ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕೋಲಾರ
Kolar News: ಹಾಸ್ಟೆಲ್‌ನಲ್ಲಿ ದೆವ್ವ ಇದೆ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್‌!

ದೆವ್ವ ಇದೆ ಎಂದಿದ್ದಕ್ಕೆ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ವಾರ್ಡನ್‌

Kolar News: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ. ಮೂರಾಲ್ಕು ದಿನಗಳ ಹಿಂದೆ ಈ ಘಟನೆ ನಡೆದಿದ್ದ ಸೋಮವಾರ ಪೋಷಕರ ಸಭೆ ವೇಳೆ ಬೆಳಕಿಗೆ ಬಂದಿದೆ. ವಾರ್ಡನ್‌ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಯ ತಾಯಿ ಆಗ್ರಹಿಸಿದ್ದಾರೆ.

KY Nanjegowda: ಕಾಂಗ್ರೆಸ್ ಶಾಸಕ ನಂಜೇಗೌಡಗೆ ಇಡಿ ಶಾಕ್; 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಶಾಸಕ ನಂಜೇಗೌಡಗೆ ಇಡಿ ಶಾಕ್; 1.32 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ED: ಮಾಲೂರು ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಮತ್ತು ಇತರರಿಗೆ ಸೇರಿದ 1.32 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿಕೊಂಡಿದೆ. 2023ರಲ್ಲಿ ನಡೆದ ಕೋಮುಲ್ ನೇಮಕಾತಿ ಹಗರಣ ಸಂಬಂಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

NIA Raid: ಐದು ಕಡೆ ಎನ್‌ಐಎ ದಾಳಿ, ಮೂವರು ಶಂಕಿತ ಉಗ್ರರು ವಶಕ್ಕೆ

ಐದು ಕಡೆ ಎನ್‌ಐಎ ದಾಳಿ, ಮೂವರು ಶಂಕಿತ ಉಗ್ರರು ವಶಕ್ಕೆ

ದಾಳಿ ವೇಳೆ ಎನ್​ಐಎ ಅಧಿಕಾರಿಗಳು 2 ವಾಕಿಟಾಕಿ, ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಉಗ್ರರ ಚಟುವಟಿಕೆಗೆ ನೆರವು ನೀಡುತ್ತಿದ್ದ ಆರೋಪದಡಿ ಈ ಮೂವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು (Bengaluru) ಹಾಗೂ ಕೋಲಾರದಲ್ಲಿ (Kolar) ಒಟ್ಟು ಐದು ಕಡೆ ದಾಳಿ (NIA Raid) ಮಾಡಲಾಗಿದೆ.

Kolar News: ಮಾಜಿ ಸ್ಪೀಕರ್ ರಮೇಶ್ ಕುಮಾರ್ ತೋಟದಲ್ಲಿ ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು

Kolar News: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಬಳಿ ದುರಂತ ನಡೆದಿದೆ. ತೋಟದಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಮೇವು ಕತ್ತರಿಸುವ ಯಂತ್ರಕ್ಕೆ ಸಿಲುಕಿ ಮಹಿಳೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಗೌನಿಪಲ್ಲಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Self Harming: ಪ್ರೀತಿಸುತ್ತಿದ್ದಾಕೆಯೊಂದಿಗೆ ಮದುವೆಯಾದ ದಿನವೇ ಆತ್ಮಹತ್ಯೆಗೆ ಶರಣಾದ ನವವಿವಾಹಿತ; ಈ ದುರಂತ ಸಾವಿಗೆ ಕಾರಣವಾಗಿದ್ದೇನು?

