾಟ ಮಾಡಬೇಕಾಗುತ್ತದೆ. ದಯಾಸಾಗರ ಪಾಟೀಲ ವಿಮರ್ಶೇ ಮಾಡಿಕೊಳ್ಳದಿದ್ದರೆ ಎಲ್ಲ ಸಮುದಾಯ ಸೇರಿಸಿ ನಿಮ್ಮನ್ನೆ ಗಡಿಪಾರು ಮಾಡುವ ಹೋರಾಟ ಮಾಡಬೇಕಾಗುತ್ತದೆ ಎಂದು ಹಾಲುಮತ ಸಮಾಜದ ಮುಖಂಡ ಜೆಟ್ಟೆಪ್ಪ ರವಳಿ ಎಚ್ಚರಿಕೆ ನೀಡಿದರು.
ಶಿವಯೋಗೇಪ್ಪ ಚನಗೊಂಡ, ಗೋಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಭೀಮು ಗಡ್ಡದ, ಸುಗಲಾಮಾತಾ ಮುಕ್ತಿ ಮಂದಿರ ಹಿರೇರೂಗಿ , ಅಪ್ಪು ಕಲ್ಲೂರ, ಸುಭಾಷ ಹಿನ್ನಳ್ಳಿ, ರಾಯ ಗೊಂಡಪ್ಪಗೌಡ ಪಾಟೀಲ, ಮಾಜಿ ಜಿ.ಪಂ ಸದಸ್ಯ ಸೌಮ್ಯ ಕಲ್ಲೂರ, ಗುರು ಹಾವಳಗಿ, ಗಾಣಿಗ ಸಮುದಾಯದ ತಾಲೂಕಾ ಕಾರ್ಯದರ್ಶಿ ರಾಮ ಯಂಕಚಿ, ನೀಲಪ್ಪ ರೂಗಿ, ಅಣ್ಣಾರಾಯ ಬಬಲಾದ, ಅರವಿಂದ ಬಿರಾದಾರ, ಧರೇಪ್ಪ ಮಕಣಾಪೂರ, ರಾವುತಪ್ಪ ಹುಲ್ಲೂರ, ಜಕ್ಕಪ್ಪ ಹತ್ತಳ್ಳಿ, ಶ್ರೀಮಂತ ಲೋಣಿ, ಅವಿನಾಶ ಬಗಲಿ,ಚಿದಾನಂರ ಗಂಗನಳ್ಳಿ ಸೇರಿದಂತೆ ಅನೇಕರಿದ್ದರು.
*
ಕನ್ಹೇರಿ ಶ್ರೀಗಳಿಗೆ ಜಿಲ್ಲಾ ಭೇಟಿಗೆ ನಿರ್ಬಂದಿಸಿದಂತೆ ಶಾಸಕ ಯಶವಂತರಾಯಗೌಡರಿಗೂ ನಿರ್ಬಂಧಿಸ ಬೇಕೆಂಬ ಹೇಳಿಕೆ ದಯಾಸಾಗರ ಪಾಟೀಲರ ಹತಾಶೆ ಭಾವನೆಯಿಂದ ಕೂಡಿದೆ. ಅವರು ಒಂದುವಾರದಲ್ಲಿ ಗಾಣಿಗ ಮತ್ತು ಕುರುಬ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಸಮಾಜ ಘಾತುಕ ನಿಂದನೆ ಆರೋಪದ ಮೇಲೆ ದಯಾಸಾಗರ ಪಾಟೀಲರನ್ನು ಗಡಿಪಾರು ಮಾಡಬೇಕೆಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುವದಾಗಿ ಹೇಳಿದರು.
ಮಲ್ಲು ಲೋಣಿ