ಶಿಕ್ಷಕರ ಸಮರ್ಪಣಾ ಮನೋಭಾವಕ್ಕೆ ಒಲಿದ ಯಶಸ್ಸು
ಶಿಕ್ಷಣ ಇಲಾಖೆಯಿಂದ ಕಾಗದದ ಮೇಲೆ ಸೌಲಭ್ಯಗಳ ಮಹಾಪೂರವೇ ಹರಿದುಬಂದರೂ, ಅವು ಪ್ರಾಯೋಗಿಕವಾಗಿ ತಳಮಟ್ಟದಲ್ಲಿ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದು ಸಾರ್ವಜನಿಕರ ಸಾರ್ವ ತ್ರಿಕ ದೂರು. ಆದರೆ, ಇಂತಹ ಕನಿಷ್ಠ ಹಾಗೂ ಸೀಮಿತ ಮೂಲಸೌಕರ್ಯಗಳ ಮಧ್ಯೆಯೂ ಸಂಜೀವ ನಗರದ ಸರಕಾರಿ ಶಾಲೆ ಗಮನ ಸೆಳೆಯುವಂತೆ ಮಾಡುವಲ್ಲಿ ಇಲ್ಲಿನ ಶಿಕ್ಷಕರ ಪಾತ್ರ ಅನನ್ಯವಾಗಿದೆ
-
ವೀರಣ್ಣ ಕಲಕೇರಿ ಕೆಂಭಾವಿ
ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಪಟ್ಟಣದ ಸಂಜೀವನಗರ ಸರಕಾರಿ ಶಾಲೆ
200ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲು
ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಲಕ್ಷಾಂತರ ರುಪಾಯಿ ಹಣ ನೀಡಿ ಖಾಸಗಿ ಶಾಲೆಗಳಿಗೆ ಸೇರಿಸಲು ಮುಗಿ ಬೀಳುತ್ತಿರುವುದು ಸಾಮಾನ್ಯ ಸಂಗತಿ. ಆದರೆ, ಇಲ್ಲಿನ ಪಟ್ಟಣದ ಸರಕಾರಿ ಶಾಲೆಯೊಂದು ತನ್ನ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರ ಶ್ರಮದಿಂದಾಗಿ ಖಾಸಗಿ ಶಾಲೆಗಳನ್ನೂ ಮೀರಿಸಿ ಪಾಲಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ!
ಹೌದು, ಪಟ್ಟಣದ ಸಂಜೀವನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು 1 ರಿಂದ 7ನೇ ತರಗತಿಗೆ ಸರಿಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಹೊಂದುವ ಮೂಲಕ ಸುತ್ತಮುತ್ತಲಿನ ಖಾಸಗಿ ಶಾಲೆಗಳಿಗೆ ಪ್ರಬಲ ಪೈಪೋಟಿ ನೀಡುತ್ತಾ ಮಾದರಿಯಾಗಿ ನಿಂತಿದೆ.
ಶಿಕ್ಷಣ ಇಲಾಖೆಯಿಂದ ಕಾಗದದ ಮೇಲೆ ಸೌಲಭ್ಯಗಳ ಮಹಾಪೂರವೇ ಹರಿದುಬಂದರೂ, ಅವು ಪ್ರಾಯೋಗಿಕವಾಗಿ ತಳಮಟ್ಟದಲ್ಲಿ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದು ಸಾರ್ವಜನಿಕರ ಸಾರ್ವತ್ರಿಕ ದೂರು. ಆದರೆ, ಇಂತಹ ಕನಿಷ್ಠ ಹಾಗೂ ಸೀಮಿತ ಮೂಲಸೌಕರ್ಯಗಳ ಮಧ್ಯೆಯೂ ಸಂಜೀವನಗರದ ಸರಕಾರಿ ಶಾಲೆ ಗಮನ ಸೆಳೆಯುವಂತೆ ಮಾಡುವಲ್ಲಿ ಇಲ್ಲಿನ ಶಿಕ್ಷಕರ ಪಾತ್ರ ಅನನ್ಯವಾಗಿದೆ. ಶಿಕ್ಷಕರ ಸಮರ್ಪಣಾ ಮನೋಭಾವದ ಸೇವೆ ಈ ಶಾಲೆಯ ಇಂದಿನ ಅಭಿವೃದ್ಧಿಗೆ ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: Yadgir News: ಯಾದಗಿರಿಯಲ್ಲಿ ಕ್ವಾರಿಗೆ ಬಿದ್ದು ಇಬ್ಬರು ಬಾಲಕಿಯರು ಸೇರಿ ಮೂವರ ಸಾವು; ಬಟ್ಟೆ ತೊಳೆಯುವ ವೇಳೆ ದುರಂತ!