ಪ್ರೀತಿಸುತ್ತಿದ್ದಾಕೆಯೊಂದಿಗೆ ಮದುವೆಯಾದ ದಿನವೇ ಆತ್ಮಹತ್ಯೆಗೆ ಶರಣಾದ ಯುವಕ

Kolar News: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆಯಾದ ಯುವಕ ಅದೇ ದಿನ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ. ಮದುವೆಯಾಗಲು ಸ್ವಲ್ಪ ದಿನಗಳ ಕಾಲಾವಕಾಶ ಕೋರಿದ್ದ ಆತನ್ನು ಬಲವಂತವಾಗಿ ಮದುವೆ ಮಾಡಿಸಿದ್ದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

Road Accident: ಕಾರು ಮರಕ್ಕೆ ಡಿಕ್ಕಿ, ಗರ್ಭಿಣಿ ರುಂಡ ಕತ್ತರಿಸಿ ಸಾವು

ಕಾರು ಮರಕ್ಕೆ ಡಿಕ್ಕಿ, ಗರ್ಭಿಣಿ ರುಂಡ ಕತ್ತರಿಸಿ ಸಾವು

Road Accident: ಅರ್ಚನಾ ಅವರ ಗ್ರಾಮ ಕೊರಚನೂರಿಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಎದುರಿಗೆ ವೇಗವಾಗಿ ಬಂದ ಲಾರಿ ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಅರ್ಚನಾ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದೆ. ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಾರೆ.

KY Nanjegowda: ಕೋಮುಲ್‌ ಚುನಾವಣೆ ವೇಳೆ ಹೈಡ್ರಾಮಾ; ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ರೇಗಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ!

ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ರೇಗಾಡಿದ ಕಾಂಗ್ರೆಸ್ ಶಾಸಕ ನಂಜೇಗೌಡ

KY Nanjegowda: ಕೋಲಾರದಲ್ಲಿ ಕೋಮುಲ್‌ ಚುನಾವಣೆ ವೇಳೆ ಘಟನೆ ನಡೆದಿದೆ. ಪ್ರವಾಸಕ್ಕೆ ಕರೆದೊಯ್ದಿದ್ದ ಮತದಾರರಲ್ಲಿ ಮೂವರು ನಾಪತ್ತೆಯಾಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಹೀಗಾಗಿ ಮತದಾರರ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರ ಕೆಲಸಕ್ಕೆ ಅಡ್ಡಿ ಪಡಿಸಿದ ಶಾಸಕ ನಂಜೇಗೌಡ, ಪೊಲೀಸರ ಮೇಲೆ ಕೂಗಾಡಿದ್ದಾರೆ.

Mango Price Drop: ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ; 2.5 ಲಕ್ಷ ಟನ್ ಮಾವು ಖರೀದಿಗೆ ನಿರ್ಧಾರ, ಬೆಲೆ ಎಷ್ಟು?

ಕರ್ನಾಟಕ ಮಾವು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ

Mango Price Drop: ಕರ್ನಾಟಕ ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಕ್ವಿಂಟಲ್‌ಗೆ 1,616 ರೂ.ಗಳಂತೆ ಗರಿಷ್ಠ 2,50,000 ಟನ್ ಮಾವು ಖರೀದಿಸಲು ಅನುಮೋದಿಸಲಾಗಿದೆ ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ ಎಂದು ಶಿವರಾಜ್‌ ಸಿಂಗ್ ಚೌಹಾಣ್ ಅವರು ಕುಮಾರಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Gold Suresh: ಬಿಗ್‌ಬಾಸ್‌ ಖ್ಯಾತಿಯ ಗೋಲ್ಡ್‌ ಸುರೇಶ್‌ ವಿರುದ್ಧ ಬರೋಬ್ಬರಿ 14 ಲಕ್ಷ ರೂ. ವಂಚನೆ ಕೇಸ್‌

ಗೋಲ್ಡ್‌ ಸುರೇಶ್‌ ವಿರುದ್ಧ ಬರೋಬ್ಬರಿ 14 ಲಕ್ಷ ರೂ. ವಂಚನೆ ಕೇಸ್‌

ರಾಯಚೂರಿನ ಮಾನ್ವಿ ಪಟ್ಟಣದ ಯುವಕ ಮೈನುದ್ದಿನ್ ಎಂಬಾತ ಗೋಲ್ಡ್‌ ಸುರೇಶ್‌ ವಿರುದ್ಧ ದೂರು ದಾಖಲಿಸಿದ್ದು, ಸುರೇಶ್‌ 14 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ಗಂಭೀರ ವಂಚನೆ ಆರೋಪ ಮಾಡಿದ್ದಾರೆ. ಸುರೇಶ್ ಅವರು ಕೇಬಲ್ ಚಾನೆಲ್​ನ ಸೆಟ್‌ ಅಪ್ ಮಾಡುವುದಾಗಿ ಹೇಳಿದ್ದರು. ಬರೋಬ್ಬರಿ 14 ಲಕ್ಷಕ್ಕೆ ಒಪ್ಪಂದ ಆಗಿತ್ತು. ಅಲ್ಲದೆ ಸುರೇಶ್ ನಾಲ್ಕು ಲಕ್ಷ ರೂಪಾಯಿ ಮುಂಗಡ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ ಏಳು ಲಕ್ಷ ರೂಪಾಯಿನ ಸುರೇಶ್​​ಗೆ ಮೈನುದ್ದೀನ್ ನೀಡಿದ್ದರು.

