ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

ಗಂಟೆಗೆ ನಗರದ ಶಿವಾಜಿ ವೃತ್ತದಿಂದ ಮಹಾವೀರ ವೃತ್ತ ಅಂಬೇಡ್ಕರ ಬಸವೇಶ್ವರ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಿಂದಗಿ ರಸ್ತೆಯಲ್ಲಿರುವ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ ಮಗ್ಗಲಿನ ಸದಾಶಿವನಗರದಖಾಲಿ ಇರುವ ಜಾಗದಲ್ಲಿ ಬೃಹತ್ ಹಿಂದು ಶೋಭಾ ಯಾತ್ರೆ ಜರುಗಿತು.

Indi News: ಇಂಡಿಯಲ್ಲಿ ವಿರಾಟ ಹಿಂದು ಶೋಭಾಯಾತ್ರೆ

ಇಂಡಿಯಲ್ಲಿ ಬೃಹತ ಹಿಂದು ಸಮಾವೇಶ -

Ashok Nayak
Ashok Nayak Mar 7, 2026 10:55 AM

ಇಂಡಿ: ನಗರದಲ್ಲಿ ವಿರಾಟ ಹಿಂದು ಶೋಭಾ ಯಾತ್ರೆ ನಡೆಯಿತು. ಬೃಹತ್ ಹಿಂದು ಸಮಾವೇಶಕ್ಕೆ ಜಮಖಂಡಿ ತಾಲೂಕು ಮೈಗೂರಿನ ಪೂಜ್ಯ ಗುರುಪ್ರಸಾದ ಶ್ರೀಗಳು , ಜೇವರ್ಗಿ ಅಂದೂಲ ಶ್ರೀ ಕರುಣೇಶ್ವರ ಮಠದ ಸಿದ್ದಲಿಂಗ ಶಿವಾಚಾರ್ಯರರು , ಹಿರೇಮಣೂರದ ಶ್ರೀ ವೇದೇಶ ತೀರ್ಥ ವಿದ್ಯಾಪೀಠದ ಉಪಕುಲಪತಿ ಪಂಡಿತ ಶ್ರೀ ಸರ್ವೇಶಚಾರ್ಯ ಮತ್ತು ಪ್ರಾಂತ ಕಾರ್ಯವಾಹಕರು ಕರ್ನಾಟಕ ಉತ್ತರ ಪ್ರಾಂತದ ಶ್ರೀ ರಾಘವೇಂದ್ರ ಕಾಗವಾಡ ಭಾಗವಹಿಸಿದ್ದರು.

ಗಂಟೆಗೆ ನಗರದ ಶಿವಾಜಿ ವೃತ್ತದಿಂದ ಮಹಾವೀರ ವೃತ್ತ ಅಂಬೇಡ್ಕರ ಬಸವೇಶ್ವರ ಸ್ವಾಮಿ ವಿವೇಕಾನಂದ ವೃತ್ತದ ಮಾರ್ಗವಾಗಿ ಸಿಂದಗಿ ರಸ್ತೆಯಲ್ಲಿರುವ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ ಮಗ್ಗಲಿನ ಸದಾಶಿವನಗರದಖಾಲಿ ಇರುವ ಜಾಗದಲ್ಲಿ ಬೃಹತ್ ಹಿಂದು ಶೋಭಾಯಾತ್ರೆ ಜರುಗಿತು.

ಇದನ್ನೂ ಓದಿ: Indi News: ರಾಷ್ಟ್ರಪ್ರೇಮದ ಅಲೆ ಜನತೆಯ ಹೃದಯದಲ್ಲಿ ಮೂಡಿಸಿದ ಶಿವಾಜಿ ಮಹಾರಾಜರು

ಭೀಮಾಶಂಕರ ಮುರಗುಂಡಿ ಸಂಚಲನ ಸಮಿತಿ ಅಧ್ಯಕ್ಷ , ಕಾಸುಗೌಡ ಬಿರಾದಾರ, ಹಣಮಂತಗೌಡ ಪಾಟೀಲ, ಮುತ್ತು ದೇಸಾಯಿ, ಪ್ರಕಾಶ ಬಿರಾದಾರ, ಅನೀಲ ಜಮಾದಾರ, ರಾಮಸಿಂಗ ಕನ್ನೊಳ್ಳಿ , ಜಿ.ಎಸ್.ಜೋಶಿ ವಕೀಲರು, ಅನೀಲಗೌಡ ಬಿರಾದಾರ, ಮಲ್ಲಿಕಾ ರ್ಜುನ ಕಿವಡೆ, ಸಂಜು ದಶವಂತ, ಸೋಮು ನಿಂಬರಗಿಮಠ, ಬಸವರಾಜ ಕಂಬಾರ, ಆನಂದ ಕುಲಕರ್ಣಿ, ವಿವೇಕ ಹಂಜಗಿ ವಕೀಲರು , ಗೋವಿಂದ ಹಿಬಾರೆ, ಸುನೀಲಗೌಡ ಬಿರಾದಾರ, ನಾಗನಾಥ ಹಂಚಾಟೆ , ಪುರಸಭೆ ಮಾಜಿ ಅಧ್ಯಕ್ಷ ಯಮನಾಜಿ ಸಾಳುಂಕೆ, ಸಂತೋಷ ಗವಳಿ, ರಾಮಸಿಂಗ ಕನ್ನೊಳ್ಳಿ ಸುಭಾಷ ಪಾಟೀಲ, ಬಾಳು ಮುಳಜಿ ಮತ್ತಿತ ರಿದ್ದರು.

ಸಮಾವೇಶದ ನಿಮಿತ್ಯ ಬೃಹತ್ ಶೋಭಾಯಾತ್ರೆ, ಮಾರ್ಗದುದ್ದಕ್ಕೂ ರಂಗೋಲಿ ಹಾಕಿ ತೋರಣ ಕಟ್ಟಿ ಸ್ವಾಗತಿಸಿದರು. ಬಹುತೇಕ ವೃತ್ತಗಳು ರಸ್ತೆಯುದ್ದಕ್ಕೂ ಭಗವಾ ಧ್ವಜ ರಾರಾಜಿಸುತ್ತಿತ್ತು. ಮಕ್ಕಳಿಗೆ ದೇಶ ಭಕ್ತರ ಹಾಗೂ ಮಹಾಪುರುಷರ ಛದ್ಮವೇಶ ಹಾಕಿದ್ದರು. ನಿವಾಸಿಗಳ ಮನೆ, ಅಂಗಡಿಗಳ ಮುಂದೆ ಮಹಾಪುರುಷರ ಭಾವಚಿತ್ರ ಅಳವಡಿಸಿದ್ದರು.