IPL 2026: ಕೋಲ್ಕತಾ ನೈಟ್ ರೈಡರ್ಸ್‌ಗೆ ಅಭಿಷೇಕ್ ನಾಯರ್ ನೂತನ ಹೆಡ್ ಕೋಚ್!
Abhishek Nayar New Head Coach for KKR: ಮುಂಬರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಅಭಿಷೇಕ್ ಶರ್ಮಾ ಅವರು ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಆ ಮೂಲಕ ಚಂದ್ರಕಾಂತ್ ಪಂಡಿತ್ ಸ್ಥಾನವನ್ನು ಅಲಂಕರಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್‌ಗೆ ಅಭಿಷೇಕ್ ನಾಯರ್ ನೂತನ ಹೆಡ್ ಕೋಚ್ ಆಗಿ ನೇಮಕ. -
ನವದೆಹಲಿ: ಮುಂಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ನಿಮಿತ್ತ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಕ್ಕೆ ನೂತನ ಹೆಡ್ ಕೋಚ್ ಆಗಿ ಅಭಿಷೇಕ್ ನಾಯರ್ (Abhishek Nayar) ನೇಮಕಗೊಂಡಿದ್ದಾರೆ. ಆ ಮೂಲಕ ಚಂದ್ರಕಾಂತ್ ಪಂಡಿತ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡಕ್ಕೆ ಚಂದ್ರಕಾಂತ್ ಪಂಡಿತ್ ಮುಖ್ಯ ಕೋಚ್ ಆಗಿದ್ದರು. ಅಭಿಷೇಕ್ ನಾಯರ್ ಅವರು ಹಲವು ವರ್ಷಗಳ ಕಾಲ ಕೋಲ್ಕತಾ ಫ್ರಾಂಚೈಸಿಯಲ್ಲಿ ಸಹಾಯಕ ಕೋಚ್ ಸೇರಿದಂತೆ ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಇದೀಗ ಅವರು ಕೆಕೆಆರ್ ತಂಡದ ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ.
ಇತ್ತೀಚೆಗೆ ಅಭಿಷೇಕ್ ನಾಯರ್ ಅವರು ಭಾರತ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದಾದ ಬಳಿಕ ಅವರನ್ನು ಈ ಹುದ್ದೆಯಿಂದ ತೆಗೆಯಲಾಗಿತ್ತು. ಏಕೆಂದರೆ, ಕಳೆದ ವರ್ಷ ಭಾರತ ತಂಡ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ತವರು ಟೆಸ್ಟ್ ಸರಣಿಗಳನ್ನು ಸೋತಿತ್ತು. ಅಂದ ಹಾಗೆ ಅಭಿಷೇಕ್ ನಾಯರ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಅವರು ಕೋಚಿಂಗ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಇವರು ರಿಂಕು ಸಿಂಗ್, ಹರ್ಷಿತ್ ರಾಣಾ ಸೇರಿದಂತೆ ಹಲವು ಯುವ ಪ್ರತಿಭೆಗಳಿಗೆ ಕೋಚ್ ಮಾಡಿದ್ದಾರೆ.
IPL 2026 Auction: ಐಪಿಎಲ್ 2026ರ ಮಿನಿ ಹರಾಜು ದಿನಾಂಕ, ಸ್ಥಳ, ಸಮಯ ಬಹಿರಂಗ
2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿ ಕಪ್ ಗೆದ್ದಾಗ ಹೆಡ್ ಕೋಚ್ ಗೌತಮ್ ಗಂಭೀರ್‌ಗೆ ಅಭಿಷೇಕ್ ನಾಯರ್ ಸಹಾಯಕ ಕೋಚ್ ಆಗಿದ್ದರು. ಕಳೆದ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಯುಪಿ ವಾರಿಯರ್ಸ್ ತಂಡಕ್ಕೆ ಹೆಡ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇದೀಗ ಅವರು ಮತ್ತೆ ಕೋಲ್ಕತಾ ನೈಟ್ ರೈಡರ್ಸ್ ದೊಡ್ಡ ಹುದ್ದೆಯ ಮೂಲಕ ಮರಳಿದ್ದಾರೆ.
A new chapter begins in the Knight Riders’ story 📖✍ pic.twitter.com/4GgRVAlMdx
— KolkataKnightRiders (@KKRiders) October 30, 2025
ಅಭಿಷೇಕ್ ನಾಯರ್‌ಗೆ ಹೆಡ್ ಕೋಚ್ ನೀಡಿದ ಬಗ್ಗೆ ವೆಂಕಿ ಮೈಸೂರು ಹೇಳಿಕೆ
"2018 ರಿಂದ ಅಭಿಷೇಕ್ ನೈಟ್ ರೈಡರ್ಸ್ ತಂಡದ ಪ್ರಮುಖ ಭಾಗವಾಗಿದ್ದಾರೆ, ಮೈದಾನದ ಒಳಗೆ ಮತ್ತು ಹೊರಗೆ ನಮ್ಮ ಆಟಗಾರರನ್ನು ರೂಪಿಸುತ್ತಿದ್ದಾರೆ. ಆಟದ ಬಗ್ಗೆ ಅವರ ತಿಳುವಳಿಕೆ ಮತ್ತು ಆಟಗಾರರೊಂದಿಗಿನ ಸಂಪರ್ಕವು ನಮ್ಮ ಬೆಳವಣಿಗೆಗೆ ಪ್ರಮುಖವಾಗಿದೆ. ಅವರು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡು ಕೆಕೆಆರ್ ಅನ್ನು ಮುಂದಿನ ಅಧ್ಯಾಯಕ್ಕೆ ಕರೆದೊಯ್ಯುವುದನ್ನು ನೋಡಲು ನಮಗೆ ತುಂಬಾ ಸಂತೋಷವಾಗಿದೆ," ಎಂದು ವೆಂಕಿ ಮೈಸೂರು ತಿಳಿಸಿದ್ದಾರೆ.
A new dawn is upon us 💜☀ pic.twitter.com/hQZLFSuaCm
— KolkataKnightRiders (@KKRiders) October 30, 2025
2026ರ ಐಪಿಎಲ್ ಆಟಗಾರರ ಮಿನಿ ಹರಾಜಿಗೆ ಸ್ವಲ್ಪ ಮುಂಚಿತವಾಗಿ ಅಭಿಷೇಕ್ ನಾಯರ್ ಅವರ ನೇಮಕವಾಗಿದೆ. ಕಳೆದ ಋತುವಿನಲ್ಲಿ ಕೆಕೆಆರ್ ಕೇವಲ ಐದು ಪಂದ್ಯಗಳನ್ನು ಗೆದ್ದು ಏಳರಲ್ಲಿ ಸೋತಿದ್ದರಿಂದ ಎಂಟನೇ ಸ್ಥಾನದಲ್ಲಿತ್ತು.