ATM Robbery: ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ; ಕೋಲಾರದಲ್ಲಿ 27 ಲಕ್ಷ ರೂ. ದೋಚಿದ ಕಳ್ಳರು

ಕೋಲಾರದಲ್ಲಿ ಎಸ್‌ಬಿಐ ಎಟಿಎಂನಿಂದ 27 ಲಕ್ಷ ರೂ. ದೋಚಿದ ಕಳ್ಳರು

Kolar News: ಕೋಲಾರದ ಗಲ್ ಪೇಟೆ ಪೋಲೀಸ್ ಠಾಣೆ ಸಮೀಪದ ಸಹಕಾರ ನಗರದಲ್ಲಿರುವ ಎಸ್​​ಬಿಐ ಎಟಿಎಂನಿಂದ ಕಳ್ಳಲು ಸೋಮವಾರ ಮುಂಜಾನೆ ಸುಮಾರು 27 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮಂದುವರಿದಿದೆ.

Viral News: ಚಾಕ್ಲೇಟ್‌ ಪ್ರಿಯರೇ, ಎಚ್ಚರ... ಎಚ್ಚರ! ಚಪ್ಪರಿಸಿಕೊಂಡು ತಿನ್ನೋ ಮುನ್ನ ಇದನ್ನೊಮ್ಮೆ ನೋಡಿ

ಚಾಕ್ಲೇಟ್‌ನಲ್ಲಿ ಮನುಷ್ಯನ ಹಲ್ಲು ಪತ್ತೆ!

Human Tooth found in Chocolate: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಗ್ರಾಮದ ಭಾರತೀ ಎಂಬುವವರು ಅಂಗಡಿಯೊಂದರಲ್ಲಿ ಟೂಟಿ ಫ್ರೂಟಿ ಎಂಬ ಚಾಕ್ಲೇಟ್ ಅನ್ನು ಖರೀದಿಸಿದ್ದರು. ಚಾಕ್ಲೆಟ್ ತಿನ್ನುವಾಗ ಅದರಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದೆ.

Mango, tomato sales: ಮಾವು, ಟೊಮೇಟೊ ಮಾರಾಟಕ್ಕೆ ವ್ಯವಸ್ಥೆ ಮಾಡಲು ವಿಶೇಷ ಸಮಿತಿ ರಚನೆಗೆ ಸರ್ಕಾರ ಆದೇಶ

ಮಾವು, ಟೊಮೇಟೊ ಮಾರಾಟಕ್ಕೆ ವ್ಯವಸ್ಥೆಗಾಗಿ ವಿಶೇಷ ಸಮಿತಿ ರಚನೆ

Mango, tomato sales: ಕೋಲಾರ ಜಿಲ್ಲೆಯಲ್ಲಿ ಮಾವು ಮತ್ತು ಟೊಮೇಟೊ ಬೆಲೆ ವಿವಿಧ ಕಾರಣಗಳಿಂದ ಕುಸಿತದಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿರುವುದರಿಂದ ಬೆಂಬಲ ಬೆಲೆ ನೀಡುವಂತೆ ಜಿಲ್ಲೆಯ ರೈತರು ಕೋರಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

Murder Case: ಕೋಲಾರದಲ್ಲಿ ಹೇಯ ಕೃತ್ಯ, 80ರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಲೆ

