79th Independence Day: ಬಾಗೇಪಲ್ಲಿಯಲ್ಲಿ ಸಡಗರದಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ
ನಾವೆಲ್ಲರೂ ಯಾವುದೋ ಸಿನಿಮಾ ನಟ ನಟಿಯರ ಅಭಿಮಾನಿ ಗಳಾಗುತ್ತೇವೆ ಆದರೆ ನನ್ನ ಪ್ರಕಾರ ದೇಶದ ಅಭಿಮಾನಿಯಾಗಬೇಕು ಭಾರತಮಾತೆಯ ಅಭಿಮಾನಿ ಯಾಗಬೇಕು ಆ ನಿಟ್ಟಿನಲ್ಲಿ ದೇಶಕ್ಕೆ ಗೌರವವನ್ನು ತೋರಿಸುವಂತ ಮನೋಭಾವ ಬೆಳೆಸಿಕೊಳ್ಳ ಬೇಕು. ಏಕೆಂದರೆ ಈ ದೇಶದ ಸ್ವಾತಂತ್ರ್ಯ ಕ್ಕಾಗಿ ಹಲವಾರು ದೇಶಾಭಿಮಾನಿಗಳು ತಮ್ಮ ಪ್ರಾಣವನ್ನ ತ್ಯಾಗ ಮಾಡಿ, ಪರಕಿಯರಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ.


ಬಾಗೇಪಲ್ಲಿ: ನನ್ನ ಮೊದಲ ಆದ್ಯತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೀಡಲಾಗುತ್ತದೆ ಎಂದು ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಣಣದ ಸರಕಾರಿ ಬಾಲಕಿಯರ ಪ್ರೌಡಶಾಲೆ ಆವರಣದಲ್ಲಿ ಶುಕ್ರವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ, ನಾನು ಶಾಸಕ ನಾಗಿ 13 ನೇ ವರ್ಷ ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸುತ್ತಿದ್ದೇನೆ. ಅಧಿಕಾರಕ್ಕಾಗಿ ಶಾಸಕನಾಗಿಲ್ಲ,ಒಬ್ಬ ರೈತನ ಮಗನಾಗಿ ಈ ಕ್ಷೇತ್ರದ ರೈತರ ಋಣ ತೀರಿಸಲು ಮುಂದಾಗಿದ್ದೇನೆ. ಹಾಗೇಯೆ ರೈತ ಮಕ್ಕಳು ಶಿಕ್ಷಣ ಪಡೆಯಬೇಕು. ಹಾಗಾಗಿ 17 ಹಾಸ್ಟೆಲ್ ಗಳನ್ನು ತಂದಿದ್ದೇನೆ. ಹಾಗೇಯೆ 3 ವಸತಿ ಶಾಲೆಗಳನ್ನು ತಂದಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: Independence Day: ಛತ್ತೀಸ್‌ಗಢದ 29 ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಾಟ
ದೇಶಾಭಿಮಾನಿಯಾಗಬೇಕು: ನಾವೆಲ್ಲರೂ ಯಾವುದೋ ಸಿನಿಮಾ ನಟ ನಟಿಯರ ಅಭಿಮಾನಿ ಗಳಾಗುತ್ತೇವೆ ಆದರೆ ನನ್ನ ಪ್ರಕಾರ ದೇಶದ ಅಭಿಮಾನಿಯಾಗಬೇಕು ಭಾರತಮಾತೆಯ ಅಭಿಮಾನಿ ಯಾಗಬೇಕು ಆ ನಿಟ್ಟಿನಲ್ಲಿ ದೇಶಕ್ಕೆ ಗೌರವವನ್ನು ತೋರಿಸುವಂತ ಮನೋಭಾವ ಬೆಳೆಸಿಕೊಳ್ಳ ಬೇಕು. ಏಕೆಂದರೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ದೇಶಾಭಿಮಾನಿಗಳು ತಮ್ಮ ಪ್ರಾಣವನ್ನ ತ್ಯಾಗ ಮಾಡಿ, ಪರಕಿಯರಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅಂತಹ ಮಹನೀಯರ ಆದರ್ಶ ಗಳನ್ನು ಪಾಲಿಸಬೇಕು ಎಂದು ಶಾಸಕರು ತಿಳಿಸಿದರು.
ಸಂಸದರಿಗೆ ಎಚ್ಚರಿಕೆ ಕೊಟ್ಟ ಶಾಸಕ
ಸಂಸದ ಡಾ.ಕೆ ಸುಧಾಕರ್ ರವರು ನೂತನ ಚೇಳೂರು ತಾಲೂಕಿನಲ್ಲಿ ಪ್ರಜಾಸೌಧ ನಿರ್ಮಿಸಲು ಪ್ರತಿಭಟನೆಯಲ್ಲಿ ಭಾಗವಹಿಸಿ, ಪಟ್ಟಣದಿಂದ ದೂರ ನಿರ್ಮಿಸಲು ಮುಂದಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರ ನಗರದಿಂದ ನಿಮ್ಮೂರು ಪೆರೇಸಂದ್ರ ಸಮೀಪ ಏಕೆ ನಿರ್ಮಿಸಿದ್ದೀರಿ? ನಿಮ್ಮ ಅನುಕೂಲಕ್ಕಲ್ಲವೇ? ಹಾಗಾಗಿ ಯಾವ ನೈತಿಕತೆಯಿಂದ ಪ್ರಶ್ನಿಸುತ್ತೀರಿ, ಮಾತನಾಡುವ ಜಾಗೃತೆಯಿಂದ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು. ಚೇಳೂರಿನಲ್ಲಿ ಸ್ಥಳದ ಕೊರತೆಯಿಂದ ದೂರ ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್. ಮನೀಷಾ ಮಹೇಶ್ ಪತ್ರಿ, ಇಒ ಜಿ.ವಿ. ರಮೇಶ್, ಆರೋಗ್ಯ ಇಲಾಖೆಯ ಡಾ,, ಸಿ.ಎನ್. ಸತ್ಯನಾರಾಯಣರೆಡ್ಡಿ, ಪುರಸಭೆ ಇಲಾಖೆಯ ಶ್ರೀನಿವಾಸ್, ಬಿಇಒ ವೆಂಕಟೇಶಪ್ಪ, ಶಿಶು ಅಭಿವೃದ್ಧಿ ಇಲಾಖೆಯ ರಾಮಚಂದ್ರ, ತೋಟಗಾರಿಕೆ ಇಲಾಖೆಯ ಲಲಿತ, ಅರಣ್ಯ ಇಲಾಖೆ ವಾಸುದೇವಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶಿವಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ, ಪುರಸಭೆ ಅಧ್ಯಕ್ಷರಾದ ಶ್ರೀನಿವಾಸ, ಉಪಾಧ್ಯಕ್ಷರಾದ ಸುಜಾತ ನರಸಿಂಹನಾಯ್ಡು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಮುಖಂಡರಾದ ಕೆ. ಸಿ.ಚಂದ್ರಶೇಖರರೆಡ್ಡಿ, ಬಿ.ವಿ. ವೆಂಕಟರವಣ, ಪುರಸಭಾ ಸದಸ್ಯರಾದ ಗಡ್ಡಂ ರಮೇಶ್, ಅಶೋಕ್ ರೆಡ್ಡಿ, ಆಂಜನೇಯರೆಡ್ಡಿ, ಗುಲ್ನಾಜ್ ಬೇಗಂ, ರೇಷ್ಮಾಭಾನು, ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು.