ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಘೋರ ದುರಂತ: ಕಾರಿನ ಡಿಕ್ಕಿಯಲ್ಲಿ ಸಿಲುಕಿ 3 ವರ್ಷದ ಮಗು ಉಸಿರುಗಟ್ಟಿ ಸಾವು

ಆಕಸ್ಮಿಕವಾಗಿ ಕಾರಿನ ಡಿಕ್ಕಿಯೊಳಗೆ ಸಿಲುಕಿ ಮೂರು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ಯಾದಗಿರಿ ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಟ್ಟೂರೇಶ್ವರ ಪೂಜ್ಯರ ಎಂಬುವವರ ಪುತ್ರ ಬಸವಪ್ರಭು (3) ಮೃತಪಟ್ಟ ದುರ್ದೈವಿ ಬಾಲಕ. ಬಸವಪ್ರಭು ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಮನೆಯ ಮುಂಭಾಗದ ಆವರಣದಲ್ಲಿ ಆಟವಾಡುತ್ತಿದ್ದ.

ಕಾರಿನ ಡಿಕ್ಕಿಯಲ್ಲಿ ಸಿಲುಕಿ 3 ವರ್ಷದ ಮಗು ಉಸಿರುಗಟ್ಟಿ ಸಾವು

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Jun 4, 2026 10:31 AM

ಯಾದಗಿರಿ: ಆಕಸ್ಮಿಕವಾಗಿ ಕಾರಿನ ಡಿಕ್ಕಿಯೊಳಗೆ ಸಿಲುಕಿ ಮೂರು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ಯಾದಗಿರಿ (Yadagiri News) ತಾಲೂಕಿನ ತೊನಸನಹಳ್ಳಿ (ಎಸ್) ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೊಟ್ಟೂರೇಶ್ವರ ಪೂಜ್ಯರ ಎಂಬುವವರ ಪುತ್ರ ಬಸವಪ್ರಭು (3) ಮೃತಪಟ್ಟ ದುರ್ದೈವಿ ಬಾಲಕ. ಬಸವಪ್ರಭು ಎಂದಿನಂತೆ ತನ್ನ ಸ್ನೇಹಿತರೊಂದಿಗೆ ಮನೆಯ ಮುಂಭಾಗದ ಆವರಣದಲ್ಲಿ ಆಟವಾಡುತ್ತಿದ್ದ. ಈ ವೇಳೆ ಮನೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಡಿಕ್ಕಿ (ಬೂಟ್ ಸ್ಪೇಸ್) ತೆರೆದಿರುವುದನ್ನು ಗಮನಿಸಿದ ಮಗು, ಆಟದ ರಭಸದಲ್ಲಿ ಅದರೊಳಗೆ ಸೇರಿಕೊಂಡಿದೆ. ಆದರೆ, ದುರದೃಷ್ಟವಶಾತ್ ಡಿಕ್ಕಿಯ ಬಾಗಿಲು ತಾನಾಗಿಯೇ ಲಾಕ್ ಆಗಿದೆ.

ಬಸವಪ್ರಭುಗೆ ಒಳಗಿನಿಂದ ಡಿಕ್ಕಿಯ ಬಾಗಿಲನ್ನು ತೆರೆಯಲು ಸಾಧ್ಯವಾಗಿಲ್ಲ. ಗಾಬರಿಗೊಂಡ ಮಗು ಕಾರಿನ ಸೀಟಿನ ಕೆಳಗಿನಿಂದ ಮುಂಭಾಗಕ್ಕೆ ಬರಲು ಪ್ರಯತ್ನಿಸಿದೆ. ಈ ವೇಳೆ ಸೀಟಿನ ಸಂದಿಯಲ್ಲಿ ತಲೆ ಸಿಲುಕಿಕೊಂಡಿದ್ದು, ಹೊರಬರಲಾಗದೆ ತೀವ್ರವಾಗಿ ಒದ್ದಾಡಿ ಉಸಿರುಗಟ್ಟಿ ಡಿಕ್ಕಿಯೊಳಗೇ ಪ್ರಾಣ ಬಿಟ್ಟಿದೆ. ಮಧ್ಯಾಹ್ನದ ವೇಳೆಗೆ ಮಗು ಆಟವಾಡುತ್ತಿರುವುದು ಕಾಣಿಸದಿದ್ದಾಗ ಗಾಬರಿಗೊಂಡ ಪೋಷಕರು ಮತ್ತು ನೆರೆಹೊರೆಯವರು ಗ್ರಾಮದಾದ್ಯಂತ ಹುಡುಕಾಟ ನಡೆಸಿದ್ದಾರೆ.

ಹಲವು ಗಂಟೆಗಳ ಕಾಲ ಹುಡುಕಿದರೂ ಮಗು ಪತ್ತೆಯಾಗದಿದ್ದಾಗ, ಅನುಮಾನಗೊಂಡು ಮನೆಯಲ್ಲೇ ನಿಂತಿದ್ದ ಕಾರಿನ ಡಿಕ್ಕಿ ತೆರೆದು ನೋಡಿದ್ದಾರೆ. ಈ ವೇಳೆ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ಮಗು ಕೊನೆಯುಸಿರೆಳೆದಿತ್ತು. ಸದ್ಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಗಲ್ಫ್ ಉದ್ವಿಗ್ನತೆ ಮಧ್ಯೆ ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್, ಕ್ಷಿಪಣಿ ದಾಳಿ: ಭಾರತೀಯ ಮೂಲದ ಪ್ರಜೆ ಸಾವು

ತಂತಿ ಸ್ಪರ್ಶಿಸಿ ಬಾಲಕ ಸಾವು

ಬಿರುಗಾಳಿ ಸಹಿತ ಸುರಿದ ಮಳೆಯ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ 8 ವರ್ಷದ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಹುಲಸೂರ ಪಟ್ಟಣದಲ್ಲಿ ಬುಧವಾರ ನಡೆದಿದೆ. ಪಟ್ಟಣದ ವಾರ್ಡ್‌-3ರ‌ ಅರ್ಷದ್‌ ಅಲಿ ಮೊಮೀನ್ ಎಂಬುವವರ ಪುತ್ರ ಅಲಿ ಮೊಮೀನ್‌ (8) ಮೃತ ಬಾಲಕ.‌ ವಿದ್ಯುತ್ ತಂತಿ ತಗುಲಿದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ನಂತರ ಬಾಲಕನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಯಿತು. ಆದರೆ ಬಾಲಕ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದರು. ಈ ಸಂಬಂಧ ಹುಲಸೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.