ಕೋಲಾರದಲ್ಲಿ ಹೇಯ ಕೃತ್ಯ, 80ರ ವೃದ್ಧೆಯ ಮೇಲೆ ಅತ್ಯಾಚಾರವೆಸಗಿ ಕೊಲೆ

ಆರೋಪಿ ಕೊಲೆ ಮಾಡಿ ಸ್ವಲ್ಪ ಹೊತ್ತು ಬಿಟ್ಟು ಅಲ್ಲೇನಾಗಿದೆ ಎಂದು ನೋಡಲು ವಾಪಸ್​ ಬಂದಿದ್ದ ಎನ್ನಲಾಗಿದೆ. ಈ ವೇಳೆ ಕಾರ್ಯ ಪ್ರವೃತ್ತರಾದ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ವೃದ್ಧೆಯ ಮೇಲೆ ಅತ್ಯಾಚಾರ ಮಾಡಿ ಬಳಿಕ ಹದಿನೈದು ಸಾವಿರ ರೂ ಹಣವನ್ನು ದೋಚಿರುವುದಾಗಿ ಒಪ್ಪಿಕೊಂಡಿದ್ದಾನೆ.

Car accident: ಆಂಧ್ರದಲ್ಲಿ ಭೀಕರ ಅಪಘಾತ; ಕಾರು ಬಾವಿಗೆ ಬಿದ್ದು ಕರ್ನಾಟಕದ ಮೂವರ ದುರ್ಮರಣ

ಆಂಧ್ರದಲ್ಲಿ ಕಾರು ಬಾವಿಗೆ ಬಿದ್ದು ಕರ್ನಾಟಕದ ಮೂವರ ದುರ್ಮರಣ

Car accident: ಅಡುಗೆ ಕೆಲಸಕ್ಕಾಗಿ ಕಾರಿನಲ್ಲಿ ಐವರು ತೆರಳುತ್ತಿದ್ದಾಗ ಭಾನುವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ವಾಹನವು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದು, ಕರ್ನಾಟಕ ಮೂಲದ ಮೂವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ.

Kothur Manjunath: ಆಪರೇಶನ್‌ ಸಿಂದೂರಕ್ಕೆ ವ್ಯಂಗ್ಯವಾಡಿದ ಕೊತ್ತೂರು ಮಂಜುನಾಥ್ ಈಗ ಉಲ್ಟಾ!

ಆಪರೇಶನ್‌ ಸಿಂದೂರಕ್ಕೆ ವ್ಯಂಗ್ಯವಾಡಿದ ಕೊತ್ತೂರು ಮಂಜುನಾಥ್ ಈಗ ಉಲ್ಟಾ!

ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಸ್ಪಷ್ಟನೆ ನೀಡಿದ್ದು, ಅಪರೇಷನ್ ಸಿಂದೂರ, ಸೇನೆ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೆ, ಆಪರೇಷನ್ ಸಿಂದೂರ ಕಾರ್ಯಾಚರಣೆ ಸಮಾಧಾನ ತಂದಿಲ್ಲ. ಕಾರ್ಯಾಚರಣೆ ಆರಂಭಿಸಿ, ಮೊಟಕುಗೊಳಿಸಿದ್ದು ನಿರಾಸೆ ತರಿಸಿದೆ ಎಂದಿದ್ದಾರೆ.

Operation sindoor: ಆಪರೇಷನ್ ಸಿಂದೂರ್ ಬಗ್ಗೆ ನಾಲಿಗೆ ಹರಿಬಿಟ್ಟ ಶಾಸಕ ಕೊತ್ತೂರು ಮಂಜುನಾಥ್‌ರನ್ನು ಕಾಂಗ್ರೆಸ್‌ನಿಂದ ವಜಾ ಮಾಡಿ: ಟಿ.ಎ. ಶರವಣ ಆಗ್ರಹ

ಕೊತ್ತೂರು ಮಂಜುನಾಥ್‌ರನ್ನು ಕಾಂಗ್ರೆಸ್ ವಜಾ ಮಾಡಬೇಕು: ಟಿ.ಎ. ಶರವಣ

Operation sindoor: ಸೈನಿಕರನ್ನು ಹೊತ್ತ ನಾಲ್ಕು ವಿಮಾನ ಹೋಗಿ ಬಾಂಬ್ ಹಾಕಿ ಬಂದರೆ ಪಾಕಿಸ್ತಾನಕ್ಕೆ ತಕ್ಕ ಪಾಠ ಹೇಗಾಗುತ್ತೆ? ಎಂದು ಕೇಳಿರುವ ಮಂಜುನಾಥ್ ನಿಲುವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸುತ್ತದೆಯೇ? ಇದು ಕಾಂಗ್ರೆಸ್ ಪಕ್ಷದ ನಿಲುವಾಗಿದೆಯೇ?‌ ಎಂದು ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ನಾಯಕ ಟಿ.ಎ. ಶರವಣ ಪ್ರಶ್ನಿಸಿದ್ದಾರೆ.

