ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ಸೈಕಲ್‌ ರೈಡ್‌ ವೇಳೆ ವಿಧಾನಸೌಧದ ಮೆಟ್ಟಿಲ ಮೇಲೆ ಮುಗ್ಗರಿಸಿ ಬಿದ್ದ ಡಿಕೆಶಿ; ವಿಡಿಯೊ ಇದೆ

ಸೈಕಲ್‌ ಜಾಥಾದ ವೇಳೆ ಡಿಕೆ ಶಿವಕುಮಾರ್‌ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆಯೂ ನಡೆದಿದೆ. ಸೈಕಲ್‌ ನಿಯಂತ್ರಣ ತಪ್ಪಿ ಡಿಕೆಶಿ ವಿಧಾನಸೌಧದ ಮೆಟ್ಟಿಲಿಗಳ ಮೇಲೆ ಮುಗ್ಗರಿಸಿ ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ನಾಯಕರು ಹಾಗೂ ಸಿಬ್ಬಂದಿ ಡಿಕೆಶಿ ಅವರನ್ನು ಮೇಲಕ್ಕೆ ಎಬ್ಬಿಸಿದ್ದಾರೆ. ಅವರಿಗೆ ಡಿಸಿಎಂ ಅವರಿಗೆ ಯಾವುದೇ ಗಾಯಗಳಾಗಿಲ್ಲ.

ವಿಧಾನಸೌಧದ ಮೆಟ್ಟಿಲ ಮೇಲೆ ಮುಗ್ಗರಿಸಿ ಬಿದ್ದ ಡಿಕೆಶಿ

-

Rakshita Karkera
Rakshita Karkera Jun 17, 2025 12:14 PM

ಬೆಂಗಳೂರು: ಇಂದು ವಿಶ್ವ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬೆಂಗಳೂರಿನಲ್ಲಿ ಪರಿಸರ ನಡಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಚಾಲನೆ ಕೊಟ್ಟರು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಸರ ನಡಿಗೆ ಕಾರ್ಯಕ್ರಮ ಸಚಿವ ಈಶ್ವರ್‌ ಖಂಡ್ರೆ ಸಹಿತ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಡಿಕೆಶಿ ಹಾಗೂ ಇತರ ರಾಜಕೀಯ ಮುಖಂಡರು ಸೈಕಲ್‌ ಜಾಥಾ ಕೈಗೊಂಡಿದ್ದರು. ಈ ಜಾಥಾದಲ್ಲಿ ಸೈಕಲ್‌ ತುಳಿಯುವ ಮೂಲಕ ಡಿಕೆಶಿ ಬಹಳ ಉತ್ಸಾಹದಿಂದಲೇ ಭಾಗವಹಿಸಿದರು.



ಸೈಕಲ್‌ನಿಂದ ಕೆಳಕ್ಕೆ ಬಿದ್ದ ಡಿಕೆಶಿ

ಈ ಸೈಕಲ್‌ ಜಾಥಾದ ವೇಳೆ ಡಿಕೆ ಶಿವಕುಮಾರ್‌ ಆಯತಪ್ಪಿ ಕೆಳಗೆ ಬಿದ್ದಿರುವ ಘಟನೆಯೂ ನಡೆದಿದೆ. ಸೈಕಲ್‌ ನಿಯಂತ್ರಣ ತಪ್ಪಿ ಡಿಕೆಶಿ ವಿಧಾನಸೌಧದ ಮೆಟ್ಟಿಲಿಗಳ ಮೇಲೆ ಮುಗ್ಗರಿಸಿ ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದ ನಾಯಕರು ಹಾಗೂ ಸಿಬ್ಬಂದಿ ಡಿಕೆಶಿ ಅವರನ್ನು ಮೇಲಕ್ಕೆ ಎಬ್ಬಿಸಿದ್ದಾರೆ. ಅವರಿಗೆ ಡಿಸಿಎಂ ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಈ ಸುದ್ದಿಯನ್ನೂ ಓದಿ: RCB franchise: ನಾನೇನೂ ಹುಚ್ಚನಲ್ಲ: ಆರ್‌ಸಿಬಿ ಖರೀದಿ ಬಗ್ಗೆ ಡಿಕೆಶಿ ಶಾಕಿಂಗ್ ರಿಯಾಕ್ಷನ್!

ವಿಡಿಯೊ ಇಲ್ಲಿದೆ