ದೂರದಿಂದ ಹರಿದುಬರುತ್ತಿರುವ ದಾಖಲಾತಿ: ಪಟ್ಟಣದ ವಿವಿಧ ಬಡಾವಣೆಗಳ ಪಾಲಕರು ತಮ್ಮ ಮನೆಗಳಿಗೆ ಅತ್ಯಂತ ಹತ್ತಿರದಲ್ಲಿರುವ ಸರಕಾರಿ ಶಾಲೆಗಳೂ ಸೇರಿದಂತೆ ಇತರ ಶಾಲೆಗಳನ್ನು ಬಿಟ್ಟು, ಸರಿ ಸುಮಾರು ಒಂದೆರಡು ಕಿಲೋಮೀಟರ್ ದೂರವಿರುವ ಈ ಸಂಜೀವನಗರ ಶಾಲೆಗೆ ನಡೆದುಕೊಂಡು ಬಂದು ಬಡ ಮಧ್ಯಮ ವರ್ಗದ ಪಾಲಕರು ತಮ್ಮ ಮಕ್ಕಳ ಹೆಸರನ್ನು ನೋಂದಾ ಯಿಸುತ್ತಿದ್ದಾರೆ. ಪಾಲಕರಲ್ಲಿ ಮೂಡಿರುವ ಈ ಅಭೂತಪೂರ್ವ ವಿಶ್ವಾಸವೇ ಶಾಲೆಯ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ ಎನ್ನಬಹುದು.
ಶಿಕ್ಷಕರು ಮನಸ್ಸು ಮಾಡಿದರೆ ಸರಕಾರಿ ಶಾಲೆಯ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದಕ್ಕೆ ಸಂಜೀವನಗರ ಶಾಲೆಯೇ ಪ್ರತ್ಯಕ್ಷ ಸಾಕ್ಷಿ. ಇಲಾಖೆಯು ಈ ಶಾಲೆಗೆ ಮತ್ತಷ್ಟು ಪ್ರಾಯೋಗಿಕ ಸೌಲಭ್ಯ ಗಳನ್ನು ಒದಗಿಸಿಕೊಟ್ಟರೆ, ಇದು ಜಿಲ್ಲೆಯಲ್ಲೇ ಅತ್ಯುತ್ತಮ ಮಾದರಿ ಶಾಲೆಯಾಗಿ ಹೊರ ಹೊಮ್ಮುವು ದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ಆಶಯದ ಮಾತುಗಳು ಇಲ್ಲಿನ ಪಾಲಕರ ಮತ್ತು ಸಾರ್ವಜನಿಕರದ್ದಾಗಿದೆ.
ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಗುಣಮಟ್ಟದ ಶಿಕ್ಷಣ ನೀಡುತ್ತಾ ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ ನಮ್ಮ ಸಂಜೀವನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಇಲ್ಲಿನ ಗುರು ವೃಂದ ಹಾಗೂ ಸಿಬ್ಬಂದಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎನ್ನುತ್ತಾರೆ ಶಾಲೆಯ ಹಳೆ ವಿದ್ಯಾರ್ಥಿಗಳ ಬಳಗ.
ಖಾಸಗಿ ವ್ಯಾನ್ ಮೂಲಕ ಮಕ್ಕಳು ಶಾಲೆಗೆ
ಸಂಜೀವನಗರ ಶಾಲೆಗೆ ಪಟ್ಟಣದ ಕೆಳಗೇರಿ, ಜನತಾ ಕಾಲೋನಿ ಮ್ಯಾಗೇರಿ, ರಾಘವೇಂದ್ರ ಕಾಲೋನಿ, ಬನಶಂಕರಿ ಬಡಾವಣೆ, ಎರಡ್ಮೂರು ಕಿ.ಮಿ ದೂರದ ಶಿವಾಜಿ ನಗರ ಸೇರಿದಂತೆ ದೂರದಿಂದ ಬರುವ ಮಕ್ಕಳಿಗೆ ಪಾಲಕರು ತಾವೆ ಸ್ವಯಿಚ್ಚೆಯಿಂದ ವಾಹನದ ಖರ್ಚು ಬರಿಸಿ ತಮ್ಮ ಮಕ್ಕಳ್ಳನ್ನು ಶಾಲೆಗೆ ವಾಹನಲ್ಲಿ ಕಳಿಸು ವ್ಯವಸ್ಥೆ ಮಾಡಿಕೊಂಡಿದ್ದಾರೆ.
![]()
ಮುಂಚಿನಿಂದಲೂ ಸಂಜೀವ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಪರಿಶ್ರಮ ಮತ್ತು ಸಮುದಾಯದ ಸಹಕಾರದಿಂದ ಮಕ್ಕಳ ದಾಖಲಾತಿ ಹೆಚ್ಚುತ್ತಿದೆ. ನಿರಂತರ ಸುಧಾರಣೆಗೆ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಪ್ರಸಕ್ತ ವರ್ಷದಿಂದ ಶಾಲೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಇಂಗ್ಲಿಷ್ ಮಾಧ್ಯಮದ ಕಲಿಕೆಯನ್ನು ಪ್ರಾರಂಭಿಸಿದ್ದು ಪಾಲಕರಲ್ಲಿ ಹೆಚ್ಚಿನ ಆಸಕ್ತಿ ಮೂಡಿದೆ.
-ಬಂದೇನವಾಜ್ ನಾಲತ್ವಾಡ್, ಸಮೂಹ ಸಂಪನ್ಮೂಲ ವ್ಯಕ್ತಿ