Pahalgam Terror Attack: ಪಹಲ್ಗಾಮ್ ದಾಳಿ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ವ್ಯಕ್ತಿ ವಿರುದ್ಧ ಕೇಸ್‌

ಉಗ್ರರ ದಾಳಿ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ವ್ಯಕ್ತಿ ವಿರುದ್ಧ ಕೇಸ್‌

Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು. ಆದರೆ, ಇದು ಬಿಹಾರ ಚುನಾವಣೆಯಲ್ಲಿ ಹಿಂದೂ ಮತಗಳ ಕ್ರೋಡೀಕರಿಸಲು ಮೋದಿ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ ಎಂದು ವ್ಯಕ್ತಿ ಹೇಳಿದ್ದ. ಯೂಟ್ಯೂಬ್ ಚಾನೆಲ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಹಿನ್ನೆಲೆಯಲ್ಲಿ ವ್ಯಕ್ತಿ ವಿರುದ್ದ ಪ್ರಕರಣ ದಾಖಲಾಗಿದೆ.

Murder Case: ಪ್ರಿಯತಮೆಯ ಕಣ್ಣ ಮುಂದೆಯೇ ರೌಡಿಶೀಟರ್‌ನ ಬರ್ಬರ ಕೊಲೆ

ಪ್ರಿಯತಮೆಯ ಕಣ್ಣ ಮುಂದೆಯೇ ರೌಡಿಶೀಟರ್‌ನ ಬರ್ಬರ ಕೊಲೆ

ಕೋಲಾರದ ಮಾರಿಕೊಪ್ಪಂನ ರಿವೀಟರ್ಸ್ ಲೈನ್ ನಿವಾಸಿ ಶಿವಕುಮಾರ್‌ನನ್ನು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಿಯತಮೆ ಜೊತೆ ಕಾಮಸಮುದ್ರಕ್ಕೆ ಹೋಗುತ್ತಿರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ನನ್ನ ಬೇರುಗಳಿರುವುದು ಕೋಲಾರದಲ್ಲಿ, ಈ ಮಣ್ಣಿನ ಋಣ ತೀರಿಸುತ್ತಿದ್ದೇನೆ: ಕೆ.ವಿ.ಪ್ರಭಾಕರ್

ಕೋಲಾರದ ಮಣ್ಣಿನ ಋಣ ತೀರಿಸುತ್ತಿದ್ದೇನೆ: ಕೆ.ವಿ.ಪ್ರಭಾಕರ್

KV Prabhakar: ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಕಲ್ಯಾಣಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಅನುದಾನ ಒದಗಿಸಿದ್ದಕ್ಕಾಗಿ ಸಂಘ ಮತ್ತು ನಾಗರಿಕ ಜನ ಸಂಘಟನೆಗಳಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿನಂದನೆ ಸ್ವೀಕರಿಸಿ ಮಾತನಾಡಿದ್ದಾರೆ.

KH Muniyappa: ಬಂಧಿಸ್ತೀವಿ ಎಂದ ಕೋರ್ಟ್‌, ಓಡೋಡಿ ಬಂದ ಸಚಿವ ಮುನಿಯಪ್ಪಗೆ ಜಾಮೀನು

ಬಂಧಿಸ್ತೀವಿ ಎಂದ ಕೋರ್ಟ್‌, ಓಡೋಡಿ ಬಂದ ಸಚಿವ ಮುನಿಯಪ್ಪಗೆ ಜಾಮೀನು

ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್‍ನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿ.ಶಂಕರ್ ಮೇಲೆ ಅಂದು ಸಂಸದರಾಗಿದ್ದ ಮುನಿಯಪ್ಪ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹಲ್ಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಮುನಿಯಪ್ಪ ಗೈರಾಗುತ್ತಿದ್ದರು. ಇದೀಗ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

Physical Abuse: ಕೋಲಾರದಲ್ಲಿ ಹೀನ ಕೃತ್ಯ; ಮಗಳ ಮೇಲೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ತಂದೆ!

ಮಗಳ ಮೇಲೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ ಕಾಮುಕ ತಂದೆ!

Physical Abuse: 20 ವರ್ಷದ ಮಗಳ ಮೇಲೆ 5 ತಿಂಗಳ ಕಾಲ ತಂದೆ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ. ಮಗಳ ದೂರಿನ ಮೇರೆಗೆ ಪೊಲೀಸರು ತಂದೆಯನ್ನು ಪೊಲೀಸ್‌ ಅರೆಸ್ಟ್ ಮಾಡಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Road Accident: ಖಾಸಗಿ ಬಸ್‌ಗಳು ಡಿಕ್ಕಿಯಾಗಿ ಒಬ್ಬ ಸಾವು, ಹಲವರಿಗೆ ಗಾಯ

ಖಾಸಗಿ ಬಸ್‌ಗಳು ಡಿಕ್ಕಿಯಾಗಿ ಒಬ್ಬ ಸಾವು, ಹಲವರಿಗೆ ಗಾಯ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಟಪಲ್ಲಿ ಕ್ರಾಸ್ ಎಂಬಲ್ಲಿ ಆಂಧ್ರಪ್ರದೇಶದ ಎರಡು ಖಾಸಗಿ ಬಸ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಂಧ್ರಪ್ರದೇಶದ ಮದನಪಲ್ಲಿಯ ಗಂಗಾಧರ್ ಎಂಬವರು ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.

Kolar News: ಮುಡಿ ಕೊಡುತ್ತೇನೆ, ಪ್ರದೀಪ ನಾನು ಬೇಗ ಒಂದಾಗಬೇಕು... ಚಿಕ್ಕ ತಿರುಪತಿ ಹುಂಡಿಯಲ್ಲಿ ಸಿಕ್ತು ಲವ್‌ಲೆಟರ್‌!

ಚಿಕ್ಕ ತಿರುಪತಿ ಹುಂಡಿಯಲ್ಲಿ ಸಿಕ್ತು ಲವ್‌ಲೆಟರ್‌! ಫುಲ್‌ ವೈರಲ್‌

ಯುವತಿಯೊಬ್ಬಳು ತನ್ನ ಪ್ರೀತಿ ಸಕ್ಸಸ್‌ಗೆ ಕೋರಿ ದೇವರ ಮೊರೆ ಹೋಗಿದ್ದಾಳೆ. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಚಿಕ್ಕತಿರುಪತಿ ದೇವಾಲಯದ ಹುಂಡಿ ಎಣಿಕೆ ವೇಳೆ ಸಿಕ್ಕ ಪತ್ರ ಇದಾಗಿದ್ದು, ಪತ್ರದಲ್ಲಿ ವೆಂಕಟರಮಣ ಸ್ವಾಮಿ...ತಿರುಪತಿ ತಿಮ್ಮಪ್ಪ, ನಾ ನಿನ್ನ ಸನ್ನಿಧಿಗೆ ಬಂದು ತಲೆ ಮುಡಿ ಕೊಡುತ್ತೇನೆ. ದಯವಿಟ್ಟು ಪ್ರದೀಪ ನಾನು ಬೇಗ ಒಂದಾಗಬೇಕು ಎಂದು ಬರೆದಿದ್ದಳು.

Road Accident: ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರು ಸಾವು

ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರು ಸಾವು

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿಯ ನೂತನ ಚೆನ್ನೈ-ಬೆಂಗಳೂರು ಕಾರಿಡಾರ್‌ ಹೆದ್ದಾರಿಯಲ್ಲಿ ಭಾನುವಾರ (ಮಾ. 2) ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮಹೇಶ (45), ಉದ್ವಿತ (2), ರತ್ನಮ್ಮ (60) ಹಾಗೂ ಬೈಕ್ ಸವಾರ ಶ್ರೀನಾಥ್ ಮೃತರು.

